Team India: ಕೊಹ್ಲಿ, ಗಾಯಕ್ವಾಡ್ ಶತಕ, ಕೆಎಲ್ ರಾಹುಲ್ ಅರ್ಧ ಶತಕ : ಸರಣಿ ಗೆಲುವಿನತ್ತ ಟೀಂ ಇಂಡಿಯಾ
ರಾಯ್‌ಪುರ :Team India: ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಮೂರು ಪಂದ್ಯಗಳ ಏಕದಿನ ಸರಣಿಯ ಎರಡನೇ ಪಂದ್ಯದಲ್ಲಿ ಟೀಮ್ ಇಂಡಿಯಾ(Team India) ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದ್ದು, ಪ್ರವಾಸಿ ತಂಡಕ್ಕೆ 359 ರನ್‌ಗಳ ಬವಾಟೆ ಗುರಿ ನೀಡಿದೆ.
ಈ ಗೆಲುವಿನೊಂದಿಗೆ ಭಾರತ ತಂಡವು ಸರಣಿಯನ್ನು 2-0 ಅಂತರದಲ್ಲಿ ವಶಪಡಿಸಿಕೊಳ್ಳುವತ್ತ ದಿಟ್ಟ ಹೆಜ್ಜೆ ಇಟ್ಟಿದೆ. ಟೀಂ ಇಂಡಿಯಾದ ಆಟಗಾರ ವಿರಾಟ್ ಕೊಹ್ಲಿ (102 ರನ್) ಸತತ ಶತಕ ಬಾರಿಸಿದ್ರೆ, ಯುವ ಆಟಗಾರ ರುತುರಾಜ್ ಗಾಯಕ್ವಾಡ್ (105 ರನ್) ಅಮೋಘ ಶತಕ ಸಿಡಿಸಿದ್ದಾರೆ.
ಕೇವಲ 93 ಎಸೆತಗಳಲ್ಲಿ ಶತಕ ಪೂರೈಸಿದ ಕೊಹ್ಲಿ, ತಮ್ಮ ವೃತ್ತಿಜೀವನದ 53ನೇ ODI ಶತಕ ದಾಖಲಿಸಿದರು. ಮತ್ತೊಂದೆಡೆ, ರುತುರಾಜ್ 83 ಎಸೆತಗಳಲ್ಲಿ ತಮ್ಮ ಚೊಚ್ಚಲ ಶತಕ ಪೂರೈಸಿ ಮಿಂಚಿದರು. ಈ ಜೋಡಿಯು ಎರಡನೇ ವಿಕೆಟ್‌ಗೆ 195 ರನ್‌ಗಳ ಬೃಹತ್ ಜೊತೆಯಾಟ ನೀಡಿತು.
Also Read: ವಿರಾಟ್ ವಿಶ್ವದಾಖಲೆ : ಕೊಹ್ಲಿ ಶತಕಗಳ ಸರದಾರ, ಸಚಿನ್ ತೆಂಡೂಲ್ಕರ್ ದಾಖಲೆ ಉಡೀಸ್
ಇನ್ನು ನಾಯಕ ನಾಯಕ ಕೆಎಲ್ ರಾಹುಲ್ ಭರ್ಜರಿ ಫಾರ್ಮ್‌ನಲ್ಲಿದ್ದಾರೆ. ಮೊದಲ ಪಂದ್ಯದಲ್ಲಿ ಅರ್ಧ ಶತಕ ಗಳಿಸಿದ್ದ ರಾಹುಲ್ ಎರಡನೇ ಪಂದ್ಯದಲ್ಲಿಯೂ ಆಕರ್ಷಕ ಬ್ಯಾಟಿಂಗ್ ನಡೆಸಿದಾರೆ. ಕೇವಲ 43 ಎಸೆತಗಳಲ್ಲಿ 66 ರನ್‌ಗಳನ್ನು ಬಾರಿಸಿದ ರಾಹುಲ್ ಅಜೇಯರಾಗಿ ಉಳಿದರು.
ಕೆಎಲ್ ರಾಹುಲ್ ಕೊನೆಯ ಹಂತದಲ್ಲಿ ಆಕರ್ಷಕ ಬ್ಯಾಟಿಂಗ್ ನಡೆಸಿದ್ದು ವಿಶೇಷವಾಗಿತ್ತು. ಮೊದಲ ಪಂದ್ಯವನ್ನು ಜಯಿಸಿರುವ ಭಾರತ ಇದೀಗ ಎರಡನೇ ಪಂದ್ಯವನ್ನೂ ಗೆದ್ರೆ ಸರಣಿಯನ್ನು ಕೈವಶ ಮಾಡಿಕೊಳ್ಳಲಿದೆ.



