ಬ್ರಹ್ಮಾವರ : 1 ರೂಪಾಯಿ ವಿಚಾರಕ್ಕೆ ಟೋಲ್ ನಲ್ಲಿ ಪ್ರಯಾಣಿಕರು ಹಾಗೂ ಟೋಲ್ ಸಿಬ್ಬಂದಿ ಹೊಡೆದಾಡಿಕೊಂಡಿರುವ ಘಟನೆ ಉಡುಪಿ ಜಿಲ್ಲೆಯ ಸಾಸ್ತಾನದಲ್ಲಿ ನಡೆದಿದೆ. ಟೋಲ್ ಸಿಬ್ಬಂದಿ ಪ್ರಯಾಣಿಕರಿಗೆ 1 ರೂಪಾಯಿ ಹಣವನ್ನು ಕಡಿಮೆ ನೀಡಿದ್ದರು. ಇದನ್ನ ಯುವಕರು ಪ್ರಶ್ನಿಸುತ್ತಿದ್ದಂತೆಯೇ ಗಲಾಟೆಗೆ ಶುರುವಾಗಿದೆ. ಟೋಲ್ ಸಿಬ್ಬಂದಿ ಹಾಗೂ ಯುವಕರು ಹೊಡೆದಾಡಿಕೊಂಡಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಯುವಕರ ತಂಡವೊಂದು ಸಾಸ್ತಾನ ಟೋಲ್ ಮೂಲಕ ಬ್ರಹ್ಮಾವರದ ಕಡೆಗೆ ಪ್ರಯಾಣಿಸಿತ್ತು. ಈ ವೇಳೆ ಟೋಲ್ ಸುಂಕವಾಗಿ ಪ್ರಯಾಣಿಕರು 50 ರೂಪಾಯಿ ನೀಡಿದ್ದಾರೆ. ಆದರೆ ಚಿಲ್ಲರೆ ಇಲ್ಲವೆಂದು ಟೋಲ್ ಸಿಬ್ಬಂದಿ 5 ರೂಪಾಯಿಯ ಬದಲು 4 ರೂಪಾಯಿ ಹಣವನ್ನು ವಾಪಾಸ್ ನೀಡಿದ್ದಾರೆ. ಯುವಕರ ತಂಡ ಸ್ವಲ್ಪ ಹೊತ್ತಿನಲ್ಲಿ ಮರಳಿ ಬಂದಿದೆ. ಈ ವೇಳೆಯಲ್ಲಿ 44 ರೂಪಾಯಿಯನ್ನು ಟೋಲ್ ಸಿಬ್ಬಂದಿಗೆ ನೀಡಿದ್ದಾರೆ. ಆದರೆ 44 ರೂಪಾಯಿ ಸ್ವೀಕರಿಸಲು ಸಿಬ್ಬಂದಿ ರೆಡಿಯಿರಲಿಲ್ಲ. ಕೊನೆಗೆ ಯುವಕರು 10 ರೂಪಾಯ ನೀಡಿದ್ದಾರೆ. ಆಗ ಸಿಬ್ಬಂದಿ ಕೇವಲ 5 ರೂಪಾಯಿಯನ್ನು ಮಾತ್ರವೇ ನೀಡಿ, ಚಿಲ್ಲರೆ ಇಲ್ಲಾ ಎಂದಿದ್ದಾರೆ. ಇದು ಯುವಕರನ್ನು ಕೆರಳಿಸಿತ್ತು.

ಈ ವೇಳೆಯಲ್ಲಿ ಯುವಕರು ಹಾಗೂ ಟೋಲ್ ಸಿಬ್ಬಂದಿಯ ನಡುಗೆ ಮಾತಿನ ಚಕಮಕಿ ನಡೆದಿದೆ. ಎರಡೂ ಗುಂಪುಗಳು ಪರಸ್ಪರ ಹೊಡೆದಾಡಿಕೊಂಡಿದ್ದು, ಸ್ಥಳೀಯರು ಇಬ್ಬರ ಜಗಳವನ್ನು ಬಿಡಿಸಿದ್ದಾರೆ ಎಂದು ತಿಳಿದುಬಂದಿದೆ.