Old lady murder: ವೃದ್ಧೆಯನ್ನು ಹತ್ಯೆಗೈದು ಬೀರುವಿನಲ್ಲಿಟ್ಟು ಪರಾರಿಯಾದ ಮುಸ್ಲಿಂ ಮಹಿಳೆ

ಆನೆಕಲ್‌ : (Old lady murder) ವೃದ್ಧೆಯನ್ನು ಕೊಂದು ಶವವನ್ನು ಬೀರುವಿನಲ್ಲಿಟ್ಟು ಪಾತಕಿ ಪರಾರಿಯಾಗಿರುವ ಘಟನೆ ಆನೇಕಲ್ ತಾಲೂಕಿನ ಅತ್ತಿಬೆಲೆ ಗ್ರಾಮದಲ್ಲಿ ನಡೆದಿದೆ. ಪಾರ್ವತಮ್ಮ (65 ವರ್ಷ) ಎನ್ನುವವರು ಕೊಲೆಯಾದ ಅಜ್ಜಿ.

ಅತ್ತಿಬೆಲೆ ಗ್ರಾಮದಲ್ಲಿ 4 ಅಂತಸ್ತಿನ ಮನೆ ಇದ್ದು, 4ನೇ ಮಹಡಿಯಲ್ಲಿ ಮುಸ್ಲಿಂ ಮಹಿಳೆ ಬಾಡಿಗೆಗೆ ಇದ್ದಳು. 3ನೇ ಮಹಡಿಯಲ್ಲಿ ಪಾರ್ವತಮ್ಮ (Old lady murder) ಕುಟುಂಸ್ಥರೊಂದಿಗೆ ವಾಸವಿದ್ದಳು. 3 ದಿನಗಳ ಹಿಂದೆ ಮುಸ್ಲಿಂ ಮಹಿಳೆ ಅಜ್ಜಿಯನ್ನು ಮನೆಗೆ ಕರೆದಿದ್ದಳು. ಅಂದಿನಿಂದ ಅಜ್ಜಿ ಮತ್ತು ಮುಸ್ಲಿಂ ಮಹಿಳೆ ಇಬ್ಬರು ನಾಪತ್ತೆಯಾಗಿದ್ದರು.

ನಂತರ ಪಾರ್ವತಮ್ಮ ಕುಟುಂಬಸ್ಥರು ಕಾಣೆಯಾಗಿದ್ದ ಪಾರ್ವತಮ್ಮಳನ್ನು ಹುಡುಕಲು ಶುರು ಮಾಡಿದ್ದರು. ಆದರೆ ಪಾರ್ವತಮ್ಮ ಮಾತ್ರ ಸಿಕ್ಕಿರಲಿಲ್ಲ. ಇನ್ನೂ ಇತ್ತ ಮುಸ್ಲಿಂ ಮಹಿಳೆ ಕೂಡ ನಾಪತ್ತೆಯಾಗಿದ್ದರಿಂದ ಕುಟುಂಬಸ್ಥರಿಗೆ ಅನುಮಾನ ಮೂಡಿತ್ತು.

ನಂತರ ಅನುಮಾನ ಬಂದು ಪಾರ್ವತಮ್ಮ ಕುಟುಂಬಸ್ಥರು ಮುಸ್ಲಿಂ ಮಹಿಳೆಯ ಮನೆ ಬೀಗ ತೆಗೆಸಿದ್ದರು. ಈ ವೇಳೆ ಮಹಿಳೆಯ ಮನೆಯ ಬೀರುವಿನಲ್ಲಿ ವೃದ್ಧೆ ಮೃತದೇಹ ಪತ್ತೆಯಾಗಿದೆ. ಮಹಿಳೆ ವೃದ್ಧೆಯನ್ನು ಕೊಂದು ಶವ ಪ್ಯಾಕ್​ ಮಾಡಿ ಬೀರುವಿನಲ್ಲಿಟ್ಟು ಪರಾರಿಯಾಗಿದ್ದಾಳೆ. ಪಾರ್ವತಮ್ಮ ಮೃತದೇಹ ಕಳೆದ 3 ದಿನಗಳಿಂದ ಬೀರುವಿನಲ್ಲೇ ಇದೆ.

ಇದನ್ನೂ ಓದಿ : Gangster Raju Thet: ಗ್ಯಾಂಗ್‌ಸ್ಟರ್ ರಾಜು ಥೇಟ್ ಹತ್ಯೆ: ಐವರು ಆರೋಪಿಗಳ ಬಂಧನ

ಇದನ್ನೂ ಓದಿ : Hair transplant: ಕೂದಲು ಕಸಿ ಮಾಡಲು ಹೋಗಿ ತನ್ನ ಜೀವವನ್ನೇ ಕಳೆದುಕೊಂಡ

ಇದನ್ನೂ ಓದಿ : Student Mysterious murder: ಮೂರನೇ ತರಗತಿ ವಿದ್ಯಾರ್ಥಿನಿಯ ನಿಗೂಢ ಹತ್ಯೆ: ಓರ್ವ ಅರೆಸ್ಟ್

ಈ ಕುರಿತು ಪಾರ್ವತಮ್ಮ ಕುಟುಂಬದವರು ಅತ್ತಿಬೆಲೆ ಪೊಲೀಸರಿಗೆ ದೂರು ನೀಡಿದ್ದರು. ದೂರು ದಾಖಲಿಸಿಕೊಂಡ ಅತ್ತಿಬೆಲೆ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮುಸ್ಲಿಂ ಯುವತಿಗಾಗಿ ಹುಡುಕಾಟ ನಡೆಯುತ್ತಿದ್ದು, ಪೊಲೀಸರು ಆಕೆಗೆ ಬಲೆ ಬೀಸಿದ್ದಾರೆ.

(Old lady murder) The incident took place in Attibele village of Anekal taluk where the accused killed an old woman and left the dead body in a cupboard. Parvathamma (65 years) is the murdered grandmother.

Comments are closed.