KKR New Jersey: ಕೆಕೆಆರ್ ಅಭಿಮಾನಿಗಳಿಗೆ ಹಬ್ಬ: ಐಪಿಎಲ್ 2026ಕ್ಕಾಗಿ ಹೊಸ ಜೆರ್ಸಿ ಬಿಡುಗಡೆ.

KKR Unveils New Jersey | IPL 2026: ತಂಡದ ಇತಿಹಾಸದ ಪ್ರತಿಯೊಂದು ಪ್ರಮುಖ ಕ್ಷಣವನ್ನು ಒಂದು 'ರೇಖೆ'ಯಾಗಿ ಪರಿಗಣಿಸಲಾಗಿದ್ದು, ಈ ರೇಖೆಗಳೆಲ್ಲವೂ ಒಟ್ಟಾಗಿ ಅಬ್‌ಸ್ಟ್ರಾಕ್ಟ್ ಲೀನಿಯರ್ ಆರ್ಟ್ ಶೈಲಿಯಲ್ಲಿ (K) (K) (R) ಎಂಬ ಅಕ್ಷರಗಳನ್ನು ರೂಪಿಸುತ್ತವೆ. ಅಭಿಮಾನಿಗಳು ಕೇವಲ ಜೆರ್ಸಿಯನ್ನಲ್ಲದೆ, ತಂಡದ ಸುದೀರ್ಘ ಇತಿಹಾಸದ ಒಂದು ಭಾಗವನ್ನು ತೊಟ್ಟುಕೊಳ್ಳಬೇಕು ಎಂಬುದು ಈ ವಿನ್ಯಾಸದ ಉದ್ದೇಶವಾಗಿದೆ.

ಐಪಿಎಲ್ 2026ರ ಸೀಸನ್‌ಗಾಗಿ ಕೋಲ್ಕತ್ತಾ ನೈಟ್ ರೈಡರ್ಸ್ (KKR) ತಂಡವು ತನ್ನ ನೂತನ ಜೆರ್ಸಿಯನ್ನು (KKR New Jersey) ಬಿಡುಗಡೆ ಮಾಡಿದೆ. ಈ ಬಾರಿ ತಂಡವು (IPL 2026) ತನ್ನ ಐತಿಹಾಸಿಕ ಪಯಣ ಮತ್ತು ಸ್ಮರಣೀಯ ಕ್ಷಣಗಳನ್ನು ಆಧರಿಸಿ ಜೆರ್ಸಿಯನ್ನು ವಿನ್ಯಾಸಗೊಳಿಸಿದೆ.

 

ಜೆರ್ಸಿಯ ವಿಶೇಷತೆ ಮತ್ತು ಥೀಮ್
ನೂತನ ಜೆರ್ಸಿಯನ್ನು ‘ಲೈನ್ಸ್ ಆಫ್ ಲೆಗಸಿ’ (Lines of Legacy) ಎಂಬ ವಿಶೇಷ ಥೀಮ್ ಅಡಿಯಲ್ಲಿ ಸಿದ್ಧಪಡಿಸಲಾಗಿದೆ. ಈ ವಿನ್ಯಾಸವು ತಂಡದ ಇತಿಹಾಸದ ಪ್ರಮುಖ ಕ್ಷಣಗಳನ್ನು ಬಿಂಬಿಸುತ್ತದೆ. 2008ರಲ್ಲಿ ಬ್ರೆಂಡನ್ ಮೆಕಲಮ್ ಸಿಡಿಸಿದ ಅಜೇಯ 158 ರನ್‌ಗಳಿಂದ ಹಿಡಿದು, ರಿಂಕು ಸಿಂಗ್ ಸಿಡಿಸಿದ ಸತತ ಐದು ಸಿಕ್ಸರ್‌ಗಳವರೆಗೆ ಕೆಕೆಆರ್ ತಂಡದ ಎಲ್ಲಾ ಐತಿಹಾಸಿಕ ಸಾಧನೆಗಳನ್ನು ಕಲಾತ್ಮಕವಾಗಿ ಈ ಜೆರ್ಸಿಯಲ್ಲಿ ಅಳವಡಿಸಲಾಗಿದೆ.

ವಿನ್ಯಾಸದಲ್ಲಿನ ಕಲೆ
ತಂಡದ ಇತಿಹಾಸದ ಪ್ರತಿಯೊಂದು ಪ್ರಮುಖ ಕ್ಷಣವನ್ನು ಒಂದು ‘ರೇಖೆ’ಯಾಗಿ ಪರಿಗಣಿಸಲಾಗಿದ್ದು, ಈ ರೇಖೆಗಳೆಲ್ಲವೂ ಒಟ್ಟಾಗಿ ಅಬ್‌ಸ್ಟ್ರಾಕ್ಟ್ ಲೀನಿಯರ್ ಆರ್ಟ್ ಶೈಲಿಯಲ್ಲಿ (K) (K) (R) ಎಂಬ ಅಕ್ಷರಗಳನ್ನು ರೂಪಿಸುತ್ತವೆ. ಅಭಿಮಾನಿಗಳು ಕೇವಲ ಜೆರ್ಸಿಯನ್ನಲ್ಲದೆ, ತಂಡದ ಸುದೀರ್ಘ ಇತಿಹಾಸದ ಒಂದು ಭಾಗವನ್ನು ತೊಟ್ಟುಕೊಳ್ಳಬೇಕು ಎಂಬುದು ಈ ವಿನ್ಯಾಸದ ಉದ್ದೇಶವಾಗಿದೆ.

ಮೀನು ಮಾಯವಾಗಿದ್ದಕ್ಕೆ ಸ್ನೇಹಿತನನ್ನೇ ಕಲ್ಲಿನಿಂದ ಜಜ್ಜಿ ಕೊಲೆ: ಕೊನೆಗೆ ಬಯಲಾಯ್ತು ಅಸಲಿ ಸತ್ಯ!

ತಂಡದ ಆಡಳಿತ ಮಂಡಳಿಯ ಮಾತು
ಈ ಬಗ್ಗೆ ಮಾತನಾಡಿದ ನೈಟ್ ರೈಡರ್ಸ್ ಸ್ಪೋರ್ಟ್ಸ್ ಸಿಇಒ ವೆಂಕಿ ಮೈಸೂರು, “ಈ ಜೆರ್ಸಿಯು ತಂಡದ ಶಕ್ತಿ ಮತ್ತು ಚೈತನ್ಯವನ್ನು ಪ್ರತಿನಿಧಿಸುತ್ತದೆ. ನಮ್ಮ ಅಭಿಮಾನಿಗಳು ಹೆಮ್ಮೆ ಪಡುವಂತಹ ಅನೇಕ ನೆನಪುಗಳನ್ನು ಈ ಜೆರ್ಸಿ ಹೊತ್ತು ತಂದಿದೆ” ಎಂದಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಈ ಜೆರ್ಸಿ ಬಿಡುಗಡೆಯ ವಿಡಿಯೋ ಸಖತ್ ವೈರಲ್ ಆಗುತ್ತಿದ್ದು, #LinesOfLegacy ಹ್ಯಾಶ್‌ಟ್ಯಾಗ್ ಟ್ರೆಂಡಿಂಗ್‌ನಲ್ಲಿದೆ.

ಕೆಕೆಆರ್ ಸಾಧನೆ
ಐಪಿಎಲ್ ಇತಿಹಾಸದಲ್ಲಿ ಕೆಕೆಆರ್ ಮೂರು ಬಾರಿ (2012, 2014, 2024) ಚಾಂಪಿಯನ್ ಆಗಿ ಹೊರಹೊಮ್ಮಿದೆ. ಮಾರ್ಚ್ 28ರಿಂದ ಐಪಿಎಲ್ 2026 ಅಧಿಕೃತವಾಗಿ ಆರಂಭವಾಗಲಿದ್ದು, ಮಾರ್ಚ್ 29ರಂದು ಮುಂಬೈ ಇಂಡಿಯನ್ಸ್ ವಿರುದ್ಧ ಕೆಕೆಆರ್ ತನ್ನ ಮೊದಲ ಪಂದ್ಯವನ್ನು ಆಡಲಿದೆ.

[youtube https://www.youtube.com/watch?v=ApMaJ-7pro4]

Vidhya | ವಿದ್ಯಾಶ್ರೀ

ವಿದ್ಯಾಶ್ರೀ ಅವರು ನ್ಯೂಸ್‌ ನೆಕ್ಸ್ಟ್‌ ಕನ್ನಡ ( Kannada News Next) ದಲ್ಲಿ ಕಂಟೆಂಟ್‌ ಕ್ರಿಯೆಟರ್‌ ಆಗಿ ಕೆಲಸ ಮಾಡುತ್ತಿದ್ದಾರೆ. ಕನ್ನಡದ ನ್ಯೂಸ್‌ ಚಾನೆಲ್‌, ದಿನ ಪತ್ರಿಕೆ ಹಾಗೂ ಡಿಜಿಟಲ್‌ ಮಾಧ್ಯಮದಲ್ಲಿ ಹಲವು ವರ್ಷಗಳ ಕಾಲ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ.

Related Stories