Omicron variant fear : ಹೆಚ್ಚುತ್ತಿದೆ ಓಮಿಕ್ರಾನ್ ಆತಂಕ: ಆರೋಗ್ಯ ಇಲಾಖೆಯಿಂದ ಹೊಸ ಮಾರ್ಗಸೂಚಿ ಬಿಡುಗಡೆ

ಬೆಂಗಳೂರು : ರಾಜ್ಯದಲ್ಲಿ ನಿಧಾನಕ್ಕೆ ಕೊರೋನಾ ಮೂರನೇ ಅಲೆ ಹಾಗೂ ಓಮಿಕ್ರಾನ್ ಭೀತಿ (Omicron variant fear) ಹೆಚ್ಚುತ್ತಿದೆ. ಬೆಂಗಳೂರು ಏರ್ಪೊರ್ಟ್ ನಲ್ಲಿ ಹೈರಿಸ್ಕ್ ದೇಶದಿಂದ ಬಂದವರ ಮೇಲೆ ತೀವ್ರ ನಿಗಾ ಇಡಲಾಗುತ್ತಿದೆ. ಹೀಗಿದ್ದರೂ ಓಮಿಕ್ರಾನ್ ಆತಂಕ ನಗರದಲ್ಲಿದ್ದು ರಾಜ್ಯದಲ್ಲಿ ಓಮಿಕ್ರಾನ್ ಸೋಂಕಿತರ ಡಿಸ್ಚಾರ್ಜ್ ಗೆ ಅನುಸರಿಸಬೇಕಾದ ನಿಯಮಗಳ ಕುರಿತು ಆರೋಗ್ಯ ಇಲಾಖೆ ( Karnataka health department ) ಸ್ಪಷ್ಟ ನಿಯಮ ರೂಪಿಸಿದ್ದು ಮಾರ್ಗಸೂಚಿ ಬಿಡುಗಡೆ ( new guidelines ) ಮಾಡಿದೆ.

ಒಮಿಕ್ರಾನ್ ಸೋಂಕಿತರ ಡಿಸ್ಜಾರ್ಜ್ ಬಗ್ಗೆ ಆರೋಗ್ಯ ಇಲಾಖೆ ಮಾರ್ಗಸೂಚಿ ಪ್ರಕಟಿಸಿದೆ.ಈ ಮಾರ್ಗಸೂಚಿಯಲ್ಲಿ ಮೈಲ್ಡ್ ಒಮಿಕ್ರಾನ್ ರೋಗಿಗೆ ಡಿಸ್ಜಾರ್ಜ್ ಮಾಡಲು ಅನುಸರಿಬೇಕಾದ ನಿಯಮಗಳನ್ನು ಉಲ್ಲೇಖಿಸಿದೆ. ಕ್ಲಿನಿಕಲ್ ‌ಎಕ್ಸ್ ಪರ್ಟ್ ಕಮಿಟಿ ಒಮಿಕ್ರಾನ್ ವೈರಸ್ ರೋಗಿಗೆ ಡಿಸ್ಜಾರ್ಜ್ ಹೇಗೆ, ಯಾವಾಗ ಮಾಡಬೇಕು ಎಂದು ಮಾರ್ಗಸೂಚಿ ರೂಪಿಸಿದೆ.

ಯಾವುದೇ ರೀತಿಯ ರೋಗ ಲಕ್ಷಣಗಳು ಇಲ್ಲ ಅಂದರೆ 10 ದಿನಕ್ಕೆ ಡಿಸ್ಜಾರ್ಜ್ ಮಾಡಬಹುದು. ಆದರೆ 10ನೇ ದಿನಕ್ಕೆ ಡಿಸ್ಜಾರ್ಜ್ ಮಾಡಬೇಕು ಅಂದರೆ ಏನೆಲ್ಲ ಅಂಶಗಳನ್ನ ಪರಿಗಣಿಸಬೇಕು ಎಂಬುದನ್ನು ಗೈಡ್ ಲೈನ್ಸ್ ನಲ್ಲಿ ಸ್ಪಷ್ಟಪಡಿಸಿದೆ.

ಡಿಸ್ಜಾರ್ಜ್ ಆಗುವ ಮುನ್ನ ಮೂರು ದಿನದಲ್ಲಿ ಯಾವುದೇ ರೀತಿಯ ಜ್ವರ ಅಥವಾ ಯಾವುದೇ ರೋಗ ಲಕ್ಷಣ ಇರಬಾರದು. ಯಾವುದೇ ಆಕ್ಸಿಜನ್ ಸಪೋರ್ಟ್ ಇಲ್ಲದೇ 4 ದಿನಗಳ ಕಾಲ 95% ಆಕ್ಸಿಜನ್ ಲೆವೆಲ್ ಇದ್ದರೆ ಡಿಸ್ಜಾರ್ಜ್ ಮಾಡಬಹುದು.ಡಿಸ್ಜಾರ್ಜ್ ಆದ ಮೇಲೆ ರೋಗ ಲಕ್ಷಣ ಕಂಡು ಬಂದರೆ ಏನು ಮಾಡಬೇಕು ಏನೂ ತಗೋಬೇಕು ಅಂತಾ ಸಲಹೆ ನೀಡಬೇಕು ಎಂದು ಆರೋಗ್ಯ ಇಲಾಖೆ ಸೂಚಿಸಿದೆ.

ಅಲ್ಲದೇ ಒಮಿಕ್ರಾನ್ ರೋಗಿಗೆ ಡಿಸ್ಚಾರ್ಜ್ ಮಾಡಬೇಕಾದ್ರೆ ಎರಡು ಬಾರಿ ಆರ್ಟಿಪಿಸಿಆರ್ ಟೆಸ್ಟ್ ಮಾಡಿ ನೆಗೆಟಿವ್ ಇದ್ರೆ ಮಾತ್ರ ಡಿಸ್ಚಾರ್ಜ್ ಮಾಡಬೇಕು. ಒಂದು ವೇಳೆ ಆರ್ಟಿಪಿಸಿಆರ್ ಟೆಸ್ಟ್ ನಲ್ಲಿ ಪಾಸಿಟಿವ್ ಬಂದರೆ 48 ಗಂಟೆಗಳ ಬಳಿಕ ಮತ್ತೆ ಸ್ವಾಬ್ ಕಲೆಕ್ಟ್ ಮಾಡಿ ಆರ್ಟಿಪಿಸಿಆರ್ ಟೆಸ್ಟ್ ಮಾಡಬೇಕು

Omicron variant fear Karnataka health department release new guidelines 5

ಡಿಸ್ಸಾರ್ಜ್ ಆದ ವ್ಯಕ್ತಿಗೆ ಹೊಂ ಕ್ವಾರಂಟೈನ್ ಅಥವಾ ಸೆಲ್ಫ್ ಕ್ವಾರಂಟೈನ್ ನಲ್ಲಿ ಇರುವಂತೆ ಸೂಚನೆ ನೀಡಬೇಕು.ಹೋಂ ಕ್ವಾರಂಟೈನ್ ನಲ್ಲಿ ಇರುವ ವ್ಯಕ್ತಿಗೆ ಮತ್ತೆ 6ನೇ ದಿನಕ್ಕೆ ಆರ್ಟಿಪಿಸಿಆರ್ ಟೆಸ್ಟ್ ಮಾಡಬೇಕು ಎಂದು ಆರೋಗ್ಯ ಇಲಾಖೆ ಆದೇಶಿಸಿದೆ. ಓಮಿಕ್ರಾನ್ ನಿಯಂತ್ರಿಸಲು ಹಾಗೂ ರೋಗಿಗಳನ್ನು ಹೇಗೆ ಆಸ್ಪತ್ರೆಯಿಂದ ಬಿಡುಗಡೆ ಮಾಡಬೇಕು ಎಂಬುದರ ಬಗ್ಗೆ ಇಲಾಖೆ ರೂಪಿಸಿದ ನಿಯಮಗಳು ರಾಜ್ಯದ ಸರಿಯಾಗಿ ಪಾಲನೆಯಾದಲ್ಲಿ ಓಮಿಕ್ರಾನ್ ಹರಡುವಿಕೆ ತಡೆಯುವುದು ಸಾಧ್ಯವಾಗಲಿದೆ.

ಇದನ್ನೂ ಓದಿ : Hostel Guidelines :ಹಾಸ್ಟೆಲ್​ಗಳಿಗೆ ರಾಜ್ಯ ಸರ್ಕಾರದಿಂದ ಹೊಸ ಮಾರ್ಗಸೂಚಿ : ಶಾಲಾ-ಕಾಲೇಜು ಬಂದ್​ ವಿಚಾರದಲ್ಲಿಯೂ ಮಹತ್ವದ ಹೇಳಿಕೆ

ಇದನ್ನೂ ಓದಿ : School Close Karnataka : ಶಾಲೆಗಳ ಮೇಲೆ‌ ಮತ್ತೆ ಕೊರೊನಾ ಕರಿನೆರಳು: ಮತ್ತೆ ಬಾಗಿಲು‌ಮುಚ್ಚಲಿದೆ ಶಿಕ್ಷಣ ಸಂಸ್ಥೆಗಳು ?!

( Omicron variant fear Karnataka health department release new guidelines )

Comments are closed.