Kota Srinivas Poojary : ಶ್ರೀ ನಾರಾಯಣ ಗುರು ವಸತಿ ಶಾಲೆಗೆ ಅನುದಾನ ಕುರಿತು ವಿವಾದ : ಇತರ ಜಾತಿಯವರಿಗೆ ಸಚಿವರಿಂದ ಭರವಸೆ ಟ್ವೀಟ್

ಬೆಂಗಳೂರು : ಇತ್ತೀಚೆಗಷ್ಟೇ ಕರ್ನಾಟಕ ರಾಜ್ಯ ಬಜೆಟ್​​ನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಂಡನೆ ಮಾಡಿದ್ದಾರೆ. ಇದು ಈ ಸರಕಾರದ ಕೊನೆಯ ಬಜೆಟ್ ಆಗಿದ್ದು, ಬೊಮ್ಮಾಯಿ ಅವರು ಮಂಡನೆ ಮಾಡುತ್ತಿರುವ ಎರಡನೇ ಬಜೆಟ್ ಆಗಿದೆ. ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಮತ್ತು ಶಿವಮೊಗ್ಗ ಜಿಲ್ಲೆಗಳಲ್ಲಿ ಪ್ರತಿ ಶಾಲೆಗೆ 18 ಕೋಟಿ ರೂ.ಗಳ ವೆಚ್ಚದಲ್ಲಿ ಶ್ರೀ ನಾರಾಯಣ ಗುರು ವಸತಿ ಶಾಲೆ ಆರಂಭಿಸಲು ಕ್ರಮಕೈಗೊಳ್ಳಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬಜೆಟ್‌ನಲ್ಲಿ ಘೋಷಿಸಿದರು. ಈ ಕುರಿತಂತೆ ಸಚಿವ ಕೋಟ ಶ್ರೀನಿವಾಸ ಪೂಜಾರಿಯವರು (Kota Srinivas Poojary) ಟ್ವೀಟ್‌ನಲ್ಲಿ ಹೇಳಿಕೆಯೊಂದನ್ನು ನೀಡಿದ್ದಾರೆ.

ದಕ್ಷಿಣ ಕನ್ನಡ, ಉಡುಪಿ ಉತ್ತರ ಕನ್ನಡ ಹಾಗೂ ಶಿವಮೊಗ್ಗ ಜಿಲ್ಲೆಗಳಲ್ಲಿ ತಲಾ ಒಂದರಂತೆ ಪ್ರತಿ ಶಾಲೆಗೆ 18 ಕೋಟಿ ರೂ. ವೆಚ್ಚದಲ್ಲಿ ಶ್ರೀ ನಾರಾಯಣ ಗುರು ವಸತಿ ಶಾಲೆಯನ್ನು ಪ್ರಾರಂಭಿಸಲು ಕ್ರಮ ವಹಿಸಲಾಗಿದೆ ಎಂದು ಸಿಎಂ ಬೊಮ್ಮಾಯಿ ರಾಜ್ಯ ಬಜೆಟ್‌ನಲ್ಲಿ ಘೋಷಣೆ ಮಾಡಿದರು. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳಿಗೆ ಉತ್ತಮ ಕಲಿಕಾ ವಾತಾವರಣ ನಿರ್ಮಾಣ ಮಾಡಲು ಹಾಗೂ ಮೂಲ ಸೌಕರ್ಯಗಳಿಂದ ಕೂಡಿದ ವಸತಿ ಯೋಜನೆಯನ್ನು ಮಾಡಲಾಗುವುದು. ಹೀಗಾಗಿ ವಿದ್ಯಾರ್ಥಗಳಿಗೆ ವಸತಿ ಉಡುಪಿ, ದಕ್ಷಿಣ ಮತ್ತು ಉತ್ತರ ಕನ್ನಡದಲ್ಲಿನ ವಸತಿ ಶಾಲೆಗಳ ಅಭಿವೃದ್ಧಿ ಮಾಡಲಾಗುವುದು ಎಂದು ಹೇಳಿದ್ದಾರೆ.

ರಾಜ್ಯ ಬಜೆಟ್‌ನಲ್ಲಿ ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸಕ್ಕೆ ಪೂರಕವಾಗುವಂತೆ ವಸತಿ ಶಾಲೆಗಳ ನಿರ್ಮಾಣಕ್ಕಾಗಿ 18 ಕೋಟಿ ರೂ. ವೆಚ್ಚ ಶ್ರೀ ನಾರಾಯಣ ಗುರು ವಸತಿ ಶಾಲೆಗೆ ಅನುದಾನವಾಗಿ ನೀಡುವುದಾಗಿ ಹೇಳಿದ್ದಾರೆ. ಆದರೆ ಅದರ ಬಗ್ಗೆ ವಿವಿಧ ರೀತಿಯ ವಿವಾದಕ್ಕೆ ಕಾರಣವಾಗಿದೆ. ಯಾಕೆಂದರೆ ಶ್ರೀ ನಾರಾಯಣ ಗುರು ಎನ್ನುವುದು ಅದೊಂದು ಜಾತಿಗೆ ಸೇರಿರುತ್ತದೆ. ಹಾಗಾಗಿ ಇದ್ದರಿಂದ ಇತರ ಜಾತಿಯವರಿಗೆ ವಂಚನೆಯಾಗುತ್ತದೆ. ಇದು ಆ ಜಾತಿ ಪಂಗಡದವರಿಗೆ ಮಾತ್ರ ಸೀಮಿತವಾಗುತ್ತದೆ ಎನ್ನುವ ಸಾಕಷ್ಟು ವಿವಾದಗಳು ಹುಟ್ಟಿಕೊಂಡಿದೆ.

ಇದನ್ನೂ ಓದಿ : ಸಿಎಂ ಬೊಮ್ಮಾಯಿ ಬಜೆಟ್ ಗೆ ಸಿದ್ದರಾಮಯ್ಯ ವಿಭಿನ್ನ ಪ್ರತಿಭಟನೆ: ಕಿವಿ ಮೇಲೆ ಕೇಸರಿ ಹೂವಿಟ್ಟುಕೊಂಡು ಬಂದ ವಿಪಕ್ಷ ನಾಯಕ

ಇದನ್ನೂ ಓದಿ : JP Nadda : ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಉಡುಪಿಗೆ ಆಗಮನ

ಇದನ್ನೂ ಓದಿ : ಕಾಂಗ್ರೆಸ್, ಬಿಜೆಪಿ ಎರಡೂ ಪಕ್ಷಗಳಿಂದ ಆಫರ್ ಇದೆ : ಆದ್ರೆ ಫ್ಯಾನ್ಸ್ ಪಕ್ಷಕ್ಕೆ ನನ್ನ ಬೆಂಬಲ ಎಂದ ಕಿಚ್ಚ ಸುದೀಪ್

ಸದ್ಯ ಈ ವಿವಾದಕ್ಕೆ ಕುರಿತಂತೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರು ತಮ್ಮ ಟ್ವೀಟರ್‌ ಖಾತೆಯಲ್ಲಿ ಹೇಳಿಕೆಯನ್ನು ನೀಡಿದ್ದಾರೆ. ಅದು ಏನೆಂದರೆ, “ನಾರಾಯಣ ಗುರು ನಿಗಮ ವಿಚಾರದಲ್ಲಿ ಯಾರಿಗೂ ಯಾವುದೇ ಆತಂಕ ಬೇಡ . ಮನ್ನಿಸಿ. ಇನ್ನೆರಡು ದಿನಗಳಲ್ಲಿ ನಿಗಮ ಘೋಷಿಸುತ್ತೇವೆ. ಜವಬ್ದಾರಿ ನನ್ನದು” ಎಂದು ಹೇಳಿದ್ದಾರೆ. ಈ ಟ್ವೀಟ್‌ನ ನಂತರ ಸಚಿವರು ಬಿಲ್ಲವ, ಈಡಿಗ ಸೇರಿದಂತೆ ಇತರ 26 ಜಾತಿಗಳಿಗೂ ವಸತಿ ಶಾಲೆಯಲ್ಲಿ ಅವಕಾಶವನ್ನು ನೀಡಲಾಗುತ್ತದೆ ಎಂದು ಭರವಸೆಯನ್ನು ನೀಡಿದ್ದಾರೆ. ಸದ್ಯ ಮುಂದೇನು ಆಗುತ್ತದೆ ಎಂದು ಕಾದುನೋಡುವ ಸ್ಥಿತಿ ರಾಜ್ಯದ ಜನತೆದ್ದಾಗಿದೆ.

Controversy over grants to Sri Narayana Guru Residential School: Minister Kota Srinivas Poojary’s tweet of hope for other castes

Comments are closed.