ಮೀನು ಮಾಯವಾಗಿದ್ದಕ್ಕೆ ಸ್ನೇಹಿತನನ್ನೇ ಕಲ್ಲಿನಿಂದ ಜಜ್ಜಿ ಕೊಲೆ: ಕೊನೆಗೆ ಬಯಲಾಯ್ತು ಅಸಲಿ ಸತ್ಯ!
ಅಫ್ಸರ್ ಎಂಬ 35 ವರ್ಷದ ವ್ಯಕ್ತಿ ಮತ್ತು ಆತನ ಸ್ನೇಹಿತರಾದ ಸುರೇಶ್ ಹಾಗೂ ರಾಜೇಶ್ ಎಂಬುವವರು ಮನೆಯಲ್ಲಿ ಮೀನು ಅಡುಗೆ ಮಾಡಿದ್ದರು. ಅಡುಗೆಯ ನಂತರ ಮೂವರೂ ಮದ್ಯಪಾನ ಮಾಡಿ ನಿದ್ರೆಗೆ ಜಾರಿದ್ದರು.
Crime News Today: ಕೇವಲ ಮೀನಿಗಾಗಿ ಶುರುವಾದ ಜಗಳವೊಂದು ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಮುಂಬೈನ ಗೋರೆಗಾಂವ್‌ನಲ್ಲಿ ನಡೆದಿದೆ. ಪಾತ್ರೆಯಲ್ಲಿದ್ದ ಮೀನು ನಾಪತ್ತೆಯಾದ ಕಾರಣಕ್ಕೆ ಸ್ನೇಹಿತನೇ ಮೀನು ತಿಂದಿದ್ದಾನೆ ಎಂದು ಶಂಕಿಸಿದ ಇಬ್ಬರು ವ್ಯಕ್ತಿಗಳು ಆತನನ್ನು ಕಲ್ಲಿನಿಂದ ಜಜ್ಜಿ ಕೊಂದಿದ್ದಾರೆ.
ಏನಿದು ಘಟನೆ?
-
ಅಫ್ಸರ್ ಎಂಬ 35 ವರ್ಷದ ವ್ಯಕ್ತಿ ಮತ್ತು ಆತನ ಸ್ನೇಹಿತರಾದ ಸುರೇಶ್ ಹಾಗೂ ರಾಜೇಶ್ ಎಂಬುವವರು ಮನೆಯಲ್ಲಿ ಮೀನು ಅಡುಗೆ ಮಾಡಿದ್ದರು. ಅಡುಗೆಯ ನಂತರ ಮೂವರೂ ಮದ್ಯಪಾನ ಮಾಡಿ ನಿದ್ರೆಗೆ ಜಾರಿದ್ದರು.
-
ಇಲಿಗಳ ಕೈಚಳಕ: ಇವರು ನಿದ್ದೆ ಮಾಡುತ್ತಿದ್ದ ಸಮಯದಲ್ಲಿ, ಮನೆಯಲ್ಲಿದ್ದ ಇಲಿಗಳು ಪಾತ್ರೆಯಲ್ಲಿದ್ದ ಮೀನುಗಳನ್ನು ತಿಂದು ಖಾಲಿ ಮಾಡಿದ್ದವು.
-
ಜಗಳದ ಆರಂಭ: ನಿದ್ದೆಯಿಂದ ಎದ್ದ ಸುರೇಶ್ ಮತ್ತು ರಾಜೇಶ್ ಪಾತ್ರೆಯನ್ನು ನೋಡಿದಾಗ ಮೀನುಗಳು ಖಾಲಿಯಾಗಿದ್ದವು. ಅಫ್ಸರ್ ಒಬ್ಬನೇ ಎಲ್ಲವನ್ನೂ ತಿಂದಿದ್ದಾನೆ ಎಂದು ಭಾವಿಸಿ ಜಗಳ ಆರಂಭಿಸಿದರು.
-
ಭೀಕರ ಕೊಲೆ: ಜಗಳ ವಿಕೋಪಕ್ಕೆ ಹೋಗಿ, ಆಕ್ರೋಶಗೊಂಡ ಸುರೇಶ್ ಮತ್ತು ರಾಜೇಶ್ ಅಫ್ಸರ್ ಮೇಲೆ ಹಲ್ಲೆ ನಡೆಸಿ, ದೊಡ್ಡ ಕಲ್ಲಿನಿಂದ ತಲೆಯನ್ನು ಜಜ್ಜಿ ಕೊಲೆ ಮಾಡಿದರು.
ಹೆಸರಿಗೆ ಮಾತ್ರ ಪಾಕಿಸ್ತಾನ ಆಟಗಾರ, ಹಣ ಮಾತ್ರ ಭಾರತೀಯ ಮಾಲೀಕರಿಂದ! ಇದು ‘ಟಿ20 ಲೀಗ್’ ಮಾಯೆ!
ಆರೋಪಿಗಳ ಬಂಧನ ಹೇಗೆ?:
ಕೊಲೆಯ ನಂತರ ಆರೋಪಿಗಳು ಹರಿಯಾಣಕ್ಕೆ ಪಲಾಯನ ಮಾಡಿದ್ದರು. ಆರೋಪಿಗಳ ಬಳಿ ಮೊಬೈಲ್ ಅಥವಾ ಯಾವುದೇ ಗುರುತಿನ ಚೀಟಿ ಇಲ್ಲದ ಕಾರಣ ಪೊಲೀಸರಿಗೆ ತನಿಖೆ ಕಷ್ಟವಾಗಿತ್ತು. ಆದರೆ ಪೊಲೀಸರು ಸುಮಾರು 50 ಕಸ ಆಯುವವರನ್ನು ವಿಚಾರಣೆ ನಡೆಸಿ ಕೊನೆಗೂ ಆರೋಪಿಗಳನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾದರು. ಸುರೇಶ್‌ನನ್ನು ಹರಿಯಾಣದಲ್ಲಿ ಮತ್ತು ರಾಜೇಶ್‌ನನ್ನು ರೈಲ್ವೆ ನಿಲ್ದಾಣದಲ್ಲಿ ಬಂಧಿಸಲಾಗಿದೆ.
[youtube https://www.youtube.com/watch?v=ApMaJ-7pro4]



