ಇಂಗ್ಲೆಂಡ್ ಕ್ರಿಕೆಟ್ ತಂಡಕ್ಕೆ ಮುಳುವುಯ್ತಾ ಮದ್ಯದ ನಶೆ..!? ಕುಡಿದ ಮತ್ತಲ್ಲಿ ಮ್ಯಾಚ್ ಸೋತರಾ ಆಂಗ್ಲಪಡೆ !
ಆಸ್ಟ್ರೇಲಿಯಾ ವಿರುದ್ಧ ನಡೆದ ಆಶಸ್ ಟೆಸ್ಟ್ ಸರಣಿಯ ಮತ್ತೊಂದು ಪಂದ್ಯದಲ್ಲಿ ಇಂಗ್ಲೆಂಡ್ ಸೋಲನ್ನು ಕಂಡಿತ್ತು. ಆದರೆ ಈಗ ಇಂಗ್ಲೆಂಡ್ ತಂಡದ ಆಟಗಾರರ ವಿರುದ್ಧ ಗಂಭೀರ ಆರೋಪವೊಂದು ಕೇಳಿ ಬಂದಿದೆ. ಮೂರನೇ ಟೆಸ್ಟ್ ಪಂದ್ಯದಲ್ಲಿ ಸೋತು ಸರಣಿ ಕಳೆದುಕೊಂಡಿದ್ದ ಆಂಗ್ಲರ ವಿರುದ್ಧ ಇದೀಗ ಇಂಗ್ಲೆಂಡ್ ಕ್ರಿಕೆಟ್ ಬೋರ್ಡ್ ತನಿಖೆ ಆರಂಭಿಸಿದೆ.
ವಿರಾಮದ ಸಮಯದಲ್ಲಿ ಇಂಗ್ಲೆಂಡ್ ತಂಡದ ನಾಯಕ ಬೆನ್ ಸ್ಟೋಕ್ಸ್ ಸೇರಿದಂತೆ ತಂಡದ ಇತರೆ ಆಟಗಾರರು ಮದ್ಯ ಸೇವನೆ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಆಸ್ಟ್ರೇಲಿಯಾ ವಿರುದ್ಧದ ಆಶಸ್ ಸರಣಿಯ ವೇಳೆ ರೆಸಾರ್ಟ್‌ನಲ್ಲಿ ರಜೆಯಲ್ಲಿದ್ದಾಗ ಇಂಗ್ಲೆಂಡ್ ತಂಡದ ಆಟಗಾರರು ಅತಿಯಾಗಿ ಮದ್ಯ ಸೇವನೆ ಮಾಡಿದ್ದಾರೆ ಎಂದು ವರದಿಗಳಾಗಿವೆ. ಈ ಸಂಬಂಧ ಇಂಗ್ಲೆಂಡ್ ಪುರುಷರ ಕ್ರಿಕೆಟ್ ತಂಡದ ವ್ಯವಸ್ಥಾಪಕ ನಿರ್ದೇಶಕ ರಾಬ್ ಕೀ ಅವರು ಇಂಗ್ಲೆಂಡ್ ತಂಡದ ಮದ್ಯ ಸೇವನೆಯ ಬಗ್ಗೆ ತನಿಖೆ ನಡೆಸುವುದಾಗಿ ಹೇಳಿದ್ದಾರೆ.ಮೂರನೇ ಟೆಸ್ಟ್ ಆರಂಭಕ್ಕೂ ಮುನ್ನ ವಿರಾಮದ ಸಂದರ್ಭದಲ್ಲಿ ಇಂಗ್ಲೆಂಡ್ ಆಟಗಾರರು ವಿರಾಮದ ಸಮಯದಲ್ಲಿತ್ತು. ಈ ವೇಳೆ ಇಂಗ್ಲೆಂಡ್ ಆಟಗಾರರು ಬ್ರಿಸ್ಬೇನ್‌ನ ಉತ್ತರದಲ್ಲಿರುವ ನೂಸಾ ಪಟ್ಟಣದ ರೆಸಾರ್ಟ್‌ನಲ್ಲಿ ನಾಲ್ಕು ರಾತ್ರಿಗಳನ್ನು ಕಳೆದಿದ್ದರು. ಇದು ಅವರ ಪ್ರಯಾಣದ ವಿವರಗಳ ಭಾಗವಾಗಿತ್ತು. ಅವರು ವಿರಾಮ ತೆಗೆದುಕೊಂಡ ಬಗ್ಗೆ ತಕರಾರಿಲ್ಲ. ಆದರೆ ಆಟಗಾರರು ಅತಿಯಾದ ಮದ್ಯ ಸೇವಿಸಿದ್ದಾರೆಂದು ಬೆಳಕಿಗೆ ಬಂದರೆ, ಅದು ಸ್ವೀಕಾರಾರ್ಹವಲ್ಲ ಎಂದು ಹೇಳಿದ್ದಾರೆ.
ಇದನ್ನೂ ಓದಿ: Vijay Hazare Trophy: ರೋಹಿತ್ ಶರ್ಮಾ ಅಬ್ಬರದ 155 ರನ್; ಸಿಕ್ಕಿಂ ವಿರುದ್ಧ ಮುಂಬೈಗೆ 8 ವಿಕೆಟ್‌ಗಳ ಭರ್ಜರಿ ಜಯ



