Year-end, Christmas vacation : ರಾಜ್ಯದಲ್ಲಿ ಕೊರೋನಾ ಸದ್ದಿಲ್ಲದೇ ಸಂಖ್ಯೆ ಏರಿಸಿಕೊಳ್ಳತೊಡಗಿದೆ. ಅದರಲ್ಲೂ ರಾಜ್ಯದ ರಾಜಧಾನಿ ಬೆಂಗಳೂರಿನಲ್ಲಿ ಈಗಾಗಲೇ ಕೊರೋನಾಕ್ಕೆ ಎರಡು ಸಾವಾಗಿದ್ದು, ಮತ್ತಷ್ಟು ಸಾವುನೋವಿನ ಸಂಖ್ಯೆ ಏರುವ ಸಾಧ್ಯತೆ ಇದೆ. ಈ ಮಧ್ಯೆ ವರ್ಷಾಂತ್ಯ ಹಾಗೂ ಕ್ರಿಸ್ಮಸ್ ರಜೆಗೆ ಈಗಾಗಲೇ ರಾಜಧಾನಿ ಬೆಂಗಳೂರು ಮಂದಿ ಸಿಟಿ ಬಿಟ್ಟು ಊರುಗಳು ಹಾಗೂ ಪ್ರವಾಸಿ ತಾಣಗಳತ್ತ ಮುಖಮಾಡ್ತಿದ್ದು ಕೊರೊನಾ ವೈರಸ್ (Covid-19) ಮತ್ತಷ್ಟು ಹೆಚ್ಚುವ ಭೀತಿ ಎದುರಾಗಿದೆ.
ಕೊರೋನಾ ಮತ್ತೆ ದೇಶದಾದ್ಯಂತ ಸದ್ದು ಮಾಡಲಾರಂಭಿಸಿದೆ. ಅದರಲ್ಲೂ ಗೋವಾ,ಕೇರಳ ಸೇರಿದಂತೆ ಕರ್ನಾಟಕದ ಪಕ್ಕದ ರಾಜ್ಯಗಳಲ್ಲಿ ಕೊರೋನಾ ಸೋಂಕಿತರ ಸಂಖ್ಯೆಯಲ್ಲಿ ಏರಿಕೆಯಾಗಿದೆ. ಈ ಮಧ್ಯೆ ವರ್ಷಾಂತ್ಯ ಹಾಗೂ ಕ್ರಿಸ್ಮಸ್ ಹಿನ್ನೆಲೆಯಲ್ಲಿ ಸರಣಿ ರಜೆಗಳು ಉದ್ಯೋಗಿಗಳು ಹಾಗೂ ಪೋಷಕರಿಗೆ ಖುಷಿ ತಂದಿದೆ. ಹೀಗಾಗಿ ಬೆಂಗಳೂರಿನಿಂದ ಕೇರಳಸೇರಿದಂತೆ ವಿವಿಧ ರಾಜ್ಯಗಳಿಗೆ ಸಾವಿರಾರು ಟಿಕೆಟ್ ಬುಕ್ ಆಗಿವೆ.

ಗೋವಾ, ಕೇರಳ, ಮಹಾರಾಷ್ಟ್ರದ ಸಾವಿರಾರು ಜನರು ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಅವರೆಲ್ಲ ರಜೆಗಾಗಿ ತಮ್ಮ ತಮ್ಮ ಊರುಗಳತ್ತ ಮುಖಮಾಡಿದ್ದಾರೆ. ಹೀಗಾಗಿ ರಜೆ ಮುಗಿಸಿ ಬೆಂಗಳೂರಿಗೆ ವಾಪಸ್ಸಾಗುವಾಗ ಮತ್ತೆ ತಮ್ಮೊಂದಿಗೆ ಕೊರೋನಾವನ್ನು ಹೊತ್ತು ತರುತ್ತಾರೆ ಅನ್ನೋ ಆತಂಕ ರಾಜಧಾನಿ ಮಂದಿಗೆ ಎದುರಾಗಿದೆ.
ಇದನ್ನೂ ಓದಿ : ಭಾರತದಲ್ಲಿ ಕೊರೊನಾ ಭೀತಿ, ಜಾರಿಯಾಗುತ್ತಾ ಲಾಕ್‌ಡೌನ್ ? ಸರಕಾರ ಮಾರ್ಗಸೂಚಿಯಲ್ಲೇನಿದೆ ?
ಸಾಲು ಸಾಲು ರಜೆಯ ಹಿನ್ನೆಲೆಯಲ್ಲಿ ಬೆಂಗಳೂರಿನಿಂದ ಹೊರ ರಾಜ್ಯ ಹಾಗೂ ಬೇರೆ ಜಿಲ್ಲೆಗಳಿಗೆ ಸಾವಿರಾರು ಟಿಕೇಟ್ ಬುಕ್ ಆಗಿವೆ. ಈ ಪೈಕಿ ಬೆಂಗಳೂರಿನಿಂದ ಗೋವಾಕ್ಕೆ 200 ಕ್ಕೂ ಹೆಚ್ಚು ಬಸ್ ಸೇವೆ ಒದಗಿಸಲಾಗುತ್ತಿದೆ. ಈ ಪೈಕಿ 3000 ಸಾವಿರಕ್ಕೂ ಅಧಿಕ ಟಿಕೇಟ್ ಗಳು ಈಗಾಗಲೇ ಬುಕ್ ಆಗಿದೆ.
ಇನ್ನು ಬೆಂಗಳೂರು ಟೂ ಕೇರಳಕ್ಕೆ ಅಂದಾಜು 250 ಕ್ಕೂ ಅಧಿಕ ಬಸ್ ಸಂಚರಿಸಲಿದ್ದು, ಈಪೈಕಿ ಐದು ಸಾವಿರಕ್ಕೂ ಅಧಿಕ ಟಿಕೇಟ್ ಬುಕ್ ಆಗಿದೆ. ಅದರಲ್ಲೂ ಕೇರಳ ಶಬರಿಮಲೆ ಯಾತ್ರೆಗೆ ಅಧಿಕ ಟಿಕೇಟ್ ಬುಕ್ ಮಾಡಲಾಗಿದೆ. ಬೆಂಗಳೂರಿನಿಂದ ಮಹಾರಾಷ್ಟ್ರದ ವಿವಿಧೆಡೆಗೆ ಅಂದಾಜು 250 ಕ್ಕೂ ಹೆಚ್ಚು ಬಸ್ ಗಳು ಸಂಚರಿಸಲಿದ್ದು, ಇದರಲ್ಲಿ 3500 ಕ್ಕೂ ಅಧಿಕ ಪ್ರಯಾಣಿಕರು ಟಿಕೇಟ್ ಕಾಯ್ದಿರಿಸಿದ್ದಾರೆ.
ಇದನ್ನೂ ಓದಿ : LPG eKYC : ಎಲ್‌ಪಿಜಿ ಗ್ಯಾಸ್ ಸಬ್ಸಿಡಿ ಪಡೆಯಲು ಮನೆಯಿಂದಲೇ ಮಾಡಿ ಇಕೆವೈಸಿ
ಪ್ರತಿನಿತ್ಯ ಬೇರೆ ಬೇರೆ ರಾಜ್ಯ ಹಾಗೂ ಜಿಲ್ಲೆಗೆ ಸಾವಿರಾರು ಬಸ್ ಸಂಚರಿಸುತ್ತದೆ. ಇದನ್ನು ಹೊರತು ಪಡಿಸಿ ಸಾಮೂಹಿಕ ರಜೆಯ ಹಿನ್ನೆಲೆಯಲ್ಲಿ ವಿಶೇಷ ಬಸ್ ಗಳನ್ನು ಬಿಡಲಾಗುತ್ತಿದೆ. ಆದರೆ ಇವೆಲ್ಲವುಗಳಿಂದ ಜನರ ಸಂಚಾರವೂ ಹೆಚ್ಚಲಿದ್ದು, ರಜೆ ಬಳಿಕ ಜನವರಿ ಮೊದಲ ವಾರದ ವೇಳೆಗೆ ಬೆಂಗಳೂರಿಗೆ ಕೊರೋನಾ ರೂಪಾಂತರಿ ಕಾಟ ಉಲ್ಬಣಿಸಲಿದ್ಯಾ ಅನ್ನೋ ಆತಂಕ ಎದುರಾಗಿದೆ.

ಕೇರಳ ಸೇರಿದಂತೆ ಹಲವು ರಾಜ್ಯದಲ್ಲಿ ಕೊರೋನಾ ಬಹುಬೇಗ ವ್ಯಾಪಿಸುತ್ತಿದೆ. ಹೀಗಾಗಿ ರಜೆ ಬೆಂಗಳೂರಿನ ಪಾಲಿಗೆ ತಲೆನೋವಾಗಿ ಪರಿಣಮಿಸುವ ಸಾಧ್ಯತೆ ದಟ್ಟವಾಗಿದೆ. ಮಾಸ್ಕ್ ಗಳನ್ನು ಧರಿಸುವಂತೆ ಸರ್ಕಾರ ಮನವಿ ಮಾಡಿದ್ದರೂ ಜನರು ಯಾವುದನ್ನೂ ಗಂಭೀರವಾಗಿ ತೆಗೆದುಕೊಂಡಂತಿಲ್ಲ. ಹೀಗಾಗಿ ಸಹಕವಾಗಿಯೇ ಕೊರೋನಾ ಸ್ಪೈಕ್ ಆಗೋ ಮುನ್ಸೂಚನೆ ಇದೆ.
ಈಗಾಗಲೇ ಬಿಬಿಎಂಪಿ,ಸಿಎಂ,ಡಿಸಿಎಂ ಸರಣಿ ಸಭೆಗಳನ್ನು ನಡೆಸಿದ್ದು ಕೊರೋನಾ ನಿಯಂತ್ರಣಕ್ಕೆ ಕೈಗೊಳ್ಳಬೇಕಾದ ಕ್ರಮಗಳ ಜೊತೆ ಎಚ್ಚರಿಕೆಯ ಸೂಚನೆಗಳನ್ನು ಜನರಿಗೆ ನೀಡಿದೆ. ಆದರೂ ಸರಣಿ ರಜೆ ಜನರು ಹಾಗೂ ಸರ್ಕಾರದ ಪಾಲಿಗೆ ಬಿಸಿತುಪ್ಪವಾಗೋ ಮುನ್ಸೂಚನೆ ಸಿಕ್ತಿದೆ.
ಇದನ್ನೂ ಓದಿ : ಪನೀರ್ ಖಾದ್ಯ ಖಾಲಿಯಾಗಿದ್ದಕ್ಕೆ ಮದುವೆ ಮನೆಯಲ್ಲಿ ಜಗಳವಾಡಿದ ಅತಿಥಿಗಳು : ವಿಡಿಯೋ ವೈರಲ್
ಈಗಾಗಲೇ ಬೆಂಗಳೂರಿನಲ್ಲಿ ಕೊರೋನಾ ಸಂಖ್ಯೆ ಶತಕ ದಾಟಿ ಮುನ್ನಡೆದಿದ್ದು ಸಾವಿರ ಸಂಖ್ಯೆ ಕಳೆದ ಒಂದು ವಾರದಲ್ಲೇ ನಾಲ್ಕರ ಗಡಿ ದಾಟಿದೆ. ಸಕ್ರಿಯ ಪ್ರಕರಣಗಳ ಸಂಖ್ಯೆಯೂ ಶತಕದ ಅಂಚಿನಲ್ಲಿದೆ. ಹೀಗಾಗಿ ಬೆಂಗಳೂರಿನ ಪಾಲಿಗೆ ಸಾಲು ಸಾಲು ರಜೆಯೇ ಕಂಟಕವಾಗೋ ಲಕ್ಷಣವಿದೆ.
Year-end, Christmas vacation amid Corona Fear of infection in Bangalore due to tourists