Bus Accident 7 killed : ಸೇತುವೆ ಕೆಳಗೆ ಬಿದ್ದ ಬಸ್ 7 ಮಂದಿ ದುರ್ಮರಣ

ರಾಂಚಿ : Bus Accident 7 killed ವೇಗವಾಗಿ ಚಲಿಸುತ್ತಿದ್ದ ಬಸ್ ಚಾಲಕನ ನಿಯಂತ್ರಣ ತಪ್ಪಿ ಸೇತುವೆಯಿಂದ ಕೆಳೆಗೆ ಬಿದ್ದಿದೆ. ಪರಿಣಾಮ 7 ಮಂದಿ ದುರ್ಮರಣಕ್ಕೀಡಾಗಿದ್ದಾರೆ. ಘಟನೆಯಲ್ಲಿ ಹಲವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಜಾರ್ಖಂಡನ್ ಹಜಾರಿಬಾಗ್ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. ಅಪಘಾತದ ವೇಳೆ ಬಸ್ ನಲ್ಲಿ ಸುಮಾರು 50ಕ್ಕೂ ಹೆಚ್ಚು ಪ್ರಯಾಣಿಕರು ಇದ್ರು ಅಂತಾ ಗೊತ್ತಾಗಿದೆ.

ಗಿರಿದಿಹ್ ಜಿಲ್ಲೆಯಿಂದ ರಾಂಚಿಗೆ ತೆರಳುತ್ತಿದ್ದ ಬಸ್ ತತಿಜಾರಿಯಾ ಠಾಣಾ ವ್ಯಾಪ್ತಿಯ ಸೇತುವೆಯಿಂದ ಸಿವಾನ್ನೆ ನದಿ ಬಳಿ ನೀರಿಲ್ಲದ ಸೇತುವೆ ಕೆಳಗೆ ಬಿದ್ದಿದೆ. ಮೂವರು ಪ್ರಯಾಣಿಕರು ಸ್ಥಳದಲ್ಲೇ ಮೃತಪಟ್ಟಿದ್ದು, ನಾಲ್ವರು ಹಜಾರಿಬಾಗ್‌ನ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೇ ಕೊನೆಯುಸಿರೆಳೆದಿದ್ದಾರೆ. ನಜ್ಜು ಗುಜ್ಜಾದ ಬಸ್ ನಡಿ ಸಿಲುಕಿದ್ದವರನ್ನ ರಕ್ಷ ಸಿ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗ್ತಿದೆ ಅಂತಾ ಸ್ಥಳೀಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಕೆಲವರು ಗಂಭೀರವಾಗಿ ಗಾಯಗೊಂಡಿರುವುದರಿಂದ ಸಾವಿನ ಸಂಖ್ಯೆ ಹೆಚ್ಚಾಗಬಹುದು. ಉತ್ತಮ ಚಿಕಿತ್ಸೆಗಾಗಿ ನಾವು ಅವರನ್ನು ರಾಜೇಂದ್ರ ವೈದ್ಯಕೀಯ ವಿಜ್ಞಾನ ಸಂಸ್ಥೆ (RIMS)ಗೆ ಕಳುಹಿಸಲು ಸಿದ್ಧತೆ ನಡೆಸುತ್ತಿದ್ದೇವೆ ಎಂದು ಅವರು ಹೇಳಿದ್ದಾರೆ.

ಗರ್ಭಿಣಿ ಮೇಲೆ ಟ್ರ್ಯಾಕ್ಟರ್ ಹರಿಸಿದ ನೀಚ: ಇನ್ನು ಜಾರ್ಖಂಡ್​​​ನ ಹಜಾರಿಬಾಗ್ ಜಿಲ್ಲೆಯಲ್ಲಿ ಮತ್ತೊಂದು ಘೋರ ಕೃತ್ಯ ನಡೆದಿದೆ. ಸಾಲ ವಸೂಲಾತಿ ವೇಳೆ ಗರ್ಭಿಣಿ ಮೇಲೆ ಟ್ರ್ಯಾಕ್ಟರ್ ಹರಿಸಿ ಹತ್ಯಗೈಯಲಾಗಿದೆ. ಫೈನಾನ್ಸ್ ಕಂಪನಿ ಏಜೆಂಟ್ ವಿರುದ್ಧ ಪ್ರಕರಣ ದಾಖಲಾಗಿದೆ. ಫೈನಾನ್ಸ್ ಕಂಪನಿಯಲ್ಲಿ ಬಡ ಕುಟುಂಬವೊಂದು ಸಾಲ ಪಡೆದುಕೊಂಡಿತ್ತು. ಸಾಲ ವಸೂಲಾತಿಗೆಂದು ರೈತನ ಮನೆಗೆ ಖಾಸಗಿ ಫೈನಾನ್ಸ್ ಕಂಪನಿಯ ರಿಕವರಿ ಏಜೆಂಟ್‌ ಬಂದಿದ್ದಾನೆ. ಈ ವೇಳೆ ರೈತ ಹಾಗೂ ಏಜೆಂಟ್​ ನಡುವೆ ವಾಗ್ವಾದ ನಡೆದಿದೆ. ಕೋಪಗೊಂಡ ಏಜೆಂಟ್​ ಟ್ರ್ಯಾಕ್ಟರ್​ ಚಲಾಯಿಸಿಕೊಂಡು ಹೋಗಲು ಮುಂದಾಗಿದ್ದು, ಈ ವೇಳೆ ರೈತನ ಮೂರು ತಿಂಗಳ ಗರ್ಭಿಣಿ ಮಗಳು ಅದರ ಮುಂದೆ ಅಡ್ಡ ಬಂದಿದ್ದಾಳೆ. ಆದರೆ ಆ ಏಜೆಂಟ್​ ಆಕೆಯ ಮೇಲೆಯೇ ಟ್ರ್ಯಾಕ್ಟರ್ ಹರಿಸಿದ್ದಾನೆ.

ಗಂಭೀರವಾಗಿ ಗಾಯಗೊಂಡ ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಿಸದೆ ಆಕೆ ಮೃತಪಟ್ಟಿದ್ದಾಳೆ. ಘಟನೆಗೆ ಸಂಬಂಧಿಸಿದಂತೆ ಫೈನಾನ್ಸ್ ಕಂಪನಿಯ ರಿಕವರಿ ಏಜೆಂಟ್ ಹಾಗೂ ಮ್ಯಾನೇಜರ್ ಸೇರಿದಂತೆ ನಾಲ್ವರ ವಿರುದ್ಧ ಕೊಲೆ ಪ್ರಕರಣ ದಾಖಲಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮನೋಜ್ ರತನ್ ಚೋಥೆ ತಿಳಿಸಿದ್ದಾರೆ.

Bus Accident 7 killed Many Injured after Bus Falls off Bridge in Jharkhand

Comments are closed.