HIV Positive Blood: ಪ್ರೀತಿ ಸಾಬೀತುಪಡಿಸಬೇಕೆಂದು ಹೆಚ್​ಐವಿ ಸೋಂಕಿತ ಪ್ರಿಯಕರನ ರಕ್ತವನ್ನು ತನ್ನ ದೇಹಕ್ಕೆ ಚುಚ್ಚಿಸಿಕೊಂಡ ಬಾಲಕಿ

ಆಸ್ಸಾಂ : HIV Positive Blood: ಪ್ರೀತಿ ಕುರುಡು ಎಂದು ಹೇಳುತ್ತಾರೆ. ಪ್ರೀತಿಗೆ ಯಾವುದೇ ಮಿತಿ ಹಾಗೂ ಗಡಿ ಇರೋದಿಲ್ಲ. ಪ್ರೀತಿಯ ಹುಚ್ಚು ಒಮ್ಮೆ ಹಿಡಿದರೆ ಸಾಕು ತಾವು ಏನು ಮಾಡ್ತಿದ್ದೇವೆ ಎಂಬ ಪರಿಜ್ಞಾನ ಕೂಡ ಕೆಲವರಿಗೆ ಇರೋದಿಲ್ಲ . ಈ ಮಾತಿಗೆ ಸಾಕ್ಷಿ ಎಂಬಂತಹ ಘಟನೆಯೊಂದು ಆಸ್ಸಾಂನ ಸುಲ್ಕುಚಿ ಎಂಬಲ್ಲಿ ನಡೆದಿದೆ. 15 ವರ್ಷದ ಬಾಲಕಿ ತನ್ನ ಪ್ರೀತಿಯನ್ನು ಸಾಬೀತು ಪಡಿಸಬೇಕು ಎಂಬ ಹುಚ್ಚು ಹಠದಲ್ಲಿ ತನ್ನ ಹೆಚ್​ಐವಿ ಸೋಂಕನ್ನು ಹೊಂದಿದ್ದ ತನ್ನ ಪ್ರಿಯತಮನ ರಕ್ತವನ್ನು ತನ್ನ ದೇಹಕ್ಕೆ ಚುಚ್ಚಿಕೊಂಡಿದ್ದಾಳೆ.


ಹಜೋದಲ್ಲಿನ ಸತ್ಡೋಲಾದ ಹೆಚ್​ಐವಿ ಪೀಡಿತ ಯುವಕನನ್ನು ಈ 15 ವರ್ಷದ ಬಾಲಕಿ ಫೇಸ್​ಬುಕ್​ ಮೂಲಕ ಪರಿಚಯ ಮಾಡಿಕೊಂಡಿದ್ದಳು. ಅತ್ಯಂತ ವೇಗವಾಗಿ ಇಬ್ಬರ ನಡುವೆ ಪ್ರೀತಿ ಬೆಳೆದಿತ್ತು. ಕಳೆದ ಮೂರು ವರ್ಷಗಳಿಂದ ಇವರಿಬ್ಬರು ಒಬ್ಬರನ್ನೊಬ್ಬರು ಪ್ರೀತಿಸುತ್ತಿದ್ದರು. ಪ್ರಿಯತಮನನ್ನು ಬಿಟ್ಟರಲು ಸಾಧ್ಯವೇ ಇಲ್ಲ ಎಂಬ ಸ್ಥಿತಿಗೆ ಬಾಲಕಿ ತಲುಪಿದ್ದಳು. ಅನೇಕ ಬಾರಿ ಈಕೆ ತನ್ನ ಪ್ರಿಯಕರನ ಜೊತೆಯಲ್ಲಿ ಮನೆ ಬಿಟ್ಟು ಹೋಗಲೂ ಸಹ ಮುಂದಾಗಿದ್ದಳು ಎನ್ನಲಾಗಿದೆ.

ಆದರೆ ಈ ಬಾರಿ ಇನ್ನೂ ಒಂದು ಹೆಜ್ಜೆ ಮುಂದೆ ಹೋದ ಬಾಲಕಿಯು ಯಾರೂ ಊಹಿಸದ ಕೆಲಸವೊಂದನ್ನು ಮಾಡಿದ್ದಾಳೆ. ಹೆಚ್​​ಐವಿ ಪೀಡಿತನಾದ ತನ್ನ ಪ್ರೇಮಿಯ ರಕ್ತವನ್ನು ಸೀರಿಂಜ್​​ನಿಂದ ತೆಗೆದುಕೊಂಡು ಬಾಲಕಿಯು ಆ ರಕ್ತವನ್ನು ತನ್ನ ದೇಹಕ್ಕೆ ಇಂಜೆಕ್ಟ್​ ಮಾಡಿಕೊಂಡಿದ್ದಾಳೆ.


ಪ್ರಸ್ತುತ ವೈದ್ಯರು ಬಾಲಕಿಯ ಆರೋಗ್ಯದ ಮೇಲೆ ನಿಗಾ ವಹಿಸಿದ್ದಾರೆ. ಹಜೋ ಪೊಲೀಸರು ಪ್ರಿಯಕರನನ್ನು ವಶಕ್ಕೆ ಪಡೆದಿದ್ದಾರೆ. ಬಾಲಕಿಯ ಕುಟುಂಬವು ಪ್ರಿಯಕರನ ವಿರುದ್ಧ ಕಾನೂನು ಹೋರಾಟಕ್ಕೆ ಮುಂದಾಗಿದೆ. ಈ ವಿಚಾರವು ಸೋಶಿಯಲ್​ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗಿದ್ದು ಅನೇಕರು ಆಘಾತವನ್ನು ವ್ಯಕ್ತಪಡಿಸಿದರೆ ಇನ್ನೂ ಕೆಲವರು ಈ ಬಗ್ಗೆ ಮೀಮ್ಸ್​, ಟ್ರೋಲ್​ಗಳನ್ನು ಮಾಡಿ ನಗಾಡುತ್ತಿದ್ದಾರೆ.

ಇದನ್ನು ಓದಿ : Siddaramaiah Congress PM candidate : ಲೋಕಸಭೆ ಚುನಾವಣೆಗೆ ಕಾಂಗ್ರೆಸ್ ಸಿದ್ಧತೆ : ಪ್ರಧಾನಿ ಅಭ್ಯರ್ಥಿಯಾಗಿ ಸಿದ್ಧರಾಮಯ್ಯ

ಇದನ್ನೂ ಓದಿ : Nitish Kumar resigns : ಬಿಜೆಪಿಯೊಂದಿಗಿನ ಮೈತ್ರಿ ಮುರಿದುಕೊಂಡ ಬೆನ್ನಲ್ಲೇ ಬಿಹಾರ ಸಿಎಂ ಸ್ಥಾನಕ್ಕೆ ನಿತೀಶ್​ ಕುಮಾರ್​ ರಾಜೀನಾಮೆ

15-Year-Old Assam Girl Injects Boyfriend’s HIV Positive Blood Into Her Body to Prove Her Love

Comments are closed.