Alleged conversion: ಉತ್ತರ ಕಾಶಿಯಲ್ಲಿ ಮತಾಂತರದ ಆರೋಪ : ಕ್ರಿಶ್ಚಿಯನ್‌ ಮಿಷನರಿಗಳ ಮೇಲೆ ದಾಳಿ

ಉತ್ತರಾಖಂಡ್‌ : (Alleged conversion) ಕ್ರಿಸ್‌ ಮಸ್‌ ಗೆ ಎರಡು ದಿನಗಳ ಮೊದಲು ಬಲವಂತದ ಮತಾಂತರದ ಆರೋಪ ಕೇಳಿ ಬಂದಿದ್ದು, ಕ್ರಿಸ್ಚಿಯನ್‌ ಮಿಷನರಿಗಳ ಗುಂಪಿನ ಮೇಲೆ ಮೂವತ್ತಕ್ಕೂ ಹೆಚ್ಚು ಜನರು ದಾಳಿ ಮಾಡಿರುವ ಘಟನೆ ಉತ್ತರಾಖಂಡ್‌ ನ ಉತ್ತರ ಕಾಶಿಯಲ್ಲಿ ನಡೆದಿದೆ. ದಾಳಿ ನಡೆಸಿದವರು ಮತ್ತು ದಾಳಿಗೊಳಗಾದವರು ಎರಡು ಕಡೆಯಿಂದ ದೂರು ದಾಖಲಾಗಿದ್ದು, ಇದರ ಆಧಾರದ ಮೇಲೆ ಪುರೋಲಾ ಪೊಲೀಸ್‌ ಠಾಣೆಯಲ್ಲಿ ಎಫ್‌ ಐ ಅರ್‌ ದಾಖಲಾಗಿದೆ.

ಸ್ಥಳೀಯ ಪೊಲೀಸ್ ಅಧಿಕಾರಿಗಳ ಪ್ರಕಾರ ಪರಿಸ್ಥಿತಿ ನಿಯಂತ್ರಣದಲ್ಲಿದ್ದು, ಎಫ್‌ಐಆರ್‌ (Alleged conversion) ಗಳಿಗೆ ಸಂಬಂಧಿಸಿದಂತೆ ಇದುವರೆಗೆ ಯಾವುದೇ ಬಂಧನವಾಗಿಲ್ಲ. ಪೊಲೀಸರ ಪ್ರಕಾರ, ಮಸ್ಸೂರಿಯ ಯೂನಿಯನ್ ಚರ್ಚ್‌ನ ಪಾದ್ರಿ ಲಾಜರಸ್ ಕಾರ್ನೆಲಿಯಸ್ ಮತ್ತು ಅವರ ಪತ್ನಿ ಸುಷ್ಮಾ ಕಾರ್ನೆಲಿಯಸ್ ಚಿವಾಲಾ ಗ್ರಾಮದಲ್ಲಿ ನಿರ್ಮಾಣ ಹಂತದಲ್ಲಿರುವ ಕಟ್ಟಡದಲ್ಲಿ ಪ್ರಾರ್ಥನೆ ನಡೆಸುತ್ತಿದ್ದಾಗ ಸ್ಥಳೀಯ ಗುಂಪು ಸ್ಥಳಕ್ಕೆ ಆಗಮಿಸಿದ್ದು, ಧಾರ್ಮಿಕ ಮತಾಂತರ ಆರೋಪದ ಮೇಲೆ ಎರಡೂ ಗುಂಪುಗಳ ನಡುವೆ ವಾಗ್ವಾದ ನಡೆದಿದೆ. ಜಗಳದ ವೇಳೆ ಎರಡೂ ಗುಂಪಿನವರಿಗೆ ಸಣ್ಣಪುಟ್ಟ ಗಾಯಗಳಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.

ವಿಶ್ವ ಹಿಂದೂ ಪರಿಷತ್ (ವಿಎಚ್‌ಪಿ)ಯ ವೀರೇಂದ್ರ ಸಿಂಗ್ ರಾವತ್ ನೇತೃತ್ವದಲ್ಲಿ ಸ್ಥಳೀಯರು ಛಿವಾಲಾ ಗ್ರಾಮಕ್ಕೆ ಕೆಲವು ಹೊರಗಿನವರು ಆಗಮಿಸಿದ್ದಾರೆ ಮತ್ತು ಅವರು ಧಾರ್ಮಿಕ ಮತಾಂತರ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಎರಡೂ ಗುಂಪುಗಳ ನಡುವೆ ಕೆಲಕಾಲ ವಾಗ್ವಾದವೂ ನಡೆಯಿತು. ವೀರೇಂದ್ರ ಸಿಂಗ್ ರಾವತ್ ನೀಡಿದ ದೂರಿನ ಆಧಾರದ ಮೇಲೆ ನಾವು ಪಾದ್ರಿ ಮತ್ತು ಇತರರ ವಿರುದ್ಧ ಎಫ್‌ಐಆರ್ ದಾಖಲಿಸಿದ್ದೇವೆ ಎಂದು ಪುರೋಲಾ ಠಾಣಾಧಿಕಾರಿ (ಎಸ್‌ಒ) ಕೋಮಲ್ ಸಿಂಗ್ ರಾವತ್ ಹೇಳಿದ್ದಾರೆ.

ನಂತರದಲ್ಲಿ ದಾಳಿಗೊಳಗಾದ ಗುಂಪಿನವರು ದೂರು ನೀಡಿದ್ದು, ಸ್ಥಳೀಯರು ದಾಳಿಗೆ ಬಂದಾಗ ನಾವು ಪೂಜೆಯಲ್ಲಿ ತೊಡಗಿದ್ದೆವು. ನಮ್ಮ ವಾಹನವನ್ನು ಧ್ವಂಸ ಮಾಡಿದ್ದಲ್ಲದೆ ನಮ್ಮ ಮೇಲೂ ಹಲ್ಲೆ ನಡೆಸಿದ್ದಾರೆ ಎಂದು ದೂರು ನೀಡಿದ್ದಾರೆ. ಈ ದೂರಿನನ್ವಯ ದಾಳಿ ನಡೆಸಿದ ಗುಂಪಿನ ಮೇಲೂ ಎಫ್‌ ಐ ಆರ್‌ ದಾಖಲಿಸಿದ್ದೇವೆ ಎಂದು ರಾವತ್‌ ಹೇಳಿದ್ದಾರೆ. ಈ ಬಗ್ಗೆ ತನಿಖೆ ನಡೆಸುತ್ತಿದ್ದು, ಅದರ ಆಧಾರದ ಮೇಲೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ರಾವತ್ ಹೇಳಿದ್ದಾರೆ.

ಇದನ್ನೂ ಓದಿ : Madhya pradesh crime: ಮದುವೆಯಾಗುವಂತೆ ಕೇಳಿದ್ದಕ್ಕೆ ಗೆಳತಿ ಥಳಿತ : ಆರೋಪಿ ಅರೆಸ್ಟ್‌

ಇದನ್ನೂ ಓದಿ : Smuggling of red sandalwood : ಕೆಂಪು ರಕ್ತಚಂದನ ಕಳ್ಳಸಾಗಣಿ : 73 ಸ್ಮಗ್ಲರ್‌ ಅರೆಸ್ಟ್‌, 50 ಕೋಟಿ ಮೌಲ್ಯದ ಸೊತ್ತು ವಶ

ಸ್ಥಳೀಯ ನಿವಾಸಿಗಳ ದೂರಿನ ಮೇರೆಗೆ ಎಫ್‌ಐಆರ್ ಅನ್ನು ಸೆಕ್ಷನ್ 153 ಎ , 323 ಅಡಿಯಲ್ಲಿ ದಾಖಲಿಸಲಾಗಿದೆ. ಭಾರತೀಯ ದಂಡ ಸಂಹಿತೆಯ (IPC) 504 ಜೊತೆಗೆ ಉತ್ತರಾಖಂಡ್ ಧಾರ್ಮಿಕ ಸ್ವಾತಂತ್ರ್ಯ ಕಾಯಿದೆ, 2018 ರ ಸೆಕ್ಷನ್ 3/5, ಐಪಿಸಿಯ ಸೆಕ್ಷನ್ 147, 153 ಎ, 323, 504, 506, ಮತ್ತು 427ರ ಅಡಿಯಲ್ಲಿ ಅಪರಿಚಿತ ನಿವಾಸಿಗಳ ವಿರುದ್ಧ ಇತರ ಎಫ್‌ಐಆರ್ ದಾಖಲಿಸಲಾಗಿದೆ.

(Alleged conversion) Two days before Christmas, the allegation of forced conversion was heard and the incident in which more than thirty people attacked a group of Christian missionaries took place in Uttarakhand’s Uttarakhand. Complaints were filed by both the attacker and the attacked, based on which an FIR was registered at the Purola police station.

Comments are closed.