ಐಪಿಎಲ್ ನಲ್ಲಿ ವೈಫಲ್ಯ, ಸ್ಪೋಟಕ ಆಟವಾಡಿದ ಆಸೀಸ್‌ಗೆ ಗೆಲುವು ಕೊಟ್ಟ ಗ್ಲೇನ್‌ ಮ್ಯಾಕ್ಸ್‌ವೆಲ್‌

Glenn Maxwell AUS vs SA T20 : ಇಂಡಿಯನ್‌ ಪ್ರೀಮಿಯರ್‌ ಲೀಗ್‌ 2025ರಲ್ಲಿ ಬ್ಯಾಟಿಂಗ್‌ನಲ್ಲಿ ವೈಫಲ್ಯ ಅನುಭವಿಸಿದ್ದ ಆಸ್ಟ್ರೇಲಿಯಾದ ಆಟಗಾರ ಗ್ಲೇನ್‌ ಮ್ಯಾಕ್ಸ್‌ವೆಲ್‌ ಆರ್ಭಟಕ್ಕೆ ಕ್ರಿಕೆಟ್‌ ಜಗತ್ತೇ ಮಂಕಾಗಿದೆ.

ದಕ್ಷಿಣ ಆಫ್ರಿಕಾ ವಿರುದ್ದದ ಟಿ20 ಸರಣಿಯ ನಿರ್ಣಾಯಕ ಪಂದ್ಯದಲ್ಲಿ ಅದ್ಬುತ ಪ್ರದರ್ಶನ ನೀಡುವ ಮೂಲಕ ಗೆಲುವು ತಂದುಕೊಟ್ಟಿದ್ದಾರೆ. ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಖ್ಯಾತ ಆಲ್‌ರೌಂಡರ್ ಗ್ಲೆನ್ ಮ್ಯಾಕ್ಸ್‌ವೆಲ್‌ (62* ರನ್) ಆರ್ಭಟಿಸಿದ್ದಾರೆ.

ಮ್ಯಾಕ್ಸ್‌ವೆಲ್‌ ಅವರ ಅಬ್ಬರದ ಬ್ಯಾಟಿಂಗ್‌ನಿಂದಾಗಿ ದಕ್ಷಿಣ ಆಫ್ರಿಕಾ ವಿರುದ್ಧದ ಮೂರನೇ ಮತ್ತು ಕೊನೆಯ ಟಿ20 ಪಂದ್ಯದಲ್ಲಿ ಆಸ್ಟ್ರೇಲಿಯಾ ರೋಚಕ ಗೆಲುವು ಸಾಧಿಸಿದೆ. ಈ ಗೆಲುವಿನೊಂದಿಗೆ ಆಸ್ಟ್ರೇಲಿಯಾ ಸರಣಿಯನ್ನು 2-1ರಿಂದ ಕೈವಶ ಮಾಡಿದೆ.

ಪಂದ್ಯದ ಕೊನೆಯ ಓವರ್‌ನಲ್ಲಿ 10 ರನ್‌ಗಳ ಅಗತ್ಯವಿದ್ದಾಗ, ಮ್ಯಾಕ್ಸ್‌ವೆಲ್‌ ಒತ್ತಡವನ್ನು ಮೆಟ್ಟಿ ನಿಂತು ತಂಡಕ್ಕೆ ವಿಜಯದ ಹಾದಿ ತೋರಿಸಿದರು. ಆಸ್ಟ್ರೇಲಿಯಾ ತಂಡದ ಪರವಾಗಿ ಅತ್ಯುತ್ತಮ ಬ್ಯಾಟಿಂಗ್‌ ಪ್ರದರ್ಶನ ನೀಡಿದ್ದಾರೆ.

ಗ್ಲೆನ್ ಮ್ಯಾಕ್ಸ್‌ವೆಲ್‌ ಅವರು ಕೇವಲ 36 ಎಸೆತಗಳಲ್ಲಿ 8 ಬೌಂಡರಿ ಮತ್ತು 2 ಸಿಕ್ಸರ್‌ಗಳ ಸಹಾಯದಿಂದ ಅಜೇಯ 62 ರನ್ ಗಳಿಸಿ, ಪಂದ್ಯವನ್ನು ಒಂದು ಎಸೆತ ಇರುವಾಗಲೇ ಮುಕ್ತಾಯಗೊಳಿಸಿದರು.

ದಕ್ಷಿಣ ಆಫ್ರಿಕಾ ತಂಡ ಯುವ ಆಟಗಾರ ಡೆವಾಲ್ಡ್ ಬ್ರೆವಿಸ್ (53 ರನ್, 26 ಎಸೆತ) ಅವರ ಸ್ಫೋಟಕ ಬ್ಯಾಟಿಂಗ್‌ನಿಂದಾಗಿ 172 ರನ್‌ಗಳ ಸವಾಲಿನ ಮೊತ್ತ ಕಲೆಹಾಕಿತು. ಆದರೆ, ಮ್ಯಾಕ್ಸ್‌ವೆಲ್‌ ಅವರು ಉತ್ತಮ ಕ್ಯಾಚ್ ಹಿಡಿದು ಬ್ರೆವಿಸ್ ಅವರ ಆಟಕ್ಕೆ ಕಡಿವಾಣ ಹಾಕಿದರು.

ಇದನ್ನೂ ಓದಿ : ಏಷ್ಯಾಕಪ್‌ಗೆ ಭಾರತ ತಂಡಕ್ಕೆ ಸೂರ್ಯ ಕುಮಾರ್‌ ಯಾದವ್‌ ನಾಯಕ

ಆಸ್ಟ್ರೇಲಿಯಾ ಪರ ಮಿಚೆಲ್ ಮಾರ್ಷ್ (54 ರನ್) ಸಹ ಉತ್ತಮ ಆರಂಭ ನೀಡಿದರೂ, ನಂತರ ಬಂದ ಬ್ಯಾಟ್ಸ್‌ಮನ್‌ಗಳು ಬೇಗನೆ ವಿಕೆಟ್ ಕಳೆದುಕೊಂಡರು. ಆದರೆ ಮ್ಯಾಕ್ಸ್‌ವೆಲ್‌ ಕೊನೆಯವರೆಗೂ ಕ್ರೀಸ್‌ನಲ್ಲಿ ನಿಂತು, ತಂಡವನ್ನು ಗೆಲುವಿನ ದಡ ಸೇರಿಸಿದರು.

ಬಿಕೆಟಿ ಟೈರ್ಸ್ ಏಕದಿನ ಸರಣಿಯ ವೇಳಾಪಟ್ಟಿ

ಬಿಕೆಟಿ ಟೈರ್ಸ್ ಏಕದಿನ ಸರಣಿ – ಆಸ್ಟ್ರೇಲಿಯಾ vs ದಕ್ಷಿಣ ಆಫ್ರಿಕಾ
ಆಗಸ್ಟ್ 19: ಮೊದಲ ಏಕದಿನ ಪಂದ್ಯ (ವಿರುದ್ಧ ದಕ್ಷಿಣ ಆಫ್ರಿಕಾ), ಕ್ಯಾಜಲಿಸ್ ಕ್ರೀಡಾಂಗಣ, ಕೈರ್ನ್ಸ್, ಮಧ್ಯಾಹ್ನ 2:30.

ಆಗಸ್ಟ್ 22: ಎರಡನೇ ಏಕದಿನ ಪಂದ್ಯ (ವಿರುದ್ಧ ದಕ್ಷಿಣ ಆಫ್ರಿಕಾ), ಗ್ರೇಟ್ ಬ್ಯಾರಿಯರ್ ರೀಫ್ ಅರೆನಾ, ಮೆಕೆ, ಮಧ್ಯಾಹ್ನ 2:30.

ಆಗಸ್ಟ್ 24: ಮೂರನೇ ಏಕದಿನ ಪಂದ್ಯ (ವಿರುದ್ಧ ದಕ್ಷಿಣ ಆಫ್ರಿಕಾ), ಗ್ರೇಟ್ ಬ್ಯಾರಿಯರ್ ರೀಫ್ ಅರೆನಾ, ಮೆಕೆ, ಮಧ್ಯಾಹ್ನ 2:30.

ಇದನ್ನೂ ಓದಿ : ರಾಜಸ್ಥಾನ ರಾಯಲ್ಸ್‌ಗೆ ಕೈ ಕೊಟ್ಟ ಸಂಜು ಸ್ಯಾಮ್ಸನ್‌

ಆಸ್ಟ್ರೇಲಿಯಾ vs ದಕ್ಷಿಣ ಆಫ್ರಿಕಾ ತಂಡಗಳ ಬಲಾಬಲ

ಆಸ್ಟ್ರೇಲಿಯಾ ಏಕದಿನ ತಂಡ : ಮಿಚೆಲ್ ಮಾರ್ಷ್ (ನಾಯಕ), ಕ್ಸೇವಿಯರ್ ಬಾರ್ಟ್ಲೆಟ್, ಅಲೆಕ್ಸ್ ಕ್ಯಾರಿ, ಕೂಪರ್ ಕಾನೊಲಿ, ಬೆನ್ ದ್ವಾರ್ಶುಯಿಸ್, ನಾಥನ್ ಎಲ್ಲಿಸ್, ಕ್ಯಾಮರೂನ್ ಗ್ರೀನ್, ಆರನ್ ಹಾರ್ಡಿ, ಜೋಶ್ ಹ್ಯಾಜಲ್‌ವುಡ್, ಟ್ರಾವಿಸ್ ಹೆಡ್, ಜೋಶ್ ಇಂಗ್ಲಿಸ್, ಮ್ಯಾಥ್ಯೂ ಕುಹ್ನೆಮನ್, ಮಾರ್ನಸ್ ಲ್ಯಾಬುಸ್ಚಾಗ್ನೆ, ಆಡಮ್ ಜಂಪಾ.

ದಕ್ಷಿಣ ಆಫ್ರಿಕಾ ಏಕದಿನ ತಂಡ : ಟೆಂಬಾ ಬವುಮಾ (ನಾಯಕ), ಕಾರ್ಬಿನ್ ಬಾಷ್, ಮ್ಯಾಥ್ಯೂ ಬ್ರೀಟ್ಜ್ಕೆ, ಡೆವಾಲ್ಡ್ ಬ್ರೆವಿಸ್, ನಾಂಡ್ರೆ ಬರ್ಗರ್, ಟೋನಿ ಡಿ ಜೋರ್ಜಿ, ಐಡೆನ್ ಮಾರ್ಕ್ರಾಮ್, ಸೆನುರನ್ ಮುತ್ತುಸಾಮಿ, ಕೇಶವ್ ಮಹಾರಾಜ್, ವಿಯಾನ್ ಮುಲ್ಡರ್, ಲುಂಗಿ ಎನ್ಗಿಡಿ, ಲುವಾನ್-ಡ್ರೆ ಪ್ರಿಟೋರಿಯಸ್, ಕಗಿಸೊ ರಬಾಡ, ರಿಯಾನ್ ರಿಕೆಲ್ಟನ್, ಟ್ರಿಸ್ಟಾನ್ ಸ್ಟಬ್ಸ್, ಪ್ರೆನೆಲನ್ ಸುಬ್ರಾಯೆನ್.

Glenn Maxwell best Batting AUS vs SA T20 Series Australia Beat South Africa

Kannada News Next Desk

Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021

Related Stories