ಸಿಕ್ಸರ್ಗಳ ಸುರಿಮಳೆಗೈದು ಹೊಸ ಇತಿಹಾಸ ಬರೆದ ವೈಭವ : ಸೂರ್ಯವಂಶಿ ಬ್ಯಾಟಿಂಗ್ ಕಮಾಲ್ಗೆ ಫ್ಯಾನ್ಸ್ ಫಿದಾ
ರಾಜಸ್ಥಾನ ರಾಯಲ್ಸ್ ತಂಡದ ಆರಂಭಿಕ ಆಟಗಾರ ವೈಭವ್ ಸೂರ್ಯವಂಶಿ (Vaibhav Suryavanshi) ಕ್ರಿಕೆಟ್ ಕ್ಷೇತ್ರದಲ್ಲಿ ದಾಖಲೆಗಳ ಮೇಲೆ ದಾಖಲೆ ಬರೆಯುತ್ತಲೇ ಇದ್ದಾರೆ. ಮುಂಬೈ ಇಂಡಿಯನ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ಸಿಕ್ಸರ್ಗಳ ಮೇಲೆ ಸಿಕ್ಸರ್ ಚಚ್ಚುವ ಮೂಲಕ ಈ ಹೊಸ ದಾಖಲೆ ನಿರ್ಮಿಸಿದ್ದಾರೆ.
ಈ ಪಂದ್ಯದಲ್ಲಿ ಅತ್ಯದ್ಭುತ ಪ್ರದರ್ಶನ ತೋರಿದ ವೈಭವ್ ಸೂರ್ಯವಂಶಿ ಮುಂಬೈ ಇಂಡಿಯನ್ಸ್ ಬೌಲರ್ಗಳ ಬೆವರಳಿಸುವಲ್ಲಿ ಯಶಸ್ವಿಯಾದರು. ಮಳೆಯ ಕಾಟದ ನಡುವೆಯೂ ರಾಜಸ್ಥಾನವನ್ನು 11 ಓವರ್ಗಳಲ್ಲಿ 3 ವಿಕೆಟ್ಗಳ ನಷ್ಟಕ್ಕೆ 150 ರನ್ನತ್ತ ಮುನ್ನಡೆಸುವಲ್ಲಿ ಯಶಸ್ವಿಯಾಗಿದ್ದಾರೆ.
ಇದನ್ನೂ ಓದಿ: RCB ಹಣೆಬರಹ ಬದಲಿಸಿದ ಬಿರ್ಲಾ ಎಂಟ್ರಿ : IPL 2027ಕ್ಕೆ ಆರ್ಸಿಬಿಗೆ ಹೊಸ ಹೆಸರು ?
ಇನ್ನಿಂಗ್ಸ್ನಲ್ಲಿ 5 ಸಿಕ್ಸರ್ಗಳನ್ನು ಬಾರಿಸುವ ಮೂಲಕ ವೈಭವ್ ಸೂರ್ಯವಂಶಿ ಇಶಾನ್ ಕಿಶಾನ್ ಹಾಗೂ ರಿಷಭ್ ಪಂತ್ರ ದಾಖಲೆಗಳನ್ನು ಸರಿಗಟ್ಟಿದ್ದಾರೆ. ಇವರಿಬ್ಬರು ಐಪಿಎಲ್ನಲ್ಲಿ 20 ವರ್ಷ ತುಂಬುವ ಮೊದಲು 30 ಸಿಕ್ಸರ್ಗಳನ್ನು ಬಾರಿಸಿದ ಕ್ರಿಕೆಟಿಗರು ಎಂಬ ದಾಖಲೆಯನ್ನು ನಿರ್ಮಿಸಿದ್ದರು.
ಈ ದಾಖಲೆ ಸರಿಗಟ್ಟಿದ ವೈಭವ್ ಸೂರ್ಯವಂಶಿ ಒಟ್ಟೂ 35 ಸಿಕ್ಸರ್ಗಳನ್ನು ಐಪಿಎಲ್ನಲ್ಲಿ ಸಿಡಿಸಿದ್ದಾರೆ. ಈ ಮೂಲಕ ಐಪಿಎಲ್ನಲ್ಲಿ ಅತೀ ಹೆಚ್ಚು ಸಿಕ್ಸರ್ಗಳನ್ನು ಬಾರಿಸಿದ ಹದಿಹರೆಯದ ಆಟಗಾರ ಎಂಬ ಕೀರ್ತಿಗೆ ವೈಭವ್ ಸೂರ್ಯವಂಶಿ ಪಾತ್ರರಾಗಿದ್ದಾರೆ.



