Mask Demand Price Hike : ಭಾರತದಲ್ಲಿ ಮತ್ತೆ ಕೊರೊನಾ ಆತಂಕ : ಹೆಚ್ಚಾಯ್ತು ಮಾಸ್ಕ್‌ಗಳಿಗೆ ಬೇಡಿಕೆ, ಬೆಲೆ ಏರಿಕೆ

ನವದೆಹಲಿ : ದೇಶದಲ್ಲಿ ಕೊರೊನಾ ಸೋಂಕು ಮತ್ತೆ ಸದ್ದು ಮಾಡುತ್ತಿರುವ ಹಿನ್ನಲೆಯಲ್ಲಿ ಕೇಂದ್ರ ಆರೋಗ್ಯ ಸಚಿವ ಮಾನ್ಸುಖ್‌ ಮಾಂಡವಿಯಾ ಅವರು ದೇಶದ ಜನರಿಗೆ ಮಾಸ್ಕ್‌ ಧರಿಸುವಂತೆ ಮನವಿ (Mask Demand Price Hike) ಮಾಡಿದ್ದಾರೆ. ಅದರಂತೆ ಶಾಲೆಗಳು, ಕಾಲೇಜುಗಳು ಮತ್ತು ಸಿನಿಮಾಮಂದಿರಗಳಂತಹ ಒಳಾಂಗಣ ಸ್ಥಳಗಳಲ್ಲಿ ಮಾಸ್ಕ್‌ ಧರಿಸುವಂತೆ ಕರ್ನಾಟಕ ಸರಕಾರ ಕಡ್ಡಾಯಗೊಳಿಸಿದೆ. ಅಷ್ಟೇ ಅಲ್ಲದೇ ಆಸ್ಪತ್ರೆಗಳ ಪ್ರವೇಶಕ್ಕೂ ಮುನ್ನ ಕಡ್ಡಾಯವಾಗಿ ಮಾಸ್ಕ್‌ ಧರಿಸುವಂತೆ ತಿಳಿಸಿದೆ. ಈ ಹಿನ್ನಲೆಯಲ್ಲಿ ಮಾಸ್ಕ್‌ಗಳ ಬೇಡಿಕೆ ಹೆಚ್ಚುತ್ತಿದ್ದಂತೆ ಬೆಲೆ ಕೂಡ ಏರಿಕೆ ಆಗಿದೆ.

ಈಗಾಗಲೇ ಕೊರೊನಾ ಸೋಂಕು ಚೀನಾದಲ್ಲಿ ಕೋಲಾಹಲವನ್ನೇ ಸೃಷ್ಟಿಸಿದೆ. ಕೋವಿಡ್‌ನ ಹೊಸ ರೂಪಾಂತರ ತಳಿ ಬಿಎಫ್‌ 7 ಪ್ರಕರಣಗಳು ಭಾರತದಲಿ ಕೂಡ ಪತ್ತೆಯಾಗಿದೆ. ಗುಜಾರಾತಿನಲ್ಲಿ ಮೂರು ಮತ್ತು ಒಡಿಶಾದಲ್ಲಿ ಒಬ್ಬರಿಗೆ ಕೋವಿಡ್‌ ಬಿಎಫ್‌ 7 ಸೋಂಕು ದೃಢಪಟ್ಟಿದೆ. ಇದರ ಪರಿಣಾಮ ಜನರು ಮೇಲೆ ಸ್ಪಷ್ಟವಾಗಿ ಗೋಚರಿಸುತ್ತಿದ್ದು, ಅವರಲ್ಲಿ ಆತಂಕವನ್ನು ಹೆಚ್ಚುತ್ತಿದೆ. ಹಾಗಾಗಿ ರಾಜಧಾನಿಯ ಸಗಟು ಮಾರುಕಟ್ಟೆಯಲ್ಲಿ ಮಾಸ್ಕ್‌ಗಳ ಬೇಡಿಕೆ ಒಂದೇ ಸಲ ಏರಿಕೆಯಾಗಲು ಇದೇ ಕಾರಣವಾಗಿದೆ. ಆದರೂ ಸ್ಯಾನಿಟೈಸರ್‌ಗಳು ಹಾಗೂ ಇತರ ಶಸ್ತ್ರಚಿಕಿತ್ಸಾ ವಸ್ತುಗಳು ಹಾಘೂ ಔಷಧಿಗಳ ಮಾರಾಟ ಕೂಡ ಮುಂದಿನ ದಿನಗಳಲ್ಲಿ ಏರಿಕೆಯಾಘುವ ಸಾಧ್ಯತೆ ಇರುತ್ತದೆ.

ಈ ಹಿಂದೆ ಮಾಸ್ಕ್‌ ಮಾರಾಟವು ಸ್ಥಗಿತಗೊಂಡಿತ್ತು, ಆದರೆ ಇದೀಗ ಮತ್ತೆ ಕೊರೊನಾ ಆತಂಕ ಉಂಟಾಗಿದ್ದು, ಮಾಸ್ಕ್‌ಗಳ ಮಾರಾಟ ಹೆಚ್ಚಾಗಲು ಶುರುವಾಗಿದೆ. ಸಗಟು ವ್ಯಾಪಾರಿಗಳ ಪ್ರಕಾರ, ಅನೇಕ ಚಿಲ್ಲರೆ ವ್ಯಾಪಾರಿಗಳು ಮತ್ತು ಗ್ರಾಹಕರು ಮಾಸ್ಕ್‌ಗಳನ್ನು ಖರೀದಿಸಲು ಪ್ರಾರಂಭಿಸಿದ್ದಾರೆ. ಮಾರುಕಟ್ಟೆಯಲ್ಲಿ ಗ್ರಾಹಕರು ಮತ್ತೆ ಮಾಸ್ಕ್‌ ಖರೀದಿಸಲು ಮುಂದಾಗಿದ್ದು, ಮಾಸ್ಕ್‌ ಬೇಡಿಕೆಯಲ್ಲಿ ಕೂಡ ಗಣನೀಯವಾಗಿ ಹೆಚ್ಚಾಗಿದೆ ಎಂದು ಉತ್ತರ ಭಾರತದ ಅತಿದೊಡ್ಡ ಡ್ರಗ್‌ ಮಾರುಕಟ್ಟೆಯಾದ ಭಗೀರಥ ಪ್ಯಾಲೇಸ್‌ನ ಭದ್ರತಾ ಮುಖ್ಯಸ್ಥ ಆನಂದ್‌ ಜೈನ್‌ ಹೇಳಿದ್ದಾರೆ. ಇವರ ಪ್ರಕಾರ ಮಾಸ್ಕ್‌ ಬೇಡಿಕೆಯಲ್ಲಿ ಸುಮಾರು ಶೇ. 20ರಿಂದ 25ರಷ್ಟು ಹೆಚ್ಚಾಗಿದೆ ಎಂದು ತಿಳಿಸಿದ್ದಾರೆ.

ಕೊರೊನಾ ವಿರುದ್ದದ ಹೋರಾಟದಲ್ಲಿ ಬಳಸುವ ಸ್ಯಾನಿಟೈಸರ್‌ಗಳು, ಥರ್ಮಾಮೀಟರ್‌ಗಳು, ಆಕ್ಸಿಮೀಟರ್‌ಗಳು ಅಥವಾ ಔಷಧೀಗಳಂತಹ ಇತರ ಸಹಾಯಕ ವಸ್ತುಗಳ ಮಾರಾಟದಲ್ಲಿ ಯಾವುದೇ ಗಮನಾರ್ಹ ವ್ಯತ್ಯಾಸವಿಲ್ಲ ಎಂದು ವ್ಯಾಪಾರಿಗಳು ಹೇಳಿದ್ದಾರೆ. ಸ್ಯಾನಿಟೈಸರ್‌ಗಳ ಮಾರಾಟದಲ್ಲಿ ಶೇ. 1 ರಿಂದ 2 ರಷ್ಟು ವ್ಯತ್ಯಾಸ ಕಂಡು ಬಂದಿರುತ್ತದೆ. ಆದರೆ ಮುಂದಿನ ದಿನಗಳಲ್ಲಿ ಇವುಗಳ ಮಾರಾಟ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ.

ಇದನ್ನೂ ಓದಿ : Coastal rushed from tourists: ಕೊರೊನಾ ಏರಿಕೆ ಭೀತಿಯ ನಡುವಲ್ಲೇ ಕರಾವಳಿಗೆ ಹರಿದು ಬಂತು ಪ್ರವಾಸಿಗರ ದಂಡು

ಇದನ್ನೂ ಓದಿ : China Corona Updates : ಚೀನಾದಲ್ಲಿ 24.80 ಕೋಟಿ ಜನರಿಗೆ ಕೊರೊನಾ ಸಾಧ್ಯತೆ : ಇನ್ಮುಂದೆ ಪ್ರಕಟವಾಗಲ್ಲ ಕೋವಿಡ್ ಅಂಕಿ ಅಂಶ

ಇದನ್ನೂ ಓದಿ : China Covid Censor Report : ಚೀನಾದಲ್ಲಿ ಕೋವಿಡ್ ಮಹಾ ಸ್ಫೋಟ : ಕೇವಲ 20 ದಿನದಲ್ಲಿ 250 ಮಿಲಿಯನ್ ಪ್ರಕರಣ ದಾಖಲು

ದೇಶದಲ್ಲಿ ಕೊರೊನಾ ಮತ್ತೆ ಚುರುಕುಗೊಳ್ಳುತ್ತಿದ್ದಂತೆ ಮಾಸ್ಕ್‌ಗಲ ಮಾರಾಟದಲ್ಲಿ ಚುರುಕು ಪಡೆದ ಬೆನ್ನಲ್ಲೇ, ಅದರ ಬೆಲೆ ಕೂಡ ಮಾರುಕಟ್ಟೆಯಲ್ಲಿ ಏರಿಕೆ ಆಗಿದೆ. ಪ್ರಾರಂಭದಲ್ಲಿ ಇದರ ಬೆಲೆ ಶೇ. 15ರಿಂದ 25ರಷ್ಟು ಏರಿಕೆ ಆಗಿದೆ ಎಂದು ಸಗಟು ವ್ಯಾಪಾರಿಗಳು ತಿಳಿಸಿದ್ದಾರೆ. ಕೊರೊನಾ ಇದೇ ಪರಿಸ್ಥತಿಯಲ್ಲಿ ಮುಂದುವರೆದರೆ ಮುಂದಿನ ದಿನಗಳಲ್ಲಿ ಶೇ. 30 ರಿಂದ 35ರಷ್ಟು ಏರಿಕೆಯಾಗುವ ಸಾಧ್ಯತೆ ಇದೆ ಎಂದು ತಿಳಿಸಿದ್ದಾರೆ. ಸದ್ಯ ಮಾಸ್ಕ್‌ಗಳ ಬೆಲೆ ಹೆಚ್ಚಳ ಸುಮಾರು ಶೇ. 25ರಷ್ಟು ಹೆಚ್ಚಳವಾಗಿದ್ದು, ಅಂದರೆ ಇದುವರೆಗೆ 100 ರೂಪಾಯಿಗೆ ಸಿಗುತ್ತಿದ್ದ ಸರಕು ಈಗ 125 ರೂಪಾಯಿಗೆ ಸಿಗುತ್ತಿದೆ ಎಂದು ತಿಳಿಸಿದ್ದಾರೆ.

Mask Demand Price Hike: Corona fear again in India: Demand for masks has increased, price has increased

Comments are closed.