India women vs Australia women : ಆಸ್ಟ್ರೇಲಿಯಾಕ್ಕೆ 282 ರನ್ ಸವಾಲು ನೀಡಿದ ಭಾರತದ ವನಿತೆಯರು

India women vs Australia women : ಚಂಡೀಗಡ : ಆಸ್ಟ್ರೇಲಿಯಾ ಮಹಿಳೆಯರ ವಿರುದ್ದ ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ ಭಾರತೀಯ ವನಿತೆಯರು ಸವಾಲಿನ ಮೊತ್ತ ನೀಡಿದ್ದಾರೆ. ಮೊದಲು ಬ್ಯಾಟಿಂಗ್ ನಡೆಸಿದ ಭಾರತ ಮಹಿಳಾ ತಂಡ 50 ಓವರ್ ಗಳಲ್ಲಿ 7 ವಿಕೆಟ್ ಕಳೆದುಕೊಂಡು 281 ರನ್ ಬಾರಿಸಿದೆ.
ನ್ಯೂ ಚಂಡೀಗಢದ ಮುಲ್ಲಾನ್‌ಪುರದಲ್ಲಿರುವ ಮಹಾರಾಜ ಯದ್ವೀಂದ್ರ ಅಂತರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ದದ ಮೊದಲ ಏಕದಿನ ಪಂದ್ಯದಲ್ಲಿ ಭಾರತ ವನಿತೆಯರ ಕ್ರಿಕೆಟ್ ತಂಡ ಮೊದಲು ಬ್ಯಾಟಿಂಗ್ ನಡೆಸಿದೆ.
ಭಾರತ ತಂಡದ ಪರ ಪ್ರತೀಕಾ ರಾವಲ್ ಹಾಗೂ ಸ್ಮೃತಿ ಮಂದಾನ ಆರಂಭಿಕರಾಗಿ ಕಣಕ್ಕೆ ಇಳಿದಿದ್ದು ಮೊದಲ ವಿಕೆಟ್ ಗೆ ಶತಕದ ಜೊತೆಯಾಟ ಆಡಿದ್ದಾರೆ. ಸ್ಮೃತಿ ಮಂದಾನ 58ರನ್ ಬಾರಿಸಿದ್ರೆ, ಪ್ರತೀಕಾ ರಾವಲ್ 64ರನ್ ಸಿಡಿಸಿದ್ದಾರೆ.
ನಂತರ ಬಂದ ಹರ್ಲೀನ್ ಡಿಯೋಲ್ ಸ್ಪೋಟಕ 54 ರನ್ ಬಾರಿಸುವ ಮೂಲಕ ಭಾರತ ಉತ್ತಮ ಮೊತ್ತ ಏರಿಸುವುದಕ್ಕೆ ಸಹಕಾರ ನೀಡಿದ್ರು. ನಂತರ ಹರ್ಮನ್ ಪ್ರೀತ್ ಕೌರ್ ಹಾಗೂ ಜೆಮಿಯಾ ರೋಡ್ರಿಗಸ್ ನಿರಾಸೆ ಮೂಡಿಸಿದ್ರು. ರಿಚಾ ಗೋಷ್, ದೀಪ್ತಿ ಶರ್ಮಾ ಹಾಗೂ ರಾಧಾ ಯಾದವ್ ಎರಡಂಕಿ ರನ್ ಕೊಡುಗೆ ನೀಡಿದ್ದಾರೆ.
ಅಂತಿಮವಾಗಿ ಭಾರತ ತಂಡ ಮೊದಲ ಏಕದಿನ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ 50 ಓವರ್ ಗಳಲ್ಲಿ 7 ವಿಕೆಟ್ ಕಳೆದುಕೊಂಡು ಭರ್ಜರಿ 281ರನ್ ಬಾರಿಸಿದ್ದು, ಆಸ್ಟ್ರೇಲಿಯಾ ಮಹಿಳಾ ತಂಡಕ್ಕೆ 282ರನ್ ಗಳ ಸವಾಲು ನೀಡಿದ್ದಾರೆ.
ಮಹಿಳಾ ವಿಶ್ವಕಪ್ ಮುನ್ನ ಭಾರತ ಭರ್ಜರಿ ಆಟ
ಮಹಿಳಾ ವಿಶ್ವಕಪ್ ಪಂದ್ಯಾವಳಿಗೂ ಮುನ್ನ ಆಸ್ಟ್ರೇಲಿಯಾ ವಿರುದ್ದ ಸರಣಿ ಭಾರತ ತಂಡಕ್ಕೆ ಹೆಚ್ಚು ಮಹತ್ವದ್ದಾಗಿದೆ. ಎರಡೂ ತಂಡಗಳು ಬಲಿಷ್ಠವಾಗಿದ್ದು, ಮೊದಲ ಏಕದಿನ ಪಂದ್ಯದಲ್ಲಿ ಭಾರತ ತಂಡ ಉತ್ತಮ ಆಟದ ಪ್ರದರ್ಶನ ನೀಡಿದೆ.
ಕಳೆದ ಡಿಸೆಂಬರ್‌ನಲ್ಲಿ ಆಸ್ಟ್ರೇಲಿಯಾದಲ್ಲಿ ನಡೆದ ಸರಣಿಯಲ್ಲಿ ಭಾರತ ತಂಡ 0-3 ವೈಟ್‌ವಾಶ್‌ಗೆ ಸೇಡು ತೀರಿಸಿಕೊಳ್ಳಲು ಇದೊಂದು ಉತ್ತಮ ಅವಕಾಶವಾಗಿದೆ. ಭಾರತ ಬಲಿಷ್ಠ ತಂಡದೊಂದಿಗೆ ಏಕದಿನ ಸರಣಿಯ ಮೂಲಕ ಕಣಕ್ಕೆ ಇಳಿದಿದೆ.
ಇದನ್ನೂ ಓದಿ : ಐಪಿಎಲ್ ನಲ್ಲಿ ವೈಫಲ್ಯ, ಸ್ಪೋಟಕ ಆಟವಾಡಿದ ಆಸೀಸ್‌ಗೆ ಗೆಲುವು ಕೊಟ್ಟ ಗ್ಲೇನ್ ಮ್ಯಾಕ್ಸ್‌ವೆಲ್
ಭಾರತ ಮಹಿಳಾ ಪ್ಲೇಯಿಂಗ್ XI: ಹರ್ಮನ್‌ಪ್ರೀತ್ ಕೌರ್ (ಸಿ), ಪ್ರತೀಕಾ ರಾವಲ್, ಸ್ಮೃತಿ ಮಂಧಾನ, ಹರ್ಲೀನ್ ಡಿಯೋಲ್, ಜೆಮಿಮಾ ರಾಡ್ರಿಗಸ್, ರಿಚಾ ಘೋಷ್ (Wk), ದೀಪ್ತಿ ಶರ್ಮಾ, ಸ್ನೇಹ ರಾಣಾ, ರಾಧಾ ಯಾದವ್, ಶ್ರೀ ಚರಣಿ, ಕ್ರಾಂತಿ ಗೌಡ್
ಆಸ್ಟ್ರೇಲಿಯಾದ ಮಹಿಳೆಯರು ಆಡುವ XI: ಅಲಿಸ್ಸಾ ಹೀಲಿ(C/Wk), ಫೋಬೆ ಲಿಚ್‌ಫೀಲ್ಡ್, ಎಲ್ಲಿಸ್ ಪೆರ್ರಿ, ಬೆತ್ ಮೂನಿ, ಅನ್ನಾಬೆಲ್ ಸದರ್ಲ್ಯಾಂಡ್, ಆಶ್ಲೀ ಗಾರ್ಡ್ನರ್, ತಹ್ಲಿಯಾ ಮೆಕ್‌ಗ್ರಾತ್, ಜಾರ್ಜಿಯಾ ವೇರ್‌ಹ್ಯಾಮ್, ಅಲಾನಾ ಕಿಂಗ್, ಕಿಮ್ ಗಾರ್ತ್, ಮೇಗನ್ ಶುಟ್
ಇದನ್ನೂ ಓದಿ : ಶ್ರೀಶಾಂತ್- ಹರ್ಭಜನ್ ಸಿಂಗ್ ಕಪಾಳಮೋಕ್ಷ : ಹಳೆ ವಿಡಿಯೋ ವೈರಲ್
ಭಾರತ ತಂಡ :
ಹರ್ಮನ್‌ಪ್ರೀತ್ ಕೌರ್ (ಸಿ), ಸ್ಮೃತಿ ಮಂಧಾನ (ವಿಸಿ), ಪ್ರತೀಕಾ ರಾವಲ್, ಹರ್ಲೀನ್ ಡಿಯೋಲ್, ದೀಪ್ತಿ ಶರ್ಮಾ, ಜೆಮಿಮಾ ರಾಡ್ರಿಗಸ್, ರೇಣುಕಾ ಸಿಂಗ್ ಠಾಕೂರ್, ಅರುಂಧತಿ ರೆಡ್ಡಿ, ರಿಚಾ ಘೋಷ್ (Wk), ಕ್ರಾಂತಿ ಗೌಡ್, ಅಮಂಜೋತ್ ಕೌರ್, ರಾಧಾ ಯಾದವ್, ಶ್ರೀ ಚರಣಿ, ಯಾಸ್ತಿಕಾ ಭಟಿಯಾ (ವಿಕೆ), ಸ್ನೇಹ್ ರಾಣಾ.
ಆಸ್ಟ್ರೇಲಿಯಾ ತಂಡ:
ಅಲಿಸ್ಸಾ ಹೀಲಿ (ಸಿ), ತಹ್ಲಿಯಾ ಮೆಕ್‌ಗ್ರಾತ್ (ವಿಕೆ), ಡಾರ್ಸಿ ಬ್ರೌನ್, ನಿಕೋಲ್ ಫಾಲ್ಟಮ್, ಆಶ್ಲೀ ಗಾರ್ಡ್ನರ್, ಕಿಮ್ ಗಾರ್ತ್, ಗ್ರೇಸ್ ಹ್ಯಾರಿಸ್, ಅಲಾನಾ ಕಿಂಗ್, ಚಾರ್ಲಿ ನಾಟ್, ಫೋಬೆ ಲಿಚ್‌ಫೀಲ್ಡ್, ಸೋಫಿ ಮೊಲಿನೆಕ್ಸ್, ಬೆತ್ ಮೂನಿ, ಎಲಿಸ್ ಪೆರ್ರಿ, ಮೇಗನ್ ಶುಟ್, ಅನ್ನಾಬೆಲ್ ಸದರ್ಲ್ಯಾಂಡ್, ಜಾರ್ಜಿಯಾ ವೋಲ್, ಜಾರ್ಜಿಯಾ ವೇರ್‌ಹ್ಯಾಮ್.
India women vs Australia women Live Cricket Score 1st ODI IND 1st Innings With 281/7



