5 year girl died: ಕಬ್ಬಿಣದ ಗೇಟ್‌ ಬಿದ್ದು 5 ವರ್ಷದ ಬಾಲಕಿ ಸಾವು

ಚೆನ್ನೈ: (5 year girl died) ಪ್ರಸಿದ್ದ ಬಟ್ಟೆಯಂಗಡಿಯೊಂದರಲ್ಲಿ ಕಬ್ಬಿಣದ ಗೇಟ್‌ ಬಿದ್ದು, 5 ವರ್ಷದ ಬಾಲಕಿ ಸಾವನ್ನಪ್ಪಿರುವ ಘಟನೆ ಚೆನ್ನೈನ ಲ್ಲಿಪಾಕ್ಕಂನ ಹರ್ಲಿಕ್ಸ್ ರಸ್ತೆಯಲ್ಲಿ ನಡೆದಿದೆ. ಶಂಕರ್ ಹಾಗೂ ವಾಣಿ ದಂಪತಿಯ ಪುತ್ರಿ ಹರಿಣಿ ( 5 ವರ್ಷ) ಮೃತ ಬಾಲಕಿ.

ಚೆನ್ನೈನ ಕಿಲ್ಲಿಪಾಕ್ಕಂನ ಹರ್ಲಿಕ್ಸ್ ರಸ್ತೆಯಲ್ಲಿರುವ ಜನಪ್ರಿಯ ಬಟ್ಟೆ ಅಂಗಡಿಯಲ್ಲಿ ಶಂಕರ್ ವಾಹನ ಅರೇಂಜರ್ ಆಗಿ ಕೆಲಸ ಮಾಡುತ್ತಿದ್ದು, ನಿನ್ನೆ ರಾತ್ರಿಯೂ ಕೂಡ ಶಂಕರ್ ಎಂದಿನಂತೆ ಈ ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ. ಆಗ ಶಂಕರನ ಹೆಂಡತಿ ವಾಣಿ ಮತ್ತು ಅವನ ಮಗಳು ಶ್ರೀ ಹರಿಣಿ ಅವನನ್ನು ನೋಡಲು ಬಟ್ಟೆ ಅಂಗಡಿಗೆ ಬಂದಿದ್ದು, ಆವರಣದಲ್ಲಿದ್ದ 20 ಅಡಿ ಅಗಲದ ಸ್ಲೈಡಿಂಗ್ ಕಬ್ಬಿಣದ ಗೇಟ್ ತೆರೆಯಲು ಯತ್ನಿಸುತ್ತಿದ್ದಾಗ ಗೇಟ್ ಬಾಲಕಿ ಶ್ರೀಹರಿಣಿ ಮೇಲೆ ಬಿದ್ದಿದೆ.

ಇದರಿಂದಾಗಿ ಬಾಲಕಿಯ ತಲೆಗೆ ತೀವ್ರ ಗಾಯಗಳಾಗಿದ್ದು, ದೇಹದ ಭಾಗಗಳಿಗೂ ತೀವ್ರ ಗಾಯಗಳಾಗಿವೆ. ಕೂಡಲೇ ಬಾಲಕಿಯನ್ನು ಚೆನ್ನೈನ ಕಿಲ್ಪಾಕ್ಕಂ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಬಾಲಕಿ ಮಧ್ಯರಾತ್ರಿ ದಾರುಣವಾಗಿ ಸಾವನ್ನಪ್ಪಿದ್ದಾಳೆ.

ಸದ್ಯ ಘಟನೆಯ ಕುರಿತು ಕಿಲ್ಪಾಕ್ಕಂ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಇನ್ನೂ ಮೃತ ಶ್ರೀ ಹರಿಣಿ ಅವರ ದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಕಿಲ್ಪಾಕ್ಕಂ ಸರ್ಕಾರಿ ಆಸ್ಪತ್ರೆಯಲ್ಲಿ ಇರಿಸಲಾಗಿದೆ. ಸೂಕ್ತ ಸುರಕ್ಷತಾ ವ್ಯವಸ್ಥೆಗಳಿಲ್ಲದೆ ಕಬ್ಬಿಣದ ಗೇಟ್ ಅಳವಡಿಸಿದ್ದು, ಗೇಟ್ ಬಿದ್ದು ಅವಘಡ ಸಂಭವಿಸಿರುವುದು ಪೊಲೀಸರ ತನಿಖೆಯಿಂದ ತಿಳಿದುಬಂದಿದೆ.

ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ಬಸ್ ಅಪಘಾತ: 25 ಮಂದಿ ಸಾವು

ಲಿಮಾ: ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ಬಸ್ಸೊಂದು ಕಂದಕಕ್ಕೆ ಉರುಳಿ ಬಿದ್ದ ಪರಿಣಾಮ ಕನಿಷ್ಠ 25 ಜನರು ಸಾವನ್ನಪ್ಪಿದ್ದು, ಹಲವರು ಗಾಯಗೊಂಡಿರುವ ಘಟನೆ ಉತ್ತರ ಪೆರುವಿನಲ್ಲಿ ನಡೆದಿದೆ. ಗಾಯಾಳುಗಳನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ.

ಇದನ್ನೂ ಓದಿ : Peru bus accident: ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ಬಸ್ ಅಪಘಾತ: 25 ಮಂದಿ ಸಾವು

Q’orianka Tours ಗೆ ಸೇರಿದ ಬಸ್ ಲಿಮಾದ ರಾಜಧಾನಿಯಿಂದ ಪೆರುವಿನ ಕರಾವಳಿ ಮರುಭೂಮಿಯ ಈಕ್ವೆಡಾರ್ ಗಡಿಯ ಸಮೀಪವಿರುವ ತುಂಬೆಸ್ ಪ್ರದೇಶಕ್ಕೆ ಹೊರಟಿದ್ದು, ಉತ್ತರ ಪೆರುವಿನಲ್ಲಿ ಬಸ್ಸು ಕಂದಕಕ್ಕೆ ಉರುಳಿ ಬಿದ್ದಿದೆ. ಘಟನೆಯಲ್ಲಿ ಕನಿಷ್ಠ 25 ಮಂದಿ ಸಾವನ್ನಪ್ಪಿದ್ದಾನೆ. ಹಲವರು ಗಾಯಗೊಂಡಿದ್ದು, ಗಾಯಗೊಂಡವರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ. ಅಪಘಾತ ಸಂಭವಿಸಲು ನಿಖರವಾದ ಕಾರಣಗಳು ಏನೆಂದು ತಿಳಿದುಬಂದಿಲ್ಲ. ಕಾರಣದ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

5 year girl died: Iron gate fell and 5 year girl died

Comments are closed.