ಟಿ 20 ವಿಶ್ವಕಪ್ ಬಳಿಕ ನಿವೃತ್ತಿ ಘೋಷಣೆ ವದಂತಿ : ಮೊದಲ ಬಾರಿಗೆ ಮೌನಮುರಿದ ಸೂರ್ಯಕುಮಾರ್ ಯಾದವ್
ಟಿ 20 ವಿಶ್ವಕಪ್ ಬಳಿಕ ಸೂರ್ಯಕುಮಾರ್ ಯಾದವ್ ನಿವೃತ್ತಿ ಘೋಷಿಸುತ್ತಾರೆ ಎಂಬ ವದಂತಿ ಎಲ್ಲೆಡೆ ಹರಿದಾಡುತ್ತಿದೆ. ಈ ವಿಚಾರವಾಗಿ ಇದೇ ಮೊದಲ ಬಾರಿಗೆ ಸೂರ್ಯಕುಮಾರ್ ಯಾದವ್ ಮೌನ ಮುರಿದಿದ್ದಾರೆ
ಸೂರ್ಯಕುಮಾರ್ ಯಾದವ್ ನಾಯಕತ್ವದಲ್ಲಿ ಟೀಂ ಇಂಡಿಯಾ ಐಸಿಸಿ ಟಿ 20 ವರ್ಲ್ಡ್ಕಪ್ 2026ರ ಫೈನಲ್ ಪಂದ್ಯಾಟದಲ್ಲಿ ನ್ಯೂಜಿಲೆಂಡ್ ವಿರುದ್ಧ 96 ರನ್ಗಳ ಅಮೋಘ ಜಯ ಸಾಧಿಸುವ ಮೂಲಕ ವಿಶ್ವ ದಿಗ್ಗಜರಾಗಿ ಹೊರಹೊಮ್ಮಿದೆ. ಟೀಂ ಇಂಡಿಯಾಗೆ ವಿಶ್ವಕಪ್ ಒಲಿಯುವಂತೆ ಮಾಡಿದ ನಾಯಕರ ಪಟ್ಟಿಯಲ್ಲಿ ಇದೀಗ ಸೂರ್ಯಕುಮಾರ್ ಯಾದವ್ ಕೂಡ ಸ್ಥಾನ ಪಡೆದಿದ್ದಾರೆ. ಅಲ್ಲದೇ ತಮ್ಮ ಮೊದಲ ನಾಯಕತ್ವದಲ್ಲಿಯೇ ವಿಶ್ವಕಪ್ ಗೆಲ್ಲುವ ಮೂಲಕ ರೋಹಿತ್ ಶರ್ಮಾ ಹಾಗೂ ಎಂ.ಎಸ್ ಧೋನಿ ದಾಖಲೆಗಳನ್ನು ಸರಿಗಟ್ಟಿದ್ದಾರೆ.
ಇನ್ನು ಟಿ 20 ವಿಶ್ವಕಪ್ ಬಳಿಕ ಸೂರ್ಯಕುಮಾರ್ ಯಾದವ್ ನಿವೃತ್ತಿ ಘೋಷಿಸುತ್ತಾರೆ ಎಂಬ ವದಂತಿ ಎಲ್ಲೆಡೆ ಹರಿದಾಡುತ್ತಿದೆ. ಈ ವಿಚಾರವಾಗಿ ಇದೇ ಮೊದಲ ಬಾರಿಗೆ ಸೂರ್ಯಕುಮಾರ್ ಯಾದವ್ ಮೌನ ಮುರಿದಿದ್ದಾರೆ. ಮಾಧ್ಯದವರೊಬ್ಬರ ಪ್ರಶ್ನೆಗೆ ಉತ್ತರಿಸಿದ ಯಾದವ್, ಎಲ್ಲವೂ ಚೆನ್ನಾಗಿಯೇ ನಡೆಯುತ್ತಿರುವಾಗ ನಿವೃತ್ತಿಯ ಬಗ್ಗೆ ಏಕೆ ಯೋಚಿಸಬೇಕು? ಎಂದು ಮರುಪ್ರಶ್ನಿಸಿದ್ದಾರೆ.
ಅಲ್ಲದೇ ತಮ್ಮ ಭವಿಷ್ಯದ ಯೋಜನೆಗಳ ಬಗ್ಗೆಯೂ ಇದೇ ಸಂದರ್ಭದಲ್ಲಿ ಮಾತನಾಡಿದ ಅವರು, ಒಲಿಂಪಿಕ್ನಲ್ಲಿ ಭಾರತ ಚಿನ್ನದ ಪದಕ ಗೆಲ್ಲುವಂತೆ ಮಾಡುವುದು ನನ್ನ ಮುಂದಿನ ಗುರಿಯಾಗಿದೆ. 2028ರ ಟಿ 20 ವಿಶ್ವಕಪ್ನಲ್ಲಿ ಭಾರತವನ್ನು ಮುನ್ನೆಡಸುವತ್ತ ಗಮನಹರಿಸುತ್ತಿವೆ. ಮುಂದಿನ ಗುರಿ ಒಲಿಂಪಿಕ್ಸ್.. ಒಲಿಂಪಿಕ್ಸ್ನ ಚಿನ್ನ ಹಾಗೂ ಆ ವರ್ಷದ ಟಿ 20 ವಿಶ್ವಕಪ್ ಗೆಲ್ಲುವುದು ಎಂದು ಹೇಳಿದರು.
ಇದನ್ನೂ ಓದಿ: ಟಿ20 ವಿಶ್ವಕಪ್ 2026: ಚಾಂಪಿಯನ್ ಭಾರತಕ್ಕೆ ₹25 ಕೋಟಿಗೂ ಅಧಿಕ ಬಹುಮಾನ
ವಿಶ್ವಕಪ್ ಫೈನಲ್ ಬಳಿಕ, ಸೂರ್ಯಕುಮಾರ್ ಯಾದವ್ ಅಹಮದಾಬಾದ್ನ ನರೇಂದ್ರ ಮೋದಿ ಕ್ರೀಡಾಂಗಣದ ಪಿಚ್ನ ಮಣ್ಣನ್ನು ತೆಗೆದು ತಮ್ಮ ಹೆಣೆಗೆ ತಿಲಕದಂತೆ ಹಚ್ಚಿಕೊಂಡಿದ್ದರು. 2024ರಲ್ಲಿ ವಿಶ್ವಕಪ್ ಟಿ 20 ಗೆಲುವಿನ ಬಳಿಕ ಅಂದು ಟೀಂ ಇಂಡಿಯಾ ನಾಯಕರಾಗಿದ್ದ ರೋಹಿತ್ ಶರ್ಮಾ ಬಾರ್ಬಡೋಸ್ ಪಿಚ್ನ ಚಿಟಿಕೆ ಮಣ್ಣನ್ನು ಬಾಯಿಗೆ ಹಾಕಿಕೊಂಡಿದ್ದರು.



