husband was earlier a woman :ಮದುವೆಯಾಗಿ 8 ವರ್ಷದ ಬಳಿಕ ತನ್ನ ಪತಿ ಪುರುಷನಲ್ಲ , ಮಹಿಳೆ ಎಂದು ತಿಳಿದು ಪತ್ನಿಗೆ ಆಘಾತ

ಗುಜರಾತ್​ : husband was earlier a woman : ಮದುವೆ ಅಂದರೆ ಸಾಕು ಹೆಣ್ಮಕ್ಕಳು ನೂರಾರು ಕನಸುಗಳನ್ನು ಕಟ್ಟಿಕೊಂಡಿರ್ತಾರೆ. ತವರು ಮನೆಯನ್ನು ಬಿಟ್ಟು ಪತಿಯ ಮನೆಗೆ ಬರುವ ಮಹಿಳೆಗೆ ಪತಿಯ ಮೇಲೆ ನಂಬಿಕೆ ಬೆಟ್ಟದಷ್ಟಿರುತ್ತೆ. ಆದರೆ ಆ ಪತಿ ತನ್ನ ಲಿಂಗದ ವಿಚಾರದಲ್ಲಿಯೇ ಸುಳ್ಳು ಹೇಳಿಬಿಟ್ಟರೆ ಆ ಹೆಣ್ಣಿನ ಪರಿಸ್ಥಿತಿ ಹೇಗಾಗಬೇಡ..? ಇಂತಹ ಆಘಾತಕಾರಿ ಘಟನೆಯೊಂದು ಗುಜರಾತಿನ ವಡೋದರಲ್ಲಿ ನಡೆದಿದೆ.


2014ರಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದ ಮಹಿಳೆಯ ಪತಿಯು ಹಿಂದೆ ಒಬ್ಬ ಮಹಿಳೆಯಾಗಿದ್ದು ಈತ ಲಿಂಗ ಪರಿವರ್ತನೆ ಮೂಲಕ ಗಂಡಸಾಗಿ ಬದಲಾಗಿದ್ದ ಎಂಬ ಆಘಾತಕಾರಿ ವಿಚಾರ ಮಹಿಳೆಗೆ ತಿಳಿದಿದೆ . ಮಹಿಳೆಯು ಈ ಸಂಬಂಧ ಗೋತ್ರಿ ಪೊಲೀಸ್​ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದಾರೆ. ತನ್ನ ಪತಿ ವಿರಾಜ್​ ವರ್ಧನ್​​ ನನ್ನೊಡನೆ ಅಸ್ವಾಭಾವಿಕ ಲೈಂಗಿಕ ಕ್ರಿಯೆ ನಡೆಸುವಂತೆ ಪೀಡಿಸುತ್ತಿದ್ದ ಎಂದು ದೂರಿದ್ದಾರೆ. ಎಫ್​ಐಆರ್​ನಲ್ಲಿ ಅವರ ಕುಟುಂಬ ಸದಸ್ಯರ ಹೆಸರನ್ನೂ ಮಹಿಳೆ ಉಲ್ಲೇಖಿಸಿದ್ದಾರೆ.


ಈ ಹಿಂದೆ ವಿಜೈತಾ ಎಂಬ ಹೆಸರನ್ನು ಹೊಂದಿದ್ದ ಮಹಿಳೆಯು ಲಿಂಗ ಪರಿವರ್ತನೆ ಶಸ್ತ್ರ ಚಿಕಿತ್ಸೆ ಮೂಲಕ ವಿರಾಜ್​ ವರ್ಧನ್​ ಆಗಿ ಬದಲಾಗಿದ್ದ. ಒಂಬತ್ತು ವರ್ಷಗಳ ಹಿಂದೆ ಮ್ಯಾಟ್ರಿಮೋನಿ ಸೈಟ್​ನಲ್ಲಿ ವಿರಾಜ್​ ವರ್ಧನ್​​ ಮದುವೆ ನಿಶ್ಚಯವಾಗಿತ್ತು. ಮಹಿಳೆಯ ಮೊದಲ ಪತಿ 2011ರಲ್ಲಿ ರಸ್ತೆ ಅಪಘಾತದಲ್ಲಿ ನಿಧನರಾಗಿದ್ದರು. ಮೊದಲ ಮದುವೆಯಿಂದ ಈಕೆಗೆ 14 ವರ್ಷದ ಪುತ್ರಿ ಕೂಡ ಇದ್ದಾಳೆ.


ಪೊಲೀಸರು ನೀಡಿರುವ ಮಾಹಿತಿಯ ಪ್ರಕಾರ, 2014ರಲ್ಲಿ ವಿರಾಜ್​ ವರ್ಧನ್​ ಜೊತೆಯಲ್ಲಿ ಮಹಿಳೆಯು ಕುಟುಂಬಸ್ಥರ ಸಮ್ಮುಖದಲ್ಲಿ ವಿವಾಹವಾಗಿದ್ದರು . ಇದಾದ ಬಳಿಕ ಕಾಶ್ಮೀರಕ್ಕೆ ಹನಿಮೂನ್​​ಗೆ ತೆರಳಿದ್ದರು. ಆದರೆ ಇಬ್ಬರ ನಡುವೆ ಲೈಂಗಿಕ ಕ್ರಿಯೆ ನಡೆದಿರಲಿಲ್ಲ. ಒಂದಿಲ್ಲೊಂದು ಕಾರಣವನ್ನು ನೀಡಿ ವಿರಾಜ್​ ವರ್ಧನ್​ ಲೈಂಗಿಕ ಕ್ರಿಯೆಯಿಂದ ತಪ್ಪಿಸಿಕೊಳ್ಳುತ್ತಿದ್ದನು. ಆದರೆ ಮಹಿಳೆಯು ಲೈಂಗಿಕ ಕ್ರಿಯೆಗೆ ಒತ್ತಡ ಹೇರಿದ ಬಳಿಕ ವಿರಾಜ್​ ನಾನು ರಷ್ಯಾದಲ್ಲಿದ್ದಾಗ ನಡೆದ ಅಪಘಾತವೊಂದರಿಂದ ನಾನು ಲೈಂಗಿಕ ಕ್ರಿಯೆ ನಡೆಸಲು ಅಸಮರ್ಥನಾದೆ ಎಂದು ಸಬೂಬು ನೀಡಿದ್ದನು. ಅಲ್ಲದೇ ಸಣ್ಣ ಶಸ್ತ್ರಚಿಕಿತ್ಸೆ ಬಳಿಕ ಇದು ಸರಿ ಹೋಗಲಿದೆ ಎಂದೂ ಹೇಳಿದ್ದ ಎನ್ನಲಾಗಿದೆ.
ಇದಾದ ಬಳಿಕ 2020ರಲ್ಲಿ ನಾನು ತೂಕ ಇಳಿಸಿಕೊಳ್ಳಲು ಶಸ್ತ್ರಚಿಕಿತ್ಸೆಗೆ ಒಳಗಾಗುತ್ತಿದ್ದೇನೆ ಎಂದು ಹೇಳಿದರು ಹಾಗೂ ಇದಕ್ಕಾಗಿ ಕೊಲ್ಕತ್ತಾಗೆ ತೆರಳಿದ್ದರು. ಇದಾದ ಬಳಿಕ ವಿರಾಜ್​ ತನ್ನ ಪತ್ನಿಯ ಬಳಿಕ ನಿಜ ವಿಚಾರವನ್ನು ಬಾಯ್ಬಿಟ್ಟಿದ್ದಾನೆ. ನಾನು ಮೊದಲು ಮಹಿಳೆಯಾಗಿದ್ದು ಲಿಂಗ ಪರಿವರ್ತನೆ ಶಸ್ತ್ರ ಚಿಕಿತ್ಸೆ ಮೂಲಕ ಪುರುಷನಾಗಿ ಬದಲಾಗಿದ್ದೇನೆ ಎಂದು ಹೇಳಿದ್ದನು.


ಅಲ್ಲದೇ ವಿರಾಜ್​ ನನ್ನೊಡನೆ ಅಸ್ವಾಭಾವಿಕ ಲೈಂಗಿಕ ಕ್ರಿಯೆ ನಡೆಸಲು ಆರಂಭಿಸಿದನು ಇದರ ಬಗ್ಗೆ ಯಾರೊಂದಿಗಾದರೂ ಹೇಳಿದರೆ ಭೀಕರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದ ಎಂದು ಮಹಿಳೆ ದೂರಿದ್ದಾರೆ.

ಇದನ್ನು ಓದಿ : Mark Boucher MI Head Coach : ದಕ್ಷಿಣ ಆಫ್ರಿಕಾದ ದಿಗ್ಗಜ ಮುಂಬೈ ಇಂಡಿಯನ್ಸ್ ಕೋಚ್ ; ಮಾರ್ಕ್ ಬೌಷರ್ ಹೆಗಲೇರಿದ ಮುಂಬೈ ಗುರು ಪಟ್ಟ

ಇದನ್ನೂ ಓದಿ : Ipl 2023: ಪಂಜಾಬ್​ ಕಿಂಗ್ಸ್​ ಮುಖ್ಯ ಕೋಚ್​ ಸ್ಥಾನದಿಂದ ಅನಿಲ್​ ಕುಂಬ್ಳೆ ಔಟ್​ : ಟ್ರೆವೋರ್​ ಬೇಲಿಸ್​ ಇನ್​

8 years after marriage, wife finds out that husband was earlier a woman

Comments are closed.