ಕ್ರಿಕೆಟ್​ ನೇರಪ್ರಸಾರದಿಂದ ಏಕಾಏಕಿ ಹಿಂದೆ ಸರಿದ ಜಿಯೋ ಹಾಟ್​ಸ್ಟಾರ್​ : ಐಸಿಸಿಗೆ ಶುರು ಹೊಸ ತಲೆನೋವು

ಕೇಂದ್ರ ಸರ್ಕಾರ ಆನ್​ಲೈನ್​ ಗೇಮ್​ ಕಾಯ್ದೆ 2025 ಜಾರಿಗೆ ತಂದ ಬೆನ್ನಲ್ಲೇ ಜಿಯೋ ಹಾಟ್​ಸ್ಟಾರ್​ ಕಂಪನಿಯು ಐಸಿಸಿಗೆ ಬಿಸಿ ಮುಟ್ಟಿಸಿದೆ. 2026ರ ಟಿ 20 ವಿಶ್ವಕಪ್​ ಆರಂಭಕ್ಕೆ ಕೇವಲ 2 ತಿಂಗಳು ಬಾಕಿ ಇರುವಾಗಲೇ, ಐಸಿಸಿಗೆ ಶಾಕ್​ ನೀಡಿದೆ. ಪಂದ್ಯಗಳ ನೇರ ಪ್ರಸಾರದ ಹಕ್ಕು ಹೊಂದಿರುವ ಜಿಯೋ ಹಾಟ್​ಸ್ಟಾರ್​ ನೇರಪ್ರಸಾರ ಒಪ್ಪಂದದಿಂದ ಹೊರಬಂದಿದೆ. ಹೀಗಾಗಿ ಸಂಕಷ್ಟಕ್ಕೆ ಸಿಲುಕಿರುವ ಐಸಿಸಿ ಇದೀಗ ಹೊಸ ಪ್ರಸಾರಕರಿಗಾಗಿ ಹುಡುಕಾಟ ಆರಂಭಿಸಿದೆ.

ಕೇಂದ್ರ ಸರ್ಕಾರದ ಈ ಕಾಯ್ದೆಯಿಂದಾಗಿ ಜಿಯೋ ಹಾಟ್​ಸ್ಟಾರ್ ಕಂಪನಿಗೆ ಜಾಹೀರಾತು ನಷ್ಟವಾಗಿದ್ದು, ಈ ಹಿನ್ನೆಲೆಯಿಂದ ನೇರಪ್ರಸಾರ ಒಡಂಬಡಿಕೆಯಿಂದ ಹೊರಬಂದಿದೆ ಎನ್ನಲಾಗಿದೆ. 2027ರವರೆಗೂ ನೇರಪ್ರಸಾರದ ಹಕ್ಕು ಹೊಂದಿದ್ದ ಜಿಯೋ ಹಾಟ್​ಸ್ಟಾರ್​ 2 ವರ್ಷಗಳ ಮೊದಲೇ ಇದನ್ನು ರದ್ದುಗೊಳಿಸಲು ಮುಂದಾಗಿದೆ. ಹೀಗಾಗಿ ಐಸಿಸಿ ಸದ್ಯ 2026 ರಿಂದ 2027ರ ಅವಧಿಗೆ ಹೊಸ ಪ್ರಸಾರಕರ ಹುಡುಕಾಟದಲ್ಲಿದೆ.

ಇದನ್ನೂ ಓದಿ: ಐಪಿಎಲ್ ಜಗಳ: ಗೌತಮ್ ಗಂಭೀರ್-ಪಾರ್ಥ್ ಜಿಂದಾಲ್‌ ನಡುವಿನ ವಿವಾದ ಆಗಿದ್ದೇಕೆ?

ರಿಲಯನ್ಸ್​ ಸಂಸ್ಥೆ ಮಾಲೀಕತ್ವದ ಜಿಯೋಸ್ಟಾರ್ 2024-25ನೇ ಸಾಲಿನಲ್ಲಿ ಸುಮಾರು 25,760 ಕೋಟಿ ರೂಪಾಯಿ ನಷ್ಟ ಅನುಭವಿಸಿದೆ. 2023-24ನೇ ಸಾಲಿನಲ್ಲಿ 12,319 ಕೋಟಿ ರೂಪಾಯಿ ನಷ್ಟ ಕಂಡಿದೆ. ಕೇಂದ್ರ ಸರ್ಕಾರದ ಈ ಕಾಯ್ದೆಯಿಂದಾಗಿ ರಿಯಲ್​ ಮನಿ ಗೇಮಿಂಗ್​ಗಳಾದ Dream11, Mycircle ನಂತಹ ಜಾಹೀರಾತುಗಳ ಪ್ರದರ್ಶನಕ್ಕೆ ಕೊಕ್ಕೆ ಬಿದ್ದಿರುವುದೇ ನಷ್ಟಕ್ಕೆ ಮುಖ್ಯ ಕಾರಣವಾಗಿದೆ. ಹೀಗಾಗಿ ಅವಧಿಗೂ ಮುನ್ನವೇ ಜಿಯೋ ಹಾಟ್​ಸ್ಟಾರ್​​ ತನ್ನ ಒಪ್ಪಂದದಿಂದ ಹಿಂದೆ ಸರಿದಿದೆ. ಡಿಸ್ನಿ ಹಾಟ್​ಸ್ಟಾರ್​ ಖರೀದಿ ಮಾಡಿದ್ದ ರಿಲಯನ್ಸ್​ ಕಂಪನಿ ಇದಕ್ಕೆ ಜಿಯೋ ಹಾಟ್​ಸ್ಟಾರ್​ ಎಂದು ನಾಮಕರಣ ಮಾಡಿತ್ತು. ಇದೀಗ ಜಿಯೋ ಹಾಟ್​ಸ್ಟಾರ್​ನಿಂದ ಈ ನಿರ್ಧಾರದಿಂದಾಗಿ ಐಸಿಸಿಗೆ ಹೊಸ ಪ್ರಸಾರಕರ ತಲಾಶ್​ ಮಾಡುವ ಅನಿವಾರ್ಯತೆ ಎದುರಾಗಿದೆ.

ರಶ್ಮಿ ಎಸ್. | Rashmi S.

ರಶ್ಮಿ ಎಸ್. ನ್ಯೂಸ್‌ ನೆಕ್ಸ್ಟ್‌ ಕನ್ನಡ ( News Next Kannada) ದಲ್ಲಿ ಕಂಟೆಂಟ್‌ ರೈಟರ್‌ ಆಗಿ ಕೆಲಸ ಮಾಡುತ್ತಿದ್ದಾರೆ. ಪತ್ರಿಕೋದ್ಯಮ ವಿಭಾಗದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದು, ಹತ್ತು ವರ್ಷಗಳ ಕಾಲ ಕನ್ನಡ ಸುದ್ದಿ ಮಾಧ್ಯಮಗಳಲ್ಲಿ ಕೆಲಸ ಮಾಡಿದ್ದಾರೆ. ರಾಜಕೀಯ, ಕ್ರೀಡೆ, ವಾಣಿಜ್ಯ, ಸಿನಿಮಾ, ಸ್ಥಳೀಯ ಸುದ್ದಿಗಳನ್ನು ಪ್ರಕಟಿಸುತ್ತಿದ್ದಾರೆ. More »

Related Stories