ಕಾಪು ಮಾರಿಯಮ್ಮ ದೇಗುಲಕ್ಕೆ ಕ್ರಿಕೆಟಿಗ ಸೂರ್ಯಕುಮಾರ್​ ಪತ್ನಿ ದೇವಿಶಾ ಭೇಟಿ

Surya Kumar Yadav Wife Devisha : ಉಡುಪಿ : ಟೀಂ ಇಂಡಿಯಾ ಟಿ 20 ತಂಡದ ನಾಯಕ ಸೂರ್ಯ ಕುಮಾರ್​​ ಯಾದವ್​ ಅವರ ಪತ್ನಿ ದೇಶಿಶಾ ಅವರು ಪ್ರಸಿದ್ಧ ಕಾಪು ಮಾರಿಯಮ್ಮ ದೇಗುಲಕ್ಕೆ ಭೇಟಿ ನೀಡಿದ್ದಾರೆ.

Indian Cricket Team T20 Captian Surya Kumar Yadav Wife Devisha Visit Kaup Mariyamma Temple

ಪತಿ ಸೂರ್ಯಕುಮಾರ್ ಯಾದವ್‌ ಸದ್ಯ ಆಸ್ಟ್ರೇಲಿಯಾ ಪ್ರವಾಸದಲ್ಲಿದ್ದು, ಭಾರತ​ ಟಿ 20 ತಂಡವನ್ನು ಮುನ್ನೆಡೆಸುತ್ತಿದ್ದಾರೆ. ಪತಿ ಆಸ್ಟ್ರೇಲಿಯ ಪ್ರವಾಸದಲ್ಲಿದ್ದ ವೇಳೆಯಲ್ಲಿಯೇ ಪತ್ನಿ ದೇವಿಶಾ ಕಾಪು ಮಾರಿಯಮ್ಮನ ಗುಡಿಗೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದ್ದಾರೆ.

Kaup Mariyamma Temple

ದೇವಿಶಾ ಸೂರ್ಯ ಕುಮಾರ್‌ ಯಾದವ್‌ ಎರಡನೇ ಬಾರಿಗೆ ದೇವಿಶಾ ಕಾಪು ಮಾರಿಯಮ್ಮನ ದೇವಸ್ಥಾನಕ್ಕೆ ಭೇಟಿ ನೀಡುತ್ತಿದ್ದಾರೆ. ಉಚ್ಚಂಗಿ ಸಹಿತ ಮಾರಿಯಮ್ಮನ ದರ್ಶನ ಪಡೆದ ದೇವಿಶಾ ಅವರಿಗೆ ಪ್ರಧಾನ ಅರ್ಚಕ ವೇದಮೂರ್ತಿ ಶ್ರೀನಿವಾಸ ತಂತ್ರಿ ಪ್ರಸಾದ ನೀಡಿದರು.

ಇದನ್ನೂ ಓದಿ : ಹಳ್ಳಿ ಹೈದನ ವಿಭಿನ್ನ ಪ್ರೀ ವೆಡ್ಡಿಂಗ್‌ ಪೋಟೋ ಶೂಟ್‌ : ನೆಟ್ಟಿಗರ ಗಮನ ಸೆಳೆದ ವಿಡಿಯೋ

Indian Cricket Team T20 Captian Surya Kumar Yadav Wife Devisha Visit Kaup Mariyamma Temple

ಕಾಪು ಮಾರಿಯಮ್ಮ ದೇಗುಲದ ವ್ಯವಸ್ಥಾಪನ ಸಮಿತಿ ಹಾಗೂ ಅಭಿವೃದ್ಧಿ ಸಮಿತಿ ವತಿಯಿಂದ ದೇವಿಶಾ ಅವರನ್ನು ಸನ್ಮಾನಿಸಲಾಯಿತು. ಇತ್ತೀಚೆಗಷ್ಟೇ ಬ್ರಹ್ಮಕಲಶೋತ್ಸವ ಮೂಲಕ ಕಾಪುವಿನ ಮಾರಿಗುಡಿ ಹೊಸ ಮೆರುಗು ಪಡೆದುಕೊಂಡಿದೆ.

Indian Cricket Team T20 Captian Surya Kumar Yadav

ಮೂಲತಃ ಕರಾವಳಿ ಭಾಗದವರೇ ಆಗಿರುವ ದೇವಿಶಾ ಈ ಹಿಂದೆ ಸೂರ್ಯಕುಮಾರ್​ ಅವರ ಜೊತೆಯಲ್ಲಿ ಈ ದೇಗುಲಕ್ಕೆ ಭೇಟಿ ನೀಡಿದ್ದರು. ದೇವಸ್ಥಾನದ ಆವರಣದಲ್ಲಿರುವ ಬೃಹತ್​ ಕಲ್ಲಿನ ಕಂಬವನ್ನು ಸೂರ್ಯಕುಮಾರ್ ದಂಪತಿ ದೇವಸ್ಥಾನಕ್ಕೆ ಸೇವೆ ರೂಪದಲ್ಲಿ ನೀಡಿದ್ದರು. ಸದ್ಯ ಟೀಂ ಇಂಡಿಯಾ ಆಸ್ಟ್ರೇಲಿಯಾದಲ್ಲಿ ಟಿ 20 ಸರಣಿಯನ್ನು ಎದುರಿಸುತ್ತಿದೆ. ಈ ಹಿನ್ನೆಲೆಯಲ್ಲಿ ಸೂರ್ಯಕುಮಾರ್​ ಯಾದವ್​ ಕೂಡ ಆಸ್ಟ್ರೇಲಿಯಾದಲ್ಲಿದ್ದಾರೆ.

Indian Cricket Team T20 Captian Surya Kumar Yadav Wife Devisha Visit Kaup Mariyamma Temple

Kannada News Next Desk

Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021

Related Stories