58 ವರ್ಷದ ಬಳಿಕ ಎಡ್ಜ್‌ಬಾಸ್ಟನನ್ ನಲ್ಲಿ ಗೆದ್ದು ದಾಖಲೆ ಬರೆದ ಶುಭಮನ್ ಗಿಲ್ ಪಡೆ

IND vs ENG 2nd test : ಭಾರತ ಮತ್ತು ಇಂಗ್ಲೆಂಡ್ ನಡುವಿನ ಎರಡನೇ ಟೆಸ್ಟ್ ಪಂದ್ಯದಲ್ಲಿ ಶುಭಮನ್ ಗಿಲ್ ನೇತೃತ್ವದ ಭಾರತ ಕ್ರಿಕೆಟ್ ತಂಡ ಬರೋಬ್ಬರಿ 336 ರನ್‌ಗಳ ಅಂತರದಿಂದ ಭರ್ಜರಿ ಗೆಲುವು ದಾಖಲಿಸಿದೆ. ಈ ಮೂಲಕ 58 ವರ್ಷದ ನಂತರ ಎಡ್ಜ್‌ಬಾಸ್ಟನ್ ಮೊದಲ ಗೆಲುವು ದಾಖಲಿಸಿದೆ.
ಇಂಗ್ಲೆಂಡ್ ವಿರುದ್ದ ಮೊದಲ ಪಂದ್ಯದಲ್ಲಿ ಸೋಲನ್ನು ಕಂಡಿದ್ದ ಭಾರತ ತಂಡ ಎಡ್ಜ್‌ಬಾಸ್ಟನ್ ನಲ್ಲಿ ನಡೆದ ಎರಡನೇ ಪಂದ್ಯದಲ್ಲಿ ಸೇಡು ತೀರಿಸಿಕೊಂಡಿದೆ. ಎರಡನೇ ಟೆಸ್ಟ್ ಗೆಲುವಿನ ಮೂಲಕ 5 ಪಂದ್ಯಗಳ ಸರಣಿಯನ್ನು 1-1 ಅಂತರದಿಂದ ಸಮಬಲ ಸಾಧಿಸಿದೆ.
IND vs ENG 2nd test : ಪಂದ್ಯದ ಸಂಕ್ಷಿಪ್ತ ವಿವರ
ಫಲಿತಾಂಶ: ಭಾರತ 336 ರನ್‌ಗಳಿಂದ ಗೆಲುವು (ಇಂಗ್ಲೆಂಡ್ ವಿರುದ್ಧ ಎಡ್ಜ್‌ಬಾಸ್ಟನ್‌ನಲ್ಲಿ ಭಾರತದ ಮೊದಲ ಟೆಸ್ಟ್ ಗೆಲುವು).
ಪಂದ್ಯಶ್ರೇಷ್ಠ: ನಾಯಕ ಶುಭಮನ್ ಗಿಲ್.
ಭಾರತದ ಮೊದಲ ಇನ್ನಿಂಗ್ಸ್:
ಭಾರತವು ಮೊದಲ ಇನ್ನಿಂಗ್ಸ್‌ನಲ್ಲಿ 587 ರನ್‌ಗಳಿಗೆ ಆಲೌಟ್
ಶುಭಮನ್ ಗಿಲ್ ನಾಯಕನಾಗಿ ಅದ್ಭುತವಾದ ದ್ವಿಶತಕ ಸಿಡಿಸಿದರು – 269 ರನ್ (387 ಎಸೆತಗಳು). ಇದು ಟೆಸ್ಟ್ ಕ್ರಿಕೆಟ್‌ನಲ್ಲಿ ಅವರ ಚೊಚ್ಚಲ ದ್ವಿಶತಕವಾಗಿದೆ.
ರವೀಂದ್ರ ಜಡೇಜಾ (89) ಮತ್ತು ಯಶಸ್ವಿ ಜೈಸ್ವಾಲ್ (87) ಕೂಡ ಉತ್ತಮ ರನ್ ಕಲೆಹಾಕಿದರು.
ಇದು ಬೆನ್ ಸ್ಟೋಕ್ಸ್ ಮತ್ತು ಬ್ರೆಂಡನ್ ಮೆಕ್‌ಕಲಮ್ ನಾಯಕತ್ವದ ಇಂಗ್ಲೆಂಡ್ ತಂಡದ ವಿರುದ್ಧ ನೀಡಿದ ಅತಿ ಹೆಚ್ಚು ರನ್‌ಗಳಾಗಿದೆ.
ಇಂಗ್ಲೆಂಡ್‌ನ ಮೊದಲ ಇನ್ನಿಂಗ್ಸ್:
ಇಂಗ್ಲೆಂಡ್ ತಂಡವು 407 ರನ್‌ಗಳಿಗೆ ಆಲೌಟ್ ಆಯಿತು.
ಹ್ಯಾರಿ ಬ್ರೂಕ್ (158) ಮತ್ತು ಜೇಮೀ ಸ್ಮಿತ್ (184*) ಶತಕಗಳನ್ನು ಗಳಿಸಿದರು.
ಭಾರತದ ಪರ ಮೊಹಮ್ಮದ್ ಸಿರಾಜ್ 6 ವಿಕೆಟ್, ಆಕಾಶ್ ದೀಪ್ 4 ವಿಕೆಟ್ ಪಡೆದು ಕೊಂಡಿದ್ದಾರೆ.
ಭಾರತದ ಎರಡನೇ ಇನ್ನಿಂಗ್ಸ್:
ಭಾರತವು 6 ವಿಕೆಟ್‌ಗೆ 427 ರನ್ ಗಳಿಸಿ ಡಿಕ್ಲೇರ್ ಮಾಡಿಕೊಂಡಿತು.
ಶುಭಮನ್ ಗಿಲ್ ಮತ್ತೊಂದು ಅದ್ಭುತ ಶತಕ ಸಿಡಿಸಿದರು – 161 ರನ್ (162 ಎಸೆತಗಳು).
ರಿಷಭ್ ಪಂತ್ (65) ಮತ್ತು ರವೀಂದ್ರ ಜಡೇಜಾ (ಅಜೇಯ 69) ಉತ್ತಮ ರನ್ ಕೊಡುಗೆ ನೀಡಿದರು.
ಗಿಲ್ ಒಂದೇ ಟೆಸ್ಟ್ ಪಂದ್ಯದಲ್ಲಿ ದ್ವಿಶತಕ ಮತ್ತು 150ಕ್ಕೂ ಹೆಚ್ಚು ರನ್ ಗಳಿಸಿದ ವಿಶ್ವದ ಮೊದಲ ಕ್ರಿಕೆಟಿಗ ಎಂಬ ದಾಖಲೆ ನಿರ್ಮಿಸಿದರು (269 ಮತ್ತು 161 ರನ್). ಅವರ ಪಂದ್ಯದ ಒಟ್ಟು 430 ರನ್‌ಗಳು ಭಾರತೀಯ ಬ್ಯಾಟರ್‌ನಿಂದ ಟೆಸ್ಟ್‌ನಲ್ಲಿ ಗಳಿಸಿದ ಎರಡನೇ ಅತಿ ಹೆಚ್ಚು ರನ್ ಆಗಿದೆ.
ಭಾರತ ಇಂಗ್ಲೆಂಡ್‌ಗೆ ಗೆಲ್ಲಲು 608 ರನ್‌ಗಳ ಗುರಿ ನಿಗದಿಪಡಿಸಿತು.
ಇಂಗ್ಲೆಂಡ್‌ನ ಎರಡನೇ ಇನ್ನಿಂಗ್ಸ್:
ಇಂಗ್ಲೆಂಡ್ ತಂಡವು 271 ರನ್‌ಗಳಿಗೆ ಆಲೌಟ್ ಆಗುವ ಮೂಲಕ ಭಾರತ 336 ರನ್‌ಗಳಿಂದ ಗೆಲುವು ಸಾಧಿಸಿತು.
ಮೊಹಮ್ಮದ್ ಸಿರಾಜ್ ಮತ್ತು ಆಕಾಶ್ ದೀಪ್ ಮತ್ತೊಮ್ಮೆ ಪ್ರಮುಖ ವಿಕೆಟ್‌ಗಳನ್ನು ಪಡೆದು ಭಾರತದ ಗೆಲುವಿಗೆ ನೆರವಾದರು.
IND vs ENG 2nd test : ದಾಖಲೆಗಳು ಮತ್ತು ಸಾಧನೆ
ಎಡ್ಜ್‌ಬಾಸ್ಟನ್‌ನಲ್ಲಿ ಐತಿಹಾಸಿಕ ಗೆಲುವು: ಭಾರತವು ಎಡ್ಜ್‌ಬಾಸ್ಟನ್ ನಲ್ಲಿ 58 ವರ್ಷಗಳ ನಂತರ ಗೆದ್ದ ಮೊದಲ ಟೆಸ್ಟ್ ಪಂದ್ಯ ಇದಾಗಿದೆ.
ಗಿಲ್ ನಾಯಕತ್ವದಲ್ಲಿ ಮೊದಲ ಗೆಲುವು: ಇದು ಶುಭಮನ್ ಗಿಲ್ ಅವರ ನಾಯಕತ್ವದಲ್ಲಿ ಭಾರತಕ್ಕೆ ದೊರೆತ ಮೊದಲ ಟೆಸ್ಟ್ ಗೆಲುವು.
ಒಂದೇ ಟೆಸ್ಟ್‌ನಲ್ಲಿ 1000+ ರನ್: ಭಾರತವು ಈ ಪಂದ್ಯದಲ್ಲಿ ಎರಡು ಇನ್ನಿಂಗ್ಸ್‌ಗಳಲ್ಲಿ ಒಟ್ಟು 1014 ರನ್ ಗಳಿಸುವ ಮೂಲಕ, ಒಂದೇ ಟೆಸ್ಟ್‌ನಲ್ಲಿ 1000ಕ್ಕೂ ಹೆಚ್ಚು ರನ್ ಗಳಿಸಿದ ಇತಿಹಾಸದ ಆರನೇ ತಂಡವಾಯಿತು ಮತ್ತು ಭಾರತದ ಹೊಸ ದಾಖಲೆಯಾಗಿದೆ.
ಅತಿ ದೊಡ್ಡ ಗೆಲುವು: 336 ರನ್‌ಗಳ ಗೆಲುವು ಭಾರತದ ಪಾಲಿಗೆ ವಿದೇಶದಲ್ಲಿ ಅತಿ ದೊಡ್ಡ ಗೆಲುವು.
ಈ ಗೆಲುವಿನೊಂದಿಗೆ, ಇಂಗ್ಲೆಂಡ್ ವಿರುದ್ಧದ ಐದು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಭಾರತವು 1-1 ಅಂತರದಲ್ಲಿ ಸಮಬಲ ಸಾಧಿಸಿದೆ. ಮೊದಲ ಪಂದ್ಯದಲ್ಲಿ ಸೋಲಿನ ರುಚಿ ಕಂಡಿದ್ದ ಭಾರತ ಎರಡನೇ ಪಂದ್ಯದಲ್ಲಿ ಭರ್ಜರಿ ಕಮ್‌ಬ್ಯಾಕ್ ಮಾಡಿದೆ.
IND vs ENG 2nd test Shubman Gill’s team wins at Edgbaston after 58 years, creating a record in Kannada News



