Acid Attack On Minor Girl : ಪ್ರೇಮ ನಿವೇದನೆಯನ್ನು ನಿರಾಕರಿಸಿದಕ್ಕೆ ಅಪ್ರಾಪ್ತ ಬಾಲಕಿ ಮೇಲೆ ಆಸಿಡ್ ದಾಳಿ

ಬೆಂಗಳೂರು : ವ್ಯಕ್ತಿಯೊಬ್ಬ ಅಪ್ರಾಪ್ತ ಬಾಲಕಿ ಎದುರು ತನ್ನ ಪ್ರೇಮ ನಿವೇದನೆಯನ್ನು ಮಾಡಿದ್ದು, ಬಾಲಕಿ ವ್ಯಕ್ತಿಯನ್ನು ನಿರಾಕರಿಸಿದಕ್ಕೆ ಆಸಿಡ್‌ ದಾಳಿ (Acid Attack On Minor Girl) ಮಾಡಿದ್ದಾನೆ. ಅಪರಾಧಿಯು ಆಸಿಡ್‌ ದಾಳಿ ಮಾಡಿ ಅಲ್ಲಿಂದ ಪರಾರಿ ಆಗಿದ್ದಾನೆ ಎಂದು ಪೊಲೀಸ್‌ ಅಧಿಕಾರಿಗಳು ತಿಳಿಸಿದ್ದಾರೆ.

ಪ್ರೇಮ ಪ್ರಕರಣದಿಂದ ಮನನೊಂದ ವ್ಯಕ್ತಿಯೊಬ್ಬ 17 ವರ್ಷದ ಯುವತಿಯ ಮುಖದ ಮೇಲೆ ಆ್ಯಸಿಡ್ ಎರಚಿದ ಘಟನೆ ಶನಿವಾರ (ಫೆ. 18)ರಂದು ಕರ್ನಾಟಕದ ರಾಮನಗರದಲ್ಲಿ ನಡೆದಿದೆ. ಬಾಲಕಿ ಇತ್ತೀಚೆಗಷ್ಟೇ ಆ ವ್ಯಕ್ತಿಯಿಂದ ಮದುವೆ ಪ್ರಸ್ತಾಪವನ್ನು ತಿರಸ್ಕರಿಸಿದ್ದು ಅಪರಾಧಕ್ಕೆ ಕಾರಣವಾಗಿತ್ತು. ಈ ಘಟನೆಯಿಂದ ಸಂತ್ರಸ್ತೆಯ ಎಡಗಣ್ಣಿಗೆ ತೀವ್ರ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಇನ್ನು ಬಾಲಕಿಯ ಪೋಷಕರು ಈ ಘಟನೆಯಿಂದ ಆತಂಕಕ್ಕೆ ಒಳಗಾಗಿದ್ದು, ಆರೋಪಿ ತಕ್ಕ ಶಿಕ್ಷೆ ವಿಧಿಸುವಂತೆ ಪೊಲೀಸರ ಬಳಿ ಮನವಿ ಮಾಡಿದ್ದಾರೆ.

ಇದನ್ನೂ ಓದಿ : Uttar Pradesh Crime : ರಸಗುಲ್ಲಾ ವಿಚಾರಕ್ಕೆ ಆರಂಭವಾದ ಜಗಳ ಕೊಲೆಯಲ್ಲಿ ಅಂತ್ಯ

ಇದನ್ನೂ ಓದಿ : Bulgaria News : ಬಲ್ಗೇರಿಯಾದಲ್ಲಿ ಹಳ್ಳಕ್ಕೆ ತಳ್ಳಿದ ಟ್ರಕ್‌ನಲ್ಲಿ 18 ವಲಸಿಗರು ಶವವಾಗಿ ಪತ್ತೆ

ಇದನ್ನೂ ಓದಿ : Unnao : ಬರ್ತಡೇ ಪಾರ್ಟಿಗೆ ಬಂದ ಡ್ಯಾನ್ಸರ್‌ ಮೇಲೆ 6 ಮಂದಿಯಿಂದ ಸಾಮೂಹಿಕ ಅತ್ಯಾಚಾರ

ಘಟನೆಯ ನಂತರ ಪರಾರಿಯಾಗಿರುವ ಆರೋಪಿಯನ್ನು ಬಂಧಿಸಲು ವಿಶೇಷ ತಂಡವನ್ನು ರಚಿಸಲಾಗಿದೆ ಎಂದು ಪೊಲೀಸ್‌ ಅಧಿಕಾರಿಗಳು ತಿಳಿಸಿದ್ದಾರೆ. ಈ ನಡುವೆ ಕನಕಪುರ ಟೌನ್ ಪೊಲೀಸರು ಪೋಕ್ಸೋ ಕಾಯ್ದೆ ಹಾಗೂ ಐಪಿಸಿ ಸೆಕ್ಷನ್‌ಗಳ ಅಡಿಯಲ್ಲಿ ಆರೋಪಿ ಮೇಲೆ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ: 4 ಮಂದಿ ವಿರುದ್ಧ ಪ್ರಕರಣ

ಹೈದರಾಬಾದ್: (Sexual harrasment on girls) ಒಡಿಶಾದ ಏಳು ಅಪ್ರಾಪ್ತ ಬಾಲಕಿಯರನ್ನು ಸಂಗಾರೆಡ್ಡಿ ಜಿಲ್ಲೆಯ ಇಟ್ಟಿಗೆ ಭಟ್ಟಿಯಲ್ಲಿ “ಕಾನೂನುಬಾಹಿರವಾಗಿ” ನೇಮಿಸಿಕೊಂಡು ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ನಾಲ್ವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ಗುರುವಾರ ತಿಳಿಸಿದ್ದಾರೆ.

ಐದು ತಿಂಗಳ ಹಿಂದೆ ಜಿಲ್ಲೆಯ ನಾರಾಯಣಖೇಡ್ ಮಂಡಲದ ಇಟ್ಟಿಗೆ ಭಟ್ಟಿಯಲ್ಲಿ ಅಪ್ರಾಪ್ತ ಬಾಲಕಿಯರು ಸೇರಿದಂತೆ 72 ಜನರ ಗುಂಪು ಕೆಲಸ ಮಾಡುತ್ತಿತ್ತು. ಕಾರ್ಮಿಕರು ಇತ್ತೀಚೆಗೆ ಒಡಿಶಾ ಮುಖ್ಯ ಕಾರ್ಯದರ್ಶಿಯನ್ನು ಸಂಪರ್ಕಿಸಿ ತಮ್ಮ ಮಾಲೀಕರಿಂದ ಶೋಷಣೆ(Sexual harrasment on girls)ಗೆ ಒಳಗಾಗಿದ್ದಾರೆ ಎಂದು ಆರೋಪಿಸಿದ್ದರು.

ಕಾರ್ಮಿಕರ ಆರೋಪದ ಮೇಲೆ ತೆಲಂಗಾಣ ಸರ್ಕಾರದ ಅಧಿಕಾರಿಗಳು ಈ ಬಗ್ಗೆ ಒಡಿಶಾ ಮುಖ್ಯ ಕಾರ್ಯದರ್ಶಿಯಿಂದ ಮಾಹಿತಿ ಪಡೆದು, ನಂತರ ರಾಜ್ಯ ಕಾರ್ಮಿಕ ಇಲಾಖೆ, ಮಹಿಳಾ ಅಭಿವೃದ್ಧಿ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು ಒಟ್ಟಿಗೆ ಸೇರಿ ಇಟ್ಟಿಗೆ ಭಟ್ಟಿ ಮೇಲೆ ದಾಳಿ ನಡೆಸಿದರು. ಅಲ್ಲಿ ಅಪ್ರಾಪ್ತ ಬಾಲಕಿಯರ ಬಳಿ ಮಾಲೀಕರಿಂದ ಲೈಂಗಿಕ ಕಿರುಕುಳದ ಬಗ್ಗೆ ಮಾಹಿತಿ ಪಡೆಯಲಾಯಿತು.ರಾಜ್ಯ ಕಾರ್ಮಿಕ ಇಲಾಖೆ, ಮಹಿಳಾ ಅಭಿವೃದ್ಧಿ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು ಪೊಲೀಸರಿಗೆ ದೂರು ನೀಡಿದ್ದು, ಅದರ ಆಧಾರದ ಮೇಲೆ ಬುಧವಾರ ಇಟ್ಟಿಗೆ ಭಟ್ಟಿಯ ನಾಲ್ವರು ಮಾಲೀಕರ ವಿರುದ್ಧ ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಿಸಿ ಅಪ್ರಾಪ್ತ ಬಾಲಕಿಯರನ್ನು ರಕ್ಷಿಸಲಾಗಿದೆ ಎಂದು ಪೊಲೀಸ್‌ ಅಧಿಕಾರಿಗಳು ಹೇಳಿದರು.

ಕಾರ್ಮಿಕರನ್ನು ಅಕ್ರಮವಾಗಿ ಇಟ್ಟಿಗೆ ಭಟ್ಟಿಯಲ್ಲಿ ನೇಮಿಸಲಾಗಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಅಧಿಕಾರಿಗಳು ಅಪ್ರಾಪ್ತ ಬಾಲಕಿಯರನ್ನು ಒಡಿಶಾಗೆ ವಾಪಸ್ ಕಳುಹಿಸುವ ವ್ಯವಸ್ಥೆಯನ್ನೂ ಮಾಡಿದ್ದು, ಪ್ರಕರಣದ ಕುರಿತು ನಾಲ್ವರ ವಿರುದ್ದ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಹೆಚ್ಚಿನ ತನಿಖೆಯನ್ನು ನಡೆಸುತ್ತಿದ್ದಾರೆ.

Sexual harassment on girls: Sexual harassment on minor girls: Case against 4 persons

Acid attack on minor girl for refusing love declaration

Comments are closed.