Ermayi Falls : ಬೆಳ್ತಂಗಡಿ ಎರ್ಮಾಯಿ ಫಾಲ್ಸ್ ಗೆ ಹೋದ ವಿದ್ಯಾರ್ಥಿ ನೀರಲ್ಲಿ ಮುಳುಗಿ ಸಾವು

ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಮಿತ್ತಬಾಗಿಲು ಗ್ರಾಮದ ಎರ್ಮಾಯಿ ಫಾಲ್ಸ್‌ (Ermayi Falls) ಸಮೀಪದ ಹೊಳೆ ನೀರಿನಲ್ಲಿ ಸ್ನಾನಕ್ಕೆಂದು ಇಳಿದ ವಿದ್ಯಾರ್ಥಿಯೊಬ್ಬನ ಸಾವು ಸಂಭವಿಸಿದೆ ಎಂದು ಸ್ಥಳೀಯ ಪೊಲೀಸರು ತಿಳಿಸಿದ್ದಾರೆ.

ಮೃತ ವಿದ್ಯಾರ್ಥಿ ಧರ್ಮಸ್ಥಳ ಗ್ರಾಮದ ದೊಂಡೋಲೆ ನಿವಾಸಿ ಕೇಶವ ಭಂಡಾರಿ ಅವರ ಪುತ್ರ ವಿವೇಕ್‌ ಎಂದು ಗುರುತಿಸಲಾಗಿದೆ. ವಿವೇಕ್‌ ಉಜಿಎರ ಪಿಯು ಕಾಲೇಜಿನಲ್ಲಿ ದ್ವಿತೀಯ ಪಿಯುಸಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾನೆ ಎಂದು ತಿಳಿಸಿದ್ದಾರೆ. ಶನಿವಾರ ಮಧ್ಯಾಹ್ನ ಕಾಲೇಜಿಗೆ ರಜೆ ಇದ್ದುದರಿಂದ ವಿವೇಕ್‌ ತನ್ನ ಏಳು ಮಂದಿ ಸ್ನೇಹಿತರೊಂದಿಗೆ ಎರ್ಮಾಯಿ ಫಾಲ್ಸ್‌ಗೆ ಹೋಗಿದ್ದಾರೆ. ನಂತರ ಕಲ್ಲಂಡ ಪರಿಸರದ ತೊಟ್ಲಾಯಿ ಹೊಳೆಯಲ್ಲಿ ಸ್ನಾನಕ್ಕೆಂದು ಎಲ್ಲರೂ ಹೋಗಿದ್ದಾರೆ. ಸ್ನಾನಕ್ಕೆಂದು ನೀರಿಗೆ ಇಳಿದಾಗ ನೀರಿನ ಸೆಳೆತಕ್ಕೆ ಸಿಕ್ಕಿ ಈ ದುರ್ಘಟನೆ ಸಂಭವಿಸಿದೆ.

ಇದನ್ನೂ ಓದಿ : Gangster Raju Thet: ಗ್ಯಾಂಗ್‌ಸ್ಟರ್ ರಾಜು ಥೇಟ್ ಹತ್ಯೆ: ಐವರು ಆರೋಪಿಗಳ ಬಂಧನ

ಇದನ್ನೂ ಓದಿ : Hair transplant: ಕೂದಲು ಕಸಿ ಮಾಡಲು ಹೋಗಿ ತನ್ನ ಜೀವವನ್ನೇ ಕಳೆದುಕೊಂಡ

ಇದನ್ನೂ ಓದಿ : Student Mysterious murder: ಮೂರನೇ ತರಗತಿ ವಿದ್ಯಾರ್ಥಿನಿಯ ನಿಗೂಢ ಹತ್ಯೆ: ಓರ್ವ ಅರೆಸ್ಟ್

ಇದನ್ನೂ ಓದಿ : Wall writing: ಶಿವಮೊಗ್ಗದಲ್ಲಿ ವಿವಾದಾತ್ಮಕ ಗೋಡೆಬರಹ ಪತ್ತೆ

ಘಟನೆ ನಡೆದ ಸ್ಥಳಕ್ಕೆ ಕೂಡಲೇ ಬೆಳ್ತಂಗಡಿ ಪೊಲೀಸರು ಆಗಮಿಸಿದ್ದಾರೆ. ನಂತರ ಹೊಳೆಯಿಂದ ಮೃತದೇಹವನ್ನು ಹೊರ ತೆಗೆಯಲು ಪೊಲೀಸರಿಗೆ ಸ್ಥಳೀಯರು ಸಹಕಾರ ನೀಡಿದ್ದಾರೆ. ನಂತರ ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಬೆಳ್ತಂಗಡಿ ಠಾಣೆಯಲ್ಲಿ ದೂರನ್ನು ದಾಖಲಿಸಿಕೊಂಡು ಮೃತದೇಹವನ್ನು ಮನೆಯವರಿಗೆ ಒಪ್ಪಿದ್ದಾರೆ. ಸ್ನೇಹಿತರೊಂದಿಗೆ ಮೋಜಿಗಾಗಿ ಹೋದ ಬಾಲಕ ತನ್ನ ಅಮೂಲ್ಯವಾದ ಜೀವವನ್ನು ಕಳೆದುಕೊಂಡು, ತನ್ನ ತಂದೆ – ತಾಯಿಗೆ ನೋವನ್ನುಂಟು ಮಾಡಿದ್ದಾನೆ.

ಇದನ್ನೂ ಓದಿ : Current shock: ಪಾರಿವಾಳ ಹಿಡಿಯಲು ಹೋದವರಿಗೆ ಕರೆಂಟ್‌ ಶಾಕ್‌: ಬಾಲಕ ಸಾವು

ಕೂದಲು ಕಸಿ ಮಾಡಲು ಹೋಗಿ ತನ್ನ ಜೀವವನ್ನೇ ಕಳೆದುಕೊಂಡ

ನವದೆಹಲಿ: ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಜನರು ಕೂದಲು ಕಸಿ ಮಾಡಿಸುವಲ್ಲಿಗೆ ವಾಲುತ್ತಿದ್ದಾರೆ. ಆದರೆ ಕೂದಲು ಕಸಿ ಮಾಡಿಸಿಕೊಳ್ಳಲು ಹೋದವರೊಬ್ಬರು ವೈದ್ಯರ ಯಡವಟ್ಟಿನಿಂದ ಜೀವವನ್ನೇ ಕಳೆದುಕೊಂಡಿರುವ ಆಘಾತಕಾರಿ ಘಟನೆಯೊಂದು ದೆಹಲಿಯಲ್ಲಿ ನಡೆದಿದೆ. ದೆಹಲಿಯ ಅಥರ್ ರಶೀದ್ (30 ವರ್ಷ) ಅವರು ಕೂದಲು ಕಸಿ ಮಾಡಲು ಹೋಗಿ ಪ್ರಾಣ ಕಳೆದುಕೊಂಡ ವ್ಯಕ್ತಿ. ಅಥರ್ ರಶೀದ್ ಎನ್ನುವ ವ್ಯಕ್ತಿ ಕೂದಲ ಕಸಿ ಮಾಡಿಸಿಕೊಳ್ಳಲು ದೆಹಲಿಯ ಒಂದು ಕ್ಲಿನಿಕ್‌ಗೆ ಹೋಗಿದ್ದರು. ಆದರೆ ಕೂದಲ ಕಸಿ ಮಾಡಿಸಿಕೊಂಡ ಬಳಿಕ ಅವರು ತೀವ್ರವಾದ ನೋವಿನಿಂದ ಬಳಲುತ್ತಿದ್ದು, ಬಹು ಅಂಗಾಂಗ ವೈಫಲ್ಯ ಉಂಟಾಗಿ ಸಾವನ್ನಪ್ಪಿದ್ದಾರೆ. ರಶೀದ್ ತಮ್ಮ ಮನೆಯಲ್ಲಿ ಒಬ್ಬರೇ ದುಡಿಯುತ್ತಿದ್ದ ವ್ಯಕ್ತಿಯಾಗಿದ್ದು, ತಮ್ಮ ತಾಯಿ ಹಾಗೂ ಇಬ್ಬರು ಸಹೋದರಿಯರನ್ನು ಅಗಲಿದ್ದಾರೆ. ಕೂದಲ ಶಸ್ತ್ರಚಿಕಿತ್ಸೆಯ ಬಳಿಕ ನನ್ನ ಮಗ ತುಂಬಾ ನೋವಿನಿಂದ ಬಳಲುತ್ತಿದ್ದ ಆತನ ಮೈಮೇಲೆ ಗುಳ್ಳೆಗಳಾಗಿದ್ದವು ಎಂದು ರಶೀದ್ ತಾಯಿ ಆಸಿಯಾ ಬೇಗಂ ತಿಳಿಸಿದ್ದಾರೆ. ಘಟನೆಯ ಬಳಿಕ ರಶೀದ್ ಕುಟುಂಬದ ಸದಸ್ಯರು ಈ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದಾರೆ. ಶಸ್ತ್ರಚಿಕಿತ್ಸೆ ನಡೆಸಿದ ಇಬ್ಬರು ವೈದ್ಯರು ಸೇರಿದಂತೆ ಒಟ್ಟು ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ.

A student who went to Ermayi falls in Belthangadi drowned

Comments are closed.