ಪ್ರತಿದಿನ ಸ್ನಾನ ಮಾಡದ ಗಂಡನಿಗೆ ವಿಚ್ಛೇದನ ಕೊಡಲು ಮುಂದಾದ ಪತ್ನಿ.

0

ಪಾಟ್ನಾ : ವಿಶ್ವದಲ್ಲಿ ಇತ್ತೀಚೆಗೆ ವಿಚ್ಛೇದನ ಪ್ರಕರಣಗಳು ಹೆಚ್ಚಾಗುತ್ತಿದ್ದಂತೆ ನನ್ನ ಗಂಡ ಪ್ರತಿದಿನ ಸ್ನಾನ ಮಾಡಲ್ಲ , ಹಲ್ಲು ಉಜ್ಜದೆ ಗಬ್ಬು ನಾರುತ್ತಿದ್ದಾನೆ ಎಂಬ ಕಾರಣ ನೀಡಿ ವಿಚ್ಛೇದನ ನೀಡಲು ಪತ್ನಿ ಮುಂದಾಗಿದ್ದಾಳೆ.

ಬಿಹಾರದ ವೈಶಾಲಿ ಜಿಲ್ಲೆಯ ನಯಗೌನ ಗ್ರಾಮದ ಸೋನಿ ದೇವಿ (20) ತನ್ನ ಪತಿ ಮನೀಶ್ (23) ಪ್ರತಿದಿನ ಸ್ನಾನ ಮಾಡಲ್ಲ, ಹಲ್ಲನ್ನು ಉಜ್ಜುವುದಿಲ್ಲ, ಶೇವ್ ಕೂಡ ಮಾಡದೆ ಅಸಹ್ಯವಾಗಿದ್ದು ಆತನೊಂದಿಗೆ ಜೀವನ ನಡೆಸಲು ಕಷ್ಟವಾಗುತ್ತಿರುವುದರಿಂದ ನನಗೆ ಆತನಿಂದ ವಿಚ್ಛೇದನ ಕೊಡಿಸುವುದರ ಜೊತೆಗೆ ಮದುವೆ ವೇಳೆ ನೀಡಿದ ವರದಕ್ಷಿಣೆಯನ್ನು ಕೊಡಿಸುವಂತೆ ರಾಜ್ಯ ಮಹಿಳಾ ಆಯೋಗದ ಮುಂದೆ ಮೊರೆ ಹೋಗಿದ್ದಾಳೆ.

ಆಯೋಗದ ಸದಸ್ಯೆ ಪ್ರತಿಮಾ ಸಿನ್ಹಾ, ವಿಚ್ಛೇದನ ಪಡೆಯಲು ಇಂತಹ ಕಾರಣ ನೀಡಬೇಡ ಎಂದು ಹೇಳುವುದರ ಜೊತೆಗ ಶುಚಿತ್ವವನ್ನು ಕಾಪಾಡಿಕೊಳ್ಳುವಂತೆ ಮನೀಶ್‍ಗೆ ಎಚ್ಚರಿಕೆ ನೀಡಿದ್ದಾರೆ.  ಇನ್ನು ಮುಂದೆ ಪ್ರತಿ ದಿನ ಸ್ನಾನ ಮಾಡಿ, ಹಲ್ಲು ಉಜ್ಜುವುದಲ್ಲದೆ ಪತ್ನಿಯ ಮನಸ್ಸನ್ನು ಗೆಲ್ಲುವುದಾಗಿ ರಾಜ್ಯ ಮಹಿಳಾ ಆಯೋಗದ ಮುಂದೆ ಹೇಳಿದ್ದಾನೆ.

ಈ ದಂಪತಿಗಳಿಗೆ ಎರಡು ತಿಂಗ ಕಾಲ ಅವಕಾಶ ನೀಡಿದ್ದು, ಒಂದು ವೇಳೆ ಹೊಂದಾಣಿಕೆಯಾಗದಿದ್ದರೆ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಪ್ರತಿಮಾ ತಿಳಿಸಿದ್ದಾರೆ.

Leave A Reply

Your email address will not be published.