pushpa 2 ಸಿನಿಮಾದಲ್ಲಿ ಕನ್ನಡಿಗರ ಕಾರುಬಾರು : ರಶ್ಮಿಕಾಗೆ ಜೊತೆಯಾಗ್ತಾರಂತೆ ಕೃತಿ ಶೆಟ್ಟಿ

ತೆಲುಗಿನ ಬಹುನೀರಿಕ್ಷಿತ ಸಿನಿಮಾ ಪುಷ್ಪ ಈಗಾಗಲೇ ಇನ್ನೂರು ಕೋಟಿ ಆದಾಯ ಗಳಿಸಿದೆ ಎನ್ನಲಾಗಿದ್ದು ಯಶಸ್ವಿ ಪ್ರದರ್ಶನದ ಮೂಲಕ ಇನ್ನಷ್ಟು ಗಳಿಕೆ ಹೆಚ್ಚಿಸುವ ನೀರಿಕ್ಷೆ ಮೂಡಿಸಿದೆ. ಈ‌ ಮಧ್ಯೆ ಪುಷ್ಪ (pushpa 2) ಸಿಕ್ವೆನ್ಸ್ ಶೂಟಿಂಗ್ ಕೂಡ ಆರಂಭವಾಗುತ್ತಿದ್ದು ಮೊದಲ ಸಿನಿಮಾದಲ್ಲಿ ನಟಿಸಿದ್ದ ಕನ್ನಡತಿ ರಶ್ಮಿಕಾ (Rashmika Mandanna) ಜೊತೆ ದ್ವಿತೀಯ ಭಾಗದಲ್ಲು ಇನ್ನೊಬ್ಬ ಸ್ಯಾಂಡಲ್ ವುಡ್ (Krithi Shetty)ಬೆಡಗಿಯೂ ಅವಕಾಶ ಪಡೆದುಕೊಂಡಿದ್ದಾರೆ ಎಂಬ ಸಂಗತಿ ಚಿತ್ರತಂಡದಿಂದಲೇ ಹೊರಬಿದ್ದಿದೆ.

ಪುಷ್ಪ ಐಕಾನ್ ಸ್ಟಾರ್ ಅಲ್ಲೂ ಅರ್ಜುನ್ ನಟನೆಯ ಬಹುನೀರಿಕ್ಷಿತ ಸಿನಿಮಾ. ಆಂಧ್ರಪ್ರದೇಶದ ಹಳ್ಳಿಯಲ್ಲಿ ನಡೆಯುವ ರಕ್ತಚಂದನದ ಕಳ್ಳ ಸಾಗಾಣಿಕೆಯ ಕಥೆಯ ಸುತ್ತ ನಡೆಯೋ ಈ ಸಿನಿಮಾ ಸುಕುಮಾರ್ ನಿರ್ದೇಶನದಲ್ಲಿ ಅದ್ದೂರಿಯಾಗಿ ಮೂಡಿಬಂದಿದ್ದು, ಬಹು ಭಾಷೆಗಳಲ್ಲಿ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಸಾಮೇ ಸಾಮೇ ಎಂಬ ರಶ್ಮಿಕಾ‌ನಟನೆಯ ಹಾಗೂ ತೆಲುಗಿನ ಬೆಡಗಿ ಸಮಂತಾ ನಟನೆಯ ಊ ಅಂಟಾವಾ ಮಾವಾ ಉಹೂಂ ಅಂಟಾವಾ ಮಾವಾ ಹಾಡಂತೂ ಸಖತ್ ಮೋಡಿ‌ಮಾಡಿದ್ದು ಸಿನಿಮಾ‌ಗೆಲುವಿಗೆ ಕಾರಣವಾಗಿವೆ.

ಈ ಮಧ್ಯೆ ಸಿನಿಮಾದ ಎರಡನೇ ಭಾಗ ಏಪ್ರಿಲ್‌ನಲ್ಲಿ ತೆರೆಗೆ ಬರಲಿದೆ ಎನ್ನಲಾಗುತ್ತಿದ್ದು ಈಗಾಗಲೇ ಸಿನಿಮಾ‌ಶೂಟಿಂಗ್ ಆರಂಭಗೊಂಡಿದೆ‌. ಈ ಹೊತ್ತಿನಲ್ಲಿ ಕನ್ನಡಿಗರಿಗೆ ಮತ್ತೊಂದು ಸಿಹಿಸುದ್ದಿ ಸಿಕ್ಕಿದೆ. ಈಗಾಗಲೇ ಪುಷ್ಪ ಸಿನಿಮಾದಲ್ಲಿ ಕನ್ನಡತಿ ರಶ್ಮಿಕಾ ಮಂದಣ್ಣ ನಟಿಸಿದ್ದು, ಪ್ರೇಕ್ಷಕರ ಹಾಗೂ ನಿರ್ದೇಶಕ,ನಾಯಕ ಎಲ್ಲರಿಂದಲೂ ಹೊಗಳಿಸಿಕೊಂಡಿದ್ದಾರೆ.

ಈಗ ಪುಷ್ಪ ಭಾಗ ಎರಡರಲ್ಲಿ ಮತ್ತೊಬ್ಬ ಕನ್ನಡತಿ ಕೃತಿ ಶೆಟ್ಟಿ ನಟಿಸಲಿದ್ದಾರಂತೆ. ಉಪ್ಪೇನ್ ಸಿನಿಮಾದಲ್ಲಿ ನಟಿಸೋ ಮೂಲಕ ತೆಲುಗಿಗೆ ಪಾದಾರ್ಪಣೆ ‌ಮಾಡಿರೋ ಕೃತಿ ಶೆಟ್ಟಿಯನ್ನು ಈ ಸಿನಿಮಾಗಾಗಿ ಸ್ವತಃ ಸುಕುಮಾರ್ ಆಯ್ಕೆ ಮಾಡಿದ್ದಾರಂತೆ. ಉಪ್ಪೇನ್ ಸಿನಿಮಾವನ್ನು ಸುಕುಮಾರ್ ಸಹನಿರ್ಮಾಣ ಮಾಡಿದ್ದು ಆ ಸಿನಿಮಾದಲ್ಲಿ ಕೃತಿ ನಟನೆ‌ ನೋಡಿ ಸುಕುಮಾರ್ ತುಂಬ ಇಂಪ್ರೆಸ್ ಆಗಿದ್ದಾರಂತೆ. ಉಪ್ಪೇನ್ ಬಳಿಕ ಶ್ಯಾಮ್‌ಸಿಂಗ್ ರಾಯ್ ಹಾಗೂ ಬಂಗ್ರಾರಾಜು ಸಿನಿಮಾದಲ್ಲಿ ಕೃತಿ ಶೆಟ್ಟಿ ನಟಿಸಿದ್ದು, ತೆಲುಗಿನ ಪ್ರೇಕ್ಷಕರ ಮನಗೆದ್ದಿದ್ದಾರೆ.

ಹೀಗಾಗಿ ಪುಷ್ಪ-2 ದಲ್ಲಿ ಕೃತಿ ಕೂಡ ಮಿಂಚಲಿದ್ದಾರಂತೆ. ಇನ್ನು ಈ ಕುರಿತು ಪ್ರತಿಕ್ರಿಯೆ ನೀಡಿರೋ ಕೃತಿ ಶೆಟ್ಟಿ ನನಗೆ ಈ ಬಗ್ಗೆ ಇನ್ನೂ ಅಧಿಕೃತ ಆಹ್ವಾನ ಬಂದಿಲ್ಲ.‌ಒಂದೊಮ್ಮೆ ಸುಕುಮಾರ್ ಸಿನಿಮಾದಲ್ಲಿ ನಟಿಸುವ ಅವಕಾಶ ಸಿಕ್ಕರೇ ಖಂಡಿತಾ ಒಪ್ಪಿಕೊಳ್ಳುತ್ತೇನೆ. ನನಗೂ ಅಕ್ಷ್ಯನ್ ಸಿನಿಮಾದಲ್ಲಿ ನಟಿಸುವ ಆಸೆ ಇದೆ ಎಂದು ಕೃತಿ ಶೆಟ್ಟಿ ಹೇಳಿದ್ದಾರೆ. ಒಟ್ಟಿನಲ್ಲಿ ಪುಷ್ಪ-2 ಸಿನಿಮಾದಲ್ಲಿ ಕನ್ನಡಿಗರದ್ದೇ ಪಾರುಪತ್ಯವಾಗಿದ್ದು ವಿಲನ್ ಪಾತ್ರದಲ್ಲಿ ಡಾಲಿ ಧನಂಜಯ್ ಹಾಗೂ ನಾಯಕಿಯರಾಗಿ ರಶ್ಮಿಕಾ ಹಾಗೂ ಕೃತಿ ಕಾಣಿಸಿಕೊಳ್ಳಲಿದ್ದಾರಂತೆ.

ಇದನ್ನೂ ಓದಿ : ಜನಮೆಚ್ಚುಗೆ ಗಳಿಸಿದ್ದ ಟೈಗರ್ ಪ್ರಭಾಕರ್ ಹೆಸರಿಗೆ ‘ಟೈಗರ್’ ಸೇರಿಕೊಂಡಿದ್ದು ಹೇಗೆ?

ಇದನ್ನೂ ಓದಿ : ದೇಶದ ಗಡಿ ದಾಟಿದ ರಾಜಕುಮಾರ : ಶ್ರೀಲಂಕಾದಲ್ಲಿ ಪುನೀತ್ ರಾಜ್ ಕುಮಾರ್ ಗೆ ಸಿಕ್ತು ವಿಶೇಷ ಗೌರವ

(Kriti Shetty Acting as a with Rashmika in Allu Arjun pushpa 2 movie)

Comments are closed.