Winter Care : ಚಳಿಗಾಲದಲ್ಲಿ ನಿಮ್ಮ ಮಕ್ಕಳಿಗೆ ಇವುಗಳನ್ನು ಕೊಡಿ; ರೋಗನಿರೋಧಕ ಶಕ್ತಿ ಹೆಚ್ಚಿಸಿ

ಸಾಮಾನ್ಯವಾಗಿ ಚಳಿಗಾಲ (Winter) ಬಂತೆಂದರೆ ಮಕ್ಕಳಿಗೆ ವಿಶೇಷ ಕಾಳಜಿಯ ಅಗತ್ಯವಿರುತ್ತದೆ (Winter Care). ಸೂಕ್ಷ್ಮ ದೇಹ ಹೊಂದಿರುವ ಮಕ್ಕಳು (Kids) ಬಹು ಬೇಗನೆ ಕಾಯಿಲೆಗಳಿಗೆ ತುತ್ತಾಗುತ್ತಾರೆ. ಸದಾ ತಂಪಾದ ವಾತಾವರಣದಿಂದ ಶೀತ, ಕೆಮ್ಮು, ಜ್ವರ ಮೇಲಿಂದ ಮೇಲೆ ಕಾಣಿಸಿಕೊಳ್ಳುತ್ತದೆ. ಪದೇ ಪದೇ ಸೋಂಕಿಗೆ ಒಳಗಾದಾಗ ಬೆಳವಣಿಗೆಯೂ ಕುಂಠಿತವಾಗುತ್ತದೆ. ಇದಕ್ಕೆ ಕಾರಣ ಮಕ್ಕಳಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆ ಇರುವುದು. ಇದನ್ನು ಗಮನದಲ್ಲಿರಿಸಿಕೊಂಡು, ಋತುಮಾನದ ಸೋಂಕಿಗೆ ಒಳಗಾಗುವ ಅಪಾಯವನ್ನು ಕಡಿಮೆ ಮಾಡಲು ಮಕ್ಕಳಿಗೆ ರೋಗನಿರೋಧಕ ಶಕ್ತಿ ಹೆಚ್ಚಿಸುವ ಆಹಾರವನ್ನು ನೀಡುವುದು ಮುಖ್ಯವಾಗಿದೆ. ಸೂಪರ್‌ಫುಡ್‌ಗಳು ಪೋಷಕಾಂಶಗಳ ಖಜಾನೆಯಾಗಿದೆ. ಇವು ಋತುಮಾನದ ಸಾಮಾನ್ಯ ಕಾಯಿಲೆಗಳನ್ನು ತಡೆಯುವಲ್ಲಿ ಸಹಾಯ ಮಾಡುತ್ತದೆ.

ಚಳಿಗಾಲದ ಸಾಮಾನ್ಯ ಕಾಯಿಲೆಗಳಿಂದ ಮಕ್ಕಳನ್ನು ರಕ್ಷಿಸುವ ಮತ್ತು ಅವರಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಿಸುವ ಆಹಾರಗಳನ್ನು ಇಲ್ಲಿ ಕೊಡಲಾಗಿದೆ. ಅವುಗಳನ್ನು ಮಕ್ಕಳಿಗೆ ಕೊಡುವುದರಿಂದ ಸೋಂಕಿನಿಂದ ರಕ್ಷಿಸಿಬಹುದು.

ಇದನ್ನೂ ಓದಿ : Tomato Soup Benefits : ಟೊಮೆಟೊ ಸೂಪ್‌ ಕುಡಿಯಿರಿ, ತೂಕ ಇಳಿಸಿಕೊಳ್ಳಿ ಅಂದರೆ ನಿಮಗೆ ಆಶ್ಚರ್ಯವಾಗುತ್ತಿದೆಯಾ…

  1. ಹಸಿರು ತರಕಾರಿಗಳು :
    ಹಸಿರು ಎಲೆ ತರಕಾರಿಗಳು ಮಕ್ಕಳ ರೋಗನಿರೋಧಕ ಶಕ್ತಿ ಹೆಚ್ಚಿಸಲು ಉತ್ತಮವಾಗಿದೆ. ಪಾಲಕ್‌, ಹೂಕೋಸು, ಎಲೆಕೋಸು, ಬ್ರೋಕೊಲಿ ಮುಂತಾದ ಹಸಿರು ತರಕಾರಿಗಳು ಹೆಚ್ಚಿನ ಪೋಷಕಾಂಶಗಳನ್ನು ಹೊಂದಿದೆ. ಈ ತರಕಾರಿಗಳಲ್ಲಿ ವಿಟಮಿನ್ ಎ, ಸಿ ಮತ್ತು ಕೆ, ಕಬ್ಬಿಣ, ಮೆಗ್ನೀಸಿಯಮ್, ಕ್ಯಾಲ್ಸಿಯಂ ಮತ್ತು ಪೊಟ್ಯಾಸಿಯಮ್ ಹೇರಳವಾಗಿದೆ. ಇದಲ್ಲದೆ ಹಸಿರು ತರಕಾರಿಗಳು ಹೆಚ್ಚಿನ ಆಂಟಿಒಕ್ಸಿಡೆಂಟ್‌ ಹೊಂದಿದೆ. ಇದರಿಂದ ದೇಹದ ಪ್ರತಿರಕ್ಷಣಾ ವ್ಯವಸ್ಥೆಯ ಕ್ಷಮತೆ ಹೆಚ್ಚುತ್ತದೆ.
  2. ಸಿಟ್ರಸ್‌ ಅಂಶ ಹಣ್ಣುಗಳು :
    ಹಣ್ಣುಗಳು ದೇಹಕ್ಕೆ ಬಹಳ ಬೇಗ ಶಕ್ತಿಯನ್ನು ಪೂರೈಸುತ್ತವೆ. ಸಿಟ್ರಸ್‌ ಅಂಶ ಹೆಚ್ಚಿರುವ ಹಣ್ಣುಗಳು ರೋಗನಿರೋಧಕ ಶಕ್ತಿ ಹೆಚ್ಚಿಸುವ ಅತ್ಯತ್ತಮ ಆಹಾರಗಳಾಗಿವೆ. ಮೂಸಂಬಿ, ಕಿತ್ತಳೆ, ದ್ರಾಕ್ಷಿ, ನಿಂಬೆಹಣ್ಣುಗಳು ಅತಿ ಹೆಚ್ಚಿನ ಪ್ರಮಾಣದ ವಿಟಮಿನ್‌ ಸಿ ಅನ್ನು ಹೊಂದಿರುತ್ತವೆ. ವಿಟಮಿನ್‌ ಸಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ದೇಹದ ಪ್ರತಿರಕ್ಷಣಾ ವ್ಯವಸ್ಥೆಯ ಕಾರ್ಯ ಹೆಚ್ಚಿಸಲು ಸೂಕ್ಷ್ಮ ಪೋಷಕಾಂಶಗಳು ಬಹಳ ಮುಖ್ಯ. ಪೊಟ್ಯಾಸಿಯಮ್, ಬಿ ಜೀವಸತ್ವಗಳು, ರಂಜಕ, ಮೆಗ್ನೀಸಿಯಮ್ ಮತ್ತು ಆಂಟಿಒಕ್ಸಿಡೆಂಟ್‌ಗಳು ಸಿಟ್ರಸ್‌ ಹಣ್ಣುಗಳಲ್ಲಿ ಕಂಡುಬರುತ್ತವೆ. ಮಕ್ಕಳಿಗೆ ಪ್ರತಿದಿನ ಯಾವುದಾದರೂ ಒಂದು ಸಿಟ್ರಸ್‌ ಅಂಶವಿರುವ ಹಣ್ಣು ನೀಡಿ.
  1. ಮೊಟ್ಟೆಗಳು :
    ಮೊಟ್ಟೆಯು ದೇಹಕ್ಕೆ ವಿಟಮಿನ್‌ ಮತ್ತು ಪ್ರೋಟೀನ್‌ ಅಗತ್ಯಗಳನ್ನು ಪೂರೈಸುತ್ತದೆ. ಚಳಿಗಾಲದಲ್ಲಿ ಮಕ್ಕಳಿಗೆ ಸಮತೋಲಿತ ಆಹಾರ ನೀಡುವುದು ಅತಿ ಅವಶ್ಯಕ. ಬೇಯಿಸಿದ ಮೊಟ್ಟೆ, ಬ್ರೆಡ್‌ ಆಮ್ಲೆಟ್‌ ಮುಂತಾದ ಮೊಟ್ಟೆಯಿಂದ ಮಾಡಿದ ಆಹಾರಗಳು ಪೋಷಕಾಂಶಗಳನ್ನು ದೇಹಕ್ಕೆ ಒದಗಿಸುತ್ತವೆ.
  2. ಒಣ ಹಣ್ಣು ಮತ್ತು ಬೀಜಗಳು :
    ಚಳಿಗಾಲದಲ್ಲಿ ಒಣ ಹಣ್ಣು ಮತ್ತು ಬೀಜಗಳು ಶಕ್ತಿಯ ಮೂಲವಾಗಿದೆ. ಗೋಡಂಬಿ, ಕಡಲೆಕಾಯಿ, ಬಾದಾಮಿ, ಪಿಸ್ತಾ ಮತ್ತು ವಾಲ್‌ನಟ್‌ಗಳು ಎಲ್ಲಾ ಋತುವಿನಲ್ಲೂಆರೋಗ್ಯಕರವಾಗಿಡಲು ಸಹಾಯ ಮಾಡುತ್ತದೆ. ಇವುಗಳ ಜೊತೆ ಚಿಯಾ ಬೀಜಗಳು, ಪಂಪ್ಕಿನ್‌ ಬೀಜಗಳು ಮುಂತಾದವುಗಳು ಉತ್ತಮವಾಗಿದೆ. ಇವುಗಳು ಚಯಾಪಚಯ ಕ್ರಿಯೆಯನ್ನು ಹೆಚ್ಚಿಸುತ್ತವೆ ಮತ್ತು ಶಕ್ತಿಯ ಮರುಪೂರೈಕೆ ಮಾಡುತ್ತವೆ.

ಇದನ್ನೂ ಓದಿ : Egg Yolk: ಮೊಟ್ಟೆಯಲ್ಲಿರುವ ಹಳದಿ ಭಾಗ ತಿನ್ನಬೇಕಾ ಅಥವಾ ಬೇಡವಾ?

(Winter Care superfoods to improve kid’s immunity this winter)

Comments are closed.