ಐಪಿಎಲ್​ನಲ್ಲಿ ಆಡಲು ಕ್ರಿಕೆಟ್​ ಬೋರ್ಡ್ ವಿರುದ್ಧವೇ ಸಮರ ಸಾರಿದ ಕ್ರಿಕೆಟಿಗ..! ಕೋರ್ಟ್ ಮೆಟ್ಟಿಲೇರಿದ RCB ಪ್ಲೇಯರ್

ಇಂಡಿಯನ್​ ಪ್ರೀಮಿಯರ್ ಲೀಗ್​ನಲ್ಲಿ ಈ ಬಾರಿ ಆರ್​ಸಿಬಿ ಪರ ಕಣಕ್ಕಿಳಿಯಬೇಕಿದ್ದ ಶ್ರೀಲಂಕಾ ಆಟಗಾರ ನುವಾನ್​ ತುಷಾರ್​ (Nuwan Thushara) ಇದೀಗ ಕಾನೂನು ಸಮರಕ್ಕೆ ಇಳಿದಿದ್ದಾರೆ. ಐಪಿಎಲ್​ ಪಂದ್ಯವನ್ನಾಡಲು ಎನ್​ಓಸಿ ನೀಡಲು ನಿರಾಕರಿಸುತ್ತಿರುವ ಶ್ರೀಲಂಕಾ ಕ್ರಿಕೇಟ್​ ಬೋರ್ಡ್​ನ ನಡೆಯನ್ನು ಪ್ರಶ್ನಿಸಿ ನುವಾನ್​ ತುಷಾರ್​ ಕೋರ್ಟ್ ಮೆಟ್ಟಿಲೇರಿದ್ದಾರೆ.

ಕಳೆದ ವರ್ಷ ತುಷಾರ್​ರನ್ನು ಆರ್​ಸಿಬಿ ತಂಡವು 1.6 ಕೋಟಿ ರೂಪಾಯಿಗಳನ್ನು ನೀಡಿ ಖರೀದಿ ಮಾಡಿದೆ. ಕಳೆದ ಸೀಸನ್​ನಲ್ಲಿ 1 ಪಂದ್ಯದಲ್ಲಿ ತುಷಾರ್​ ಕಾಣಿಸಿಕೊಂಡಿದ್ದರು. ಉತ್ತಮ ಬೌಲರ್​ ಆಗಿರುವ ತುಷಾರ್​ಗೆ ಫಿಟ್​ನೆಸ್​ ಸರ್ಟಿಫಿಕೇಟ್​ ಸಿಗದ ಕಾರಣ ಈ ಬಾರಿ ಆರ್​ಸಿಬಿ ಪರ ಆಡಲು ತಾಂತ್ರಿಕ ಸಮಸ್ಯೆ ಎದುರಿಸುತ್ತಿದ್ದಾರೆ.ಹೀಗಾಗಿ ಶ್ರೀಲಂಕಾ ಕ್ರಿಕೆಟ್​ ಬೋರ್ಡ್ ವಿರುದ್ಧ ಕಾನೂನು ಸಮರಕ್ಕೆ ತುಷಾರ್​ ಇಳಿದಿದ್ದಾರೆ.

ಇದನ್ನೂ ಓದಿ: ಶ್ರೇಯಸ್​ ಅಯ್ಯರ್​ಗೆ ದಂಡ..! ಗುಜರಾತ್​ ವಿರುದ್ಧದ ಗೆಲುವಿನ ಬಳಿಕ ಬಿತ್ತು ಭಾರಿ ಫೈನ್..!

ಸದ್ಯ ತುಷಾರ್​ ಫಿಟ್ನೆಸ್​ ಪರೀಕ್ಷೆಯಲ್ಲಿ ಉತ್ತೀರ್ಣರಾಗಿಲ್ಲ ಎಂಬ ಕಾರಣ ನೀಡುತ್ತಿರುವ ಶ್ರೀಲಂಕಾ ಕ್ರಿಕೆಟ್​ ಬೋರ್ಡ್ ಅವರಿಗೆ ಎನ್​ಒಸಿ ನೀಡಲು ನಿರಾಕರಿಸಿದೆ. ತಮಗೆ ತಕ್ಷಣವೇ NOC ನೀಡುವಂತೆ ಮಂಡಳಿಗೆ ನಿರ್ದೇಶಿಸಬೇಕೆಂದು ತುಷಾರ್ ನ್ಯಾಯಾಲಯವನ್ನು ಕೋರಿದ್ದಾರೆ. ಅಲ್ಲದೇ ತಾವು ಇನ್ಮುಂದೆ ಶ್ರೀಲಂಕಾ ತಂಡದ ಪರವಾಗಿ ಆಡುವುದಿಲ್ಲ ಎಂಬುದನ್ನೂ ಅರ್ಜಿಯಲ್ಲಿ ತುಷಾರ್​ ನಮೂದಿಸಿದ್ದಾರೆ. ಕೊಲಂಬೊ ಜಿಲ್ಲಾ ನ್ಯಾಯಾಲಯವು ಈ ಅರ್ಜಿಯ ವಿಚಾರಣೆಯನ್ನು ಏಪ್ರಿಲ್ 9ಕ್ಕೆ ನಿಗದಿಪಡಿಸಿದೆ.

ರಶ್ಮಿ ಎಸ್. | Rashmi S.

ರಶ್ಮಿ ಎಸ್. ನ್ಯೂಸ್‌ ನೆಕ್ಸ್ಟ್‌ ಕನ್ನಡ ( News Next Kannada) ದಲ್ಲಿ ಕಂಟೆಂಟ್‌ ರೈಟರ್‌ ಆಗಿ ಕೆಲಸ ಮಾಡುತ್ತಿದ್ದಾರೆ. ಪತ್ರಿಕೋದ್ಯಮ ವಿಭಾಗದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದು, ಹತ್ತು ವರ್ಷಗಳ ಕಾಲ ಕನ್ನಡ ಸುದ್ದಿ ಮಾಧ್ಯಮಗಳಲ್ಲಿ ಕೆಲಸ ಮಾಡಿದ್ದಾರೆ. ರಾಜಕೀಯ, ಕ್ರೀಡೆ, ವಾಣಿಜ್ಯ, ಸಿನಿಮಾ, ಸ್ಥಳೀಯ ಸುದ್ದಿಗಳನ್ನು ಪ್ರಕಟಿಸುತ್ತಿದ್ದಾರೆ. More »

Related Stories