ಮೊಬೈಲ್ ಅಂಗಡಿಯಲ್ಲಿ ಕಳವು : ಸಿಸಿ ಕ್ಯಾಮರಾ ಡಿವಿಆರ್ ಹೊತ್ತೊಯ್ದ ಕಳ್ಳರು

0

ಬೈಂದೂರು : ಮೊಬೈಲ್ ಆಂಗಡಿಯೊಂದಕ್ಕೆ ಕಳ್ಳರು ನುಗ್ಗಿ ಸುಮಾರು 3 ಲಕ್ಷ ರೂಪಾಯಿ ಮೌಲ್ಯದ ಸೊತ್ತಗಳನ್ನು ಹೊತ್ತೊಯ್ದ ಘಟನೆ ಉಪ್ಪುಂದದ ಅಂಬಾಗಿಲು ಬಳಿ ನಡೆದಿದೆ. ರಾತ್ರಿಯ ವೇಳೆಯಲ್ಲಿ ನಾವುಂದ ಎಂಜೆಎಂ ಮಸೀದಿ ಹತ್ತಿರ ನಿವಾಸಿ ಮಹಮ್ಮದ್ ಮುಸ್ತಾಕ್ ಎಂಬವರಿಗೆ ಸೇರಿದ ಮೊಬೈಲ್ ಕೇರ್ ಎಂಬ ಅಂಗಡಿಯ ಶಟರ್ ಮುರಿದು ಒಳ ನುಗ್ಗಿದ ಕಳ್ಳರು, 7 ಹೊಸ ಮೊಬೈಲ್, ಮೊಬೈಲ್‌ಗೆ ಹಾಕುವ ಗ್ಲಾಸ್ ಗಾರ್ಡ್, ಮೊಬೈಲ್ ಚಾರ್ಜರ್, ಮೆಮೋರಿ ಕಾರ್ಡ್, ಪೆನ್‌ಡ್ರೈವ್, ಸರ್ವಿಸ್‌ಗಾಗಿ ಬೇರೆ ಬೇರೆ ಮೊಬೈಲ್ ಶಾಪ್‌ಗಳಿಂದ ಬಂದ ಮೊಬೈಲ್‌ಗಳು, ಹೆಡ್‌ಪೋನ್, ಸೆಲ್ಫಿ ಸ್ಟಿಕ್, ಡಾಟಾ ಕೇಬಲ್, ಅಡಾಪ್ಟರ್ ಹಾಗೂ ಅಂಗಡಿಯ ಕ್ಯಾಸ್ ಟೇಬಲ್ ನಲ್ಲಿದ್ದ 16,000 ರೂಪಾಯಿ ನಗದು ದೋಚಿ ಪರಾರಿಯಾಗಿದ್ದಾರೆ. ಮಾತ್ರವಲ್ಲ ತಮ್ಮ ಗುರುತು ಪತ್ತೆ ಹಚ್ಚಬಾರದು ಅನ್ನೋ ಕಾರಣಕ್ಕೆ ಅಂಗಡಿಯಲ್ಲಿದ್ದ ಕ್ಯಾಮರಾದ ಟಿವಿ ಹಾಗೂ ಡಿ.ವಿ.ಆರ್ ಹೊತ್ತೊಯ್ದಿದ್ದಾರೆ.

Leave A Reply

Your email address will not be published.