15 month old child died: ಪತಿ – ಪತ್ನಿಯ ಜಗಳಕ್ಕೆ 15 ತಿಂಗಳ ಕಂದಮ್ಮ ಬಲಿ

ರಾಜಸ್ಥಾನ : (15 month old child died) ಪತ್ನಿಯೊಂದಿಗೆ ಜಗಳವಾಡಿದ ನಂತರ ವ್ಯಕ್ತಿಯೊಬ್ಬ ತನ್ನ 15 ತಿಂಗಳ ಮಗಳನ್ನು ಗೋಡೆಗೆ ಎಸೆದು ಕೊಂದಿರುವ ಆಘಾತಕಾರಿ ಘಟನೆ ಜುಂಜುನುವಿನ ನವಲಗಢ ಪ್ರದೇಶದ ಕೈರು ಗ್ರಾಮದಲ್ಲಿ ನಡೆದಿದೆ. ಇದೀಗ ಆರೋಪಿ ತಂದೆಯನ್ನು ಪೊಲೀಸರು ವಶಕ್ಕೆ ಪಡೆದಿದ್ದು, ವಿಚಾರಣೆ ನಡೆಸಲಾಗುತ್ತಿದೆ.

ಪರಸ್ರಾಂಪುರ ಗ್ರಾಮದ ಕವಿತಾ ಅವರು ಗಿರ್ಧರ್‌ಪುರದಲ್ಲಿ ಕೈಲಾಶ್ ಅವರನ್ನು ವಿವಾಹವಾಗಿದ್ದರು. ಇತ್ತೀಚೆಗಷ್ಟೇ ಕವಿತಾ ತನ್ನ ತಾಯಿಯ ಗ್ರಾಮಕ್ಕೆ ಗಂಗೌರ್ ಪೂಜೆಗೆಂದು ಹೋಗಿದ್ದರು. ಭಾನುವಾರ ಬೆಳಗ್ಗೆ ಪತಿ ಕೈಲಾಶ್ ಅವರನ್ನು ಕರೆದುಕೊಂಡು ಹೋಗಲು ಗ್ರಾಮಕ್ಕೆ ಬಂದಿದ್ದೂ ಆಕೆ ಗಂಡನೊಂದಿಗೆ ಹೋಗಲು ಒಪ್ಪಲಿಲ್ಲ. ಕವಿತಾ ನಿರಾಕರಿಸಿದ ನಂತರ, ಮನೆಯಲ್ಲಿದ್ದ ಆಕೆಯ ತಾಯಿಯ ಚಿಕ್ಕಪ್ಪ ಕೂಡ ಕೈಲಾಶ್ ಅವರನ್ನು ಹಿಂತಿರುಗುವಂತೆ ಹೇಳಿದ್ದಾರೆ. ಇದರಿಂದ ಕೋಪಗೊಂಡ ಕೈಲಾಶ್, ಕವಿತಾ ಮಾವನ ಮಡಿಲಲ್ಲಿ ಆಟವಾಡುತ್ತಿದ್ದ ತನ್ನ 15 ತಿಂಗಳ ಮಗಳನ್ನು ಕಿತ್ತುಕೊಂಡು ಅಲ್ಲಿಂದ ಹೊರಟಿದ್ದಾನೆ. ಈ ವೇಳೆ ಕುಟುಂಬ ಸದಸ್ಯರು ಆತನನ್ನು ತಡೆದಿದ್ದಾರೆ.

ಕುಟುಂಬದ ಸದಸ್ಯರು ಇದನ್ನು ವಿರೋಧಿಸಿ ಓಜಸ್ವಿಯನ್ನು ಹಿಂದಿರುಗಿಸುವಂತೆ ಕೈಲಾಶ್ ಅವರನ್ನು ಕೇಳಿದ್ದು, ಕೈಲಾಶ್‌ ಕೋಪದ ಭರದಲ್ಲಿ ಮಗಳನ್ನು ಗೋಡೆಗೆ ಎಸೆದಿದ್ದಾನೆ. ಈ ವೇಳೆ ಗಂಭೀರವಾಗಿ ಗಾಯಗೊಂಡಿದ್ದ ಮಗು ಸ್ಥಳದಲ್ಲೇ ಸಾವನ್ನಪ್ಪಿದೆ. ಪತಿ ಪತ್ನಿಯರ ಇಬ್ಬರ ಜಗಳಕ್ಕೆ ಕಾರಣ ಕೇಳಿದಾಗ, ಕವಿತಾ ಮತ್ತು ಆಕೆಯ ತಂಗಿ ಕೈಲಾಶ್ ಮತ್ತು ಆತನ ಕಿರಿಯ ಸಹೋದರನೊಂದಿಗೆ ಒಂದೇ ಮನೆಗೆ ಮದುವೆಯಾಗಿದ್ದಾರೆ. ಕೈಲಾಶ್‌ನ ಕಿರಿಯ ಸಹೋದರ ಕುಡಿತದ ಚಟ ಹೊಂದಿದ್ದು, ಇದು ದಂಪತಿಗಳು ಮತ್ತು ಕವಿತಾ ಮತ್ತು ಕೈಲಾಶ್ ನಡುವೆ ಜಗಳಕ್ಕೆ ಕಾರಣವಾಗುತ್ತಿತ್ತು ಎನ್ನಲಾಗಿದೆ.

ಇದನ್ನೂ ಓದಿ : Man died in police custody: ಪೊಲೀಸ್ ಕಸ್ಟಡಿಯಲ್ಲಿ ವ್ಯಕ್ತಿ ಸಾವು : ಸಬ್ ಇನ್ಸ್ ಪೆಕ್ಟರ್ ಅಮಾನತು

ಇದನ್ನೂ ಓದಿ : Oil tanker-bus accident: ತೈಲ ಟ್ಯಾಂಕರ್-ಬಸ್ ಢಿಕ್ಕಿ : 27 ಮಂದಿಗೆ ಗಾಯ

ಸದ್ಯ ಇದೀಗ ಘಟನೆಯ ಕುರಿತು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಆರೋಪಿ ಕೈಲಾಶ್‌ ನನ್ನು ವಶಪಡಿಸಿಕೊಂಡಿದ್ದಾರೆ. ಆರೋಪಿಯ ವಿಚಾರಣೆ ನಡೆಯುತ್ತಿದ್ದು, ತನಿಖೆ ಮುಂದುವರೆದಿದೆ.

15 month old child died: 15 month old child died due to husband-wife quarrel

Comments are closed.