Omicron cases :ಓಮಿಕ್ರಾನ್ ರೂಪಾಂತರಿಯು ಹೆಚ್ಚು ಗಂಭೀರ ತೊಂದರೆಗಳನ್ನು ಉಂಟು ಮಾಡುವುದಿಲ್ಲ ಎಂದುಕೊಳ್ಳುತ್ತಿರುವಾಗಲೇ ವಿಶ್ವ ಆರೋಗ್ಯ ಸಂಸ್ಥೆಯು ಪ್ರಪಂಚಾದ್ಯಂತ ಕಾಡ್ಗಿಚ್ಚಿನಂತೆ ಹರಡುತ್ತಿರುವ ಕೋವಿಡ್ 19 ಓಮಿಕ್ರಾನ್ ರೂಪಾಂತರಿಯ ಬಗ್ಗೆ ಆಘಾತಕಾರಿ ಮಾಹಿತಿಯನ್ನು ಹೊರ ಹಾಕಿದೆ.
ಆಫ್ರಿಕಾದಲ್ಲಿ ಮೊದಲ ಬಾರಿಗೆ ಕಾಣಿಸಿಕೊಂಡ ಕೋವಿಡ್ 19ನ ಹೊಸ ರೂಪಾಂತರಿ ಓಮಿಕ್ರಾನ್ ಹರಡುತ್ತಿರುವ ವೇಗವನ್ನು ನೋಡಿದರೆ ಇದು ಶೀಘ್ರದಲ್ಲಿಯೇ ಹೆಚ್ಚೆಚ್ಚು ಹೊಸ ರೂಪಾಂತರಿಗಳ ಹೊರಹೊಮ್ಮುವಿಕೆಗೆ ಕಾರಣವಾಗುವ ಸಾಧ್ಯತೆ ದಟ್ಟವಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆಯು ಕಳವಳ ವ್ಯಕ್ತಪಡಿಸಿದೆ.
ಈ ವಿಚಾರವಾಗಿ ಮಾತನಾಡಿದ ವಿಶ್ವ ಆರೋಗ್ಯ ಸಂಸ್ಥೆಯ ಹಿರಿಯ ತುರ್ತು ಅಧಿಕಾರಿ ಕ್ಯಾಥರೀನ್ ಸ್ಮಾಲ್ವುಡ್ ಆರಂಭದ ದಿನಗಳಲ್ಲಿ ಓಮಿಕ್ರಾನ್ ಹೆಚ್ಚು ಗಂಭೀರ ಪರಿಣಾಮ ಉಂಟು ಮಾಡುವುದಿಲ್ಲ ಎಂದು ಭಾವಿಸಲಾಗಿತ್ತು. ಆದರೆ ಪ್ರಪಂಚದಾದ್ಯಂತ ಹೆಚ್ಚುತ್ತಿರುವ ಕೊರೊನಾ ಪ್ರಕರಣಗಳನ್ನು ನೋಡಿದರೆ ಇದು ಭೀಕರ ಪರಿಣಾಮವನ್ನು ಉಂಟು ಮಾಡುವ ಸಾಧ್ಯತೆ ದಟ್ಟವಾಗಿದೆ ಎಂದು ಹೇಳಿದರು.
ಓಮಿಕ್ರಾನ್ ಸೋಂಕು ಡೆಡ್ಲಿ ಅಥವಾ ಸಂಭಾವ್ಯ ಡೆಡ್ಲಿ ರೂಪಾಂತರಿಯಾಗಿದೆ. ಈ ಸೋಂಕು ಆರಂಭದಲ್ಲಿ ಗಂಭೀರ ಪರಿಣಾಮವನ್ನು ಉಂಟು ಮಾಡುವುದಿಲ್ಲ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದರು.ಹೀಗಾಗಿ ಇದೊಂದು ರೂಪಾಂತರಿ ಮುಗಿದ ಬಳಿಕ ವಿಶ್ವದಲ್ಲಿ ಸಾಂಕ್ರಾಮಿಕದ ಕಾಟ ಇರುವುದಿಲ್ಲ. ಜನಜೀವನ ಸಾಮಾನ್ಯ ಸ್ಥಿತಿಗೆ ಮರಳುತ್ತದೆ ಎಂದು ಎಲ್ಲರೂ ಭಾವಿಸಿದ್ದರು . ಆದರೆ ಏರುತ್ತಿರುವ ಸೋಂಕಿನ ಪ್ರಮಾಣವನ್ನು ನೋಡಿದರೆ ಇದು ಭೀಕರ ಪರಿಣಾಮವನ್ನು ಉಂಟು ಮಾಡುತ್ತದೆ ಎಂದು ಭಾವಿಸಬಹುದು ಎಂದು ಸ್ಮಾಲ್ವುಡ್ ಹೇಳಿದರು.
ಓಮಿಕ್ರಾನ್ ರೂಪಾಂತರಿಯು ಡೆಲ್ಟಾ ರೂಪಾಂತರಿಯಷ್ಟು ಗಂಭೀರ ಪರಿಣಾಮಗಳನ್ನು ಸೋಂಕಿತರಲ್ಲಿ ತೋರಿಸುತ್ತಿಲ್ಲ. ಆದರೆ ಇದು ಹರಡುವಿಕೆಯ ವೇಗವನ್ನು ನೋಡುತ್ತಿದ್ದರೆ ಇದು ಶೀಘ್ರದಲ್ಲಿಯೇ ಮತ್ತಷ್ಟು ಹೊಸ ರೂಪಾಂತರಿಗಳನ್ನು ಹುಟ್ಟು ಹಾಕುವ ಸಾಧ್ಯತೆ ದಟ್ಟವಾಗಿದೆ. ಈ ಹೊಸ ರೂಪಾಂತರಿಗಳು ಎಷ್ಟು ಭಯಾನಕ ಇರಬಹುದು ಎಂಬುದನ್ನು ಈಗಲೇ ಅಂದಾಜಿಸಲು ಸಾಧ್ಯವಿಲ್ಲ ಎಂದು ಸ್ಮಾಲ್ವುಡ್ ಹೇಳಿದರು.
ಕೊರೊನಾ ವೈರಸ್ ಆರಂಭವಾದಾಗಿನಿಂದ ಇಲ್ಲಿಯವರೆಗೆ ಯುರೋಪ್ನಲ್ಲಿ 100 ಮಿಲಿಯನ್ಗೂ ಅಧಿಕ ಪ್ರಕರಣಗಳು ವರದಿಯಾಗಿವೆ. ಆದರೆ 2021ರ ಕೊನೆಯ ವಾರದಲ್ಲೊಂದರಲ್ಲೇ 5 ಮಿಲಿಯನ್ಗೂ ಅಧಿಕ ಮಂದಿ ಸೋಂಕಿಗೆ ಒಳಗಾಗಿದ್ದಾರೆ. ಅಂದರೆ ಯುರೋಪ್ ಭಾಗಗಳಲ್ಲಿ ಸೋಂಕಿನ ಸಂಖ್ಯೆಯಲ್ಲಿ ಅತಿಯಾದ ಏರಿಕೆ ಕಂಡು ಬರುತ್ತಿರೋದನ್ನು ನಾವಿಲ್ಲಿ ಗಮನಿಸಬಹುದು. ಇದು ಮುಂದೆ ಯಾವ ರೀತಿಯ ಪರಿಣಾಮ ಉಂಟು ಮಾಡಬಹುದು ಎಂಬುದು ನಮಗೆ ತಿಳಿದಿಲ್ಲ ಎಂದು ಸ್ಮಾಲ್ವುಡ್ ಹೇಳಿದರು.
ಅಲ್ಲದೇ ಫ್ರಾನ್ಸ್ನಲ್ಲಿ ಈಗಾಗಲೇ ಕೋವಿಡ್ನ ಹೊಸ ರೂಪಾಂತರಿಯು ಪತ್ತೆಯಾಗಿದೆ. ಇದಕ್ಕೆ ತಾತ್ಕಾಲಿಕವಾಗಿ ಐಹೆಚ್ಯು ಎಂದು ಹೆಸರಿಡಲಾಗಿದೆ.
Spiralling Omicron cases could lead to more dangerous variants, warns WHO
ಇದನ್ನು ಓದಿ : fresh COVID cases : ದೇಶದಲ್ಲಿ ಒಂದೇ ದಿನ 58,097 ಹೊಸ ಕೋವಿಡ್ ಪ್ರಕರಣಗಳು ವರದಿ
ಇದನ್ನೂ ಓದಿ : VIMS Corona explosion : ವಿಮ್ಸ್ ವೈದ್ಯಕೀಯ ಕಾಲೇಜಿನಲ್ಲಿ ಕೊರೊನಾ ಸ್ಪೋಟ : 21 ವಿದ್ಯಾರ್ಥಿಗಳಿಗೆ ಕೊರೊನಾ ಸೋಂಕು