ಉಗ್ರರ ಟಾರ್ಗೆಟ್ ಆಗಿತ್ತಾ ಕದ್ರಿ ದೇಗುಲ ! ಬಾಂಬ್ ಇಟ್ಟಿದ್ದ ವ್ಯಕ್ತಿ ಕೇಳಿದ್ದ ದೇಗುಲದ ದಾರಿ

0

ಮಂಗಳೂರು : ವಿಮಾನ ನಿಲ್ದಾಣದಲ್ಲಿ ಬಾಂಬ್ ಪತ್ತೆಯಾದ ಬೆನ್ನಲ್ಲೇ ಮಂಗಳೂರಿನ ಕದ್ರಿ ದೇಗುಲ ಕೂಡ ಉಗ್ರರ ಟಾರ್ಗೆಟ್ ಆಗಿತ್ತಾ ಅನ್ನೋ ಅನುಮಾನ ಇದೀಗ ಕಾಡುತ್ತಿದೆ. ಮಂಗಳೂರಿನ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಾಂಬ್ ಇರಿಸಿದ್ದ ವ್ಯಕ್ತಿ ಆಟೋದಲ್ಲಿ ಪ್ರಯಾಣಿಸುವ ವೇಳೆಯಲ್ಲಿ ಕದ್ರಿಯ ಮಂಜುನಾಥನ ದೇವಸ್ಥಾನದ ದಾರಿಯನ್ನು ಕೇಳಿದ್ದ ಅನ್ನೋ ಸ್ಪೋಟಕ ಮಾಹಿತಿ ಹೊರಬಿದ್ದಿದೆ.

ಮಂಗಳೂರು ನಗರದಲ್ಲಿರೋ ಕದ್ರಿ ಮಂಜುನಾಥನ ದೇವಸ್ಥಾನ ರಾಜ್ಯದ ಪ್ರಮುಖ ಪುಣ್ಯಕ್ಷೇತ್ರಗಳಲ್ಲೊಂದು. ಕದ್ರಿ ದೇಗುಲದಲ್ಲೀಗ ಬ್ರಹ್ಮರಥೋತ್ಸವ ಕಾರ್ಯಕ್ರಮ ನಡೆಯುತ್ತಿದೆ. ಬ್ರಹ್ಮೋತ್ಸವದಲ್ಲಿ ಸುಮಾರು 30 ರಿಂದ 40 ಸಾವಿರ ಮಂದಿ ಜಮಾಯಿಸುತ್ತಿದ್ದಾರೆ. ಹೀಗಾಗಿ ದೇಗುಲವನ್ನು ಉಗ್ರರು ಟಾರ್ಗೆಟ್ ಮಾಡಿಕೊಂಡಿದ್ರಾ ಅನ್ನೋ ಅನುಮಾನ ಇದೀಗ ಪೊಲೀಸರನ್ನು ಕಾಡುತ್ತಿದೆ. ವಿಮಾನ ನಿಲ್ದಾಣದಲ್ಲಿ ಬಾಂಬ್ ಇರಿಸಿದ್ದ ಶಂಕಿತ ವ್ಯಕ್ತಿಯ ಬಳಿಯಲ್ಲಿ ಎರಡು ಬ್ಯಾಗ್ ಗಳಿದ್ದು, ಒಂದು ಬ್ಯಾಗ್ ನ್ನು ವಿಮಾನ ನಿಲ್ದಾಣದ ಟಿಕೆಟ್ ಕೌಂಟರ್ ಬಳಿಯಲ್ಲಿ ಇರಿಸಿದ್ದ. ಹೀಗಾಗಿ ತನ್ನ ಬಳಿಯಲ್ಲಿದ್ದ ಇನ್ನೊಂದು ಬ್ಯಾಗ್ ನಲ್ಲಿಯೂ ಬಾಂಬ್ ಇತ್ತಾ. ಅದೇ ಬಾಂಬ್ ನ್ನು ಇಟ್ಟುಕೊಂಡೇ ಕದ್ರಿ ದೇಗುಲದ ದಾರಿ ಕೇಳಿದ್ನಾ ಅನ್ನೋ ಪ್ರಶ್ನೆ ಎದುರಾಗಿದೆ. ವಿಮಾನ ನಿಲ್ದಾಣದಿಂದ ಮಂಗಳೂರಿನತ್ತ ಆಟೋದಲ್ಲಿ ಹೊರಟಿದ್ದ ಶಂಕಿತ ವ್ಯಕ್ತಿ ನಗರದ ಪಂಪ್ ವೆಲ್ ಬಳಿಯಲ್ಲಿ ಆಟೋದಿಂದ ಇಳಿದಿದ್ದ. ಆಟೋದಲ್ಲಿ ಇಳಿಯುತ್ತಿದ್ದಾಗಲೇ ಕದ್ರಿ ದೇಗುಲದ ದಾರಿ ಕೇಳಿದ್ದ ಎನ್ನಲಾಗುತ್ತಿದೆ.

ಹೀಗಾಗಿ ಉಗ್ರರು ಮಂಗಳೂರನ್ನೇ ಟಾರ್ಗೆಟ್ ಮಾಡಿಕೊಂಡಿದ್ರಾ ಅನ್ನೋ ಹಿನ್ನೆಲೆಯಲ್ಲಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಕದ್ರಿ ದೇಗುಲಕ್ಕೆ ಉಗ್ರರ ಟಾರ್ಗೆಟ್ ಇದೆ ಅನ್ನೋ ಮಾಹಿತಿ ಹೊರ ಬೀಳುತ್ತಿದ್ದಂತೆಯೇ ದೇಗುಲಕ್ಕೆ ಬಿಗಿ ಒದಗಿಸಲಾಗಿದೆ. ಸಿಆರ್ ಪಿಎಫ್ ಸಿಬ್ಬಂಧಿಗಳಿಂದ ಭದ್ರತೆಯನ್ನು ಕೈಗೊಳ್ಳಲಾಗುತ್ತಿದ್ದು, ದೇವಸ್ಥಾನಕ್ಕೆ ಬರೋ ಭಕ್ತರ ಮೇಲೂ ಹದ್ದಿನಕಣ್ಣು ಇರಿಸಲಾಗಿದೆ.

Leave A Reply

Your email address will not be published.