ಭಾನುವಾರ ಬಹುನಿರೀಕ್ಷಿತ ಚೆನ್ನೈ ವರ್ಸಸ್​ ಆರ್​ಸಿಬಿ ಮ್ಯಾಚ್​ : ಕೇವಲ 60 ಸೆಕೆಂಡುಗಳಲ್ಲಿ ಟಿಕೆಟ್ಸ್​ ಸೋಲ್ಡ್​ಔಟ್

ಐಪಿಎಲ್​ ಪಂದ್ಯಾವಳಿಗೆ ಇರುವ ಅಭಿಮಾನಿಗಳು ಒಂದೆಡೆಯಾದರೆ ಆರ್​ಸಿಬಿ ವರ್ಸಸ್​ ಚೆನ್ನೈ ಸೂಪರ್​ ಕಿಂಗ್ಸ್​ (RCB Vs CSK 2026) ನಡುವಿನ ಪಂದ್ಯ ವೀಕ್ಷಣೆಗೆ ಇರುವ ಅಭಿಮಾನಿಗಳ ತೂಕವೇ ಮತ್ತೊಂದು ಕಡೆ. ಎರಡೂ ತಂಡಗಳಿಗೆ ಪರಸ್ಪರ ನಡೆಯುವ ಪಂದ್ಯಗಳು ಪ್ರತಿಷ್ಠೆಯ ಕಣವಿದ್ದಂತೆ. ಭಾನುವಾರದಂದು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆರ್​ಸಿಬಿ ವರ್ಸಸ್​ ಚೆನ್ನೈಸೂಪರ್​ ಕಿಂಗ್ಸ್​ ನಡುವೆ ಪಂದ್ಯ ನಡೆಯಲಿದ್ದು, ಕೇವಲ 1 ನಿಮಿಷಗಳಲ್ಲಿ ಮೈದಾನದ ಟಿಕೆಟ್​ ಸೋಲ್ಡ್​ ಔಟ್​ ಆಗಿದೆ.

ಭಾನುವಾರ ನಡೆಯಲಿರುವ ಪಂದ್ಯಗಳ ಟಿಕೆಟ್​ ಮಾರಾಟವನ್ನು ವೆಬ್​ಸೈಟ್​ ಹಾಗೂ ಆ್ಯಪ್​ ಮೂಲಕ ಆರ್​ಸಿಬಿ ನಡೆಸಿತ್ತು. ಕೇವಲ 1 ನಿಮಿಷಗಳ ಅವಧಿಯಲ್ಲಿ ಎಲ್ಲಾ ಟಿಕೆಟ್​ಗಳು ಮಾರಾಟವಾಗಿದೆ ಎಂದು ಆರ್​ಸಿಬಿ ತಿಳಿಸಿದೆ.

ಇದನ್ನೂ ಓದಿ: ರಾಜ್ಯದ ಮಹಿಳಾ ಕ್ರಿಕೆಟಿಗರಿಗೆ ಪಿಂಚಣಿ ಭಾಗ್ಯ..! ಮಾಜಿ ಸಿಂಹಿಣಿಯರಿಗೆ ಸಿಗಲಿದೆ ಮಾಸಿಕ ಪೆನ್ಶನ್

ಟಿಕೆಟ್‌ನ ಆರಂಭಿಕ ಬೆಲೆ ₹3750 ಇತ್ತು. ಗರಿಷ್ಠ ಬೆಲೆ ₹47000. ಆದರೆ ಕೆಲವೇ ಸ್ಟ್ಯಾಂಡ್‌ಗಳ ಟಿಕೆಟ್‌ಗಳನ್ನಷ್ಟೇ ಆರ್‌ಸಿಬಿ ಆನ್‌ಲೈನ್‌ನಲ್ಲಿ ಮಾರಾಟ ಮಾಡಿದೆ ಎನ್ನಲಾಗಿದ್ದು ಎಷ್ಟು ಟಿಕೆಟ್​ಗಳನ್ನು ಮಾರಾಟಕ್ಕೆ ಇಡಲಾಗಿತ್ತು ಎಂಬುದರ ಬಗ್ಗೆ ಆರ್​ಸಿಬಿ ಮ್ಯಾನೇಜ್​ಮೆಂಟ್​ ಅಧಿಕೃತ ಮಾಹಿತಿ ನೀಡಿಲ್ಲ.

ರಶ್ಮಿ ಎಸ್. | Rashmi S.

ರಶ್ಮಿ ಎಸ್. ನ್ಯೂಸ್‌ ನೆಕ್ಸ್ಟ್‌ ಕನ್ನಡ ( News Next Kannada) ದಲ್ಲಿ ಕಂಟೆಂಟ್‌ ರೈಟರ್‌ ಆಗಿ ಕೆಲಸ ಮಾಡುತ್ತಿದ್ದಾರೆ. ಪತ್ರಿಕೋದ್ಯಮ ವಿಭಾಗದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದು, ಹತ್ತು ವರ್ಷಗಳ ಕಾಲ ಕನ್ನಡ ಸುದ್ದಿ ಮಾಧ್ಯಮಗಳಲ್ಲಿ ಕೆಲಸ ಮಾಡಿದ್ದಾರೆ. ರಾಜಕೀಯ, ಕ್ರೀಡೆ, ವಾಣಿಜ್ಯ, ಸಿನಿಮಾ, ಸ್ಥಳೀಯ ಸುದ್ದಿಗಳನ್ನು ಪ್ರಕಟಿಸುತ್ತಿದ್ದಾರೆ. More »

Related Stories