Ankola Crime Report : ಸ್ನಾನ ಮಾಡುತ್ತಿದ್ದ ಮಹಿಳೆಯ ವಿಡಿಯೋ ಶೂಟ್‌ : ಆರೋಪಿ ಬಂಧನ

ಅಂಕೋಲ : (Ankola Crime Report) ಶೌಚಾಲಯದಲ್ಲಿ ಮಹಿಳೆಯೋರ್ವರು ಸ್ನಾನ ಮಾಡುತ್ತಿದ್ದ ವೇಳೆಯಲ್ಲಿ ವಿಡಿಯೋ ಶೂಟ್‌ ಮಾಡಿದ ಆರೋಪದ ಹಿನ್ನೆಲೆಯಲ್ಲಿ ವ್ಯಕ್ತಿಯೋರ್ವನನ್ನು ಬಂಧಿಸಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಅಂಕೋಲ ತಾಲೂಕಿನ ಗಾಬಿತಕೇಣಿ ಎಂಬಲ್ಲಿ ನಡೆದಿದೆ.

ಮಾರುತಿ (34 ವರ್ಷ ) ಕೇಣಿ ಎಂಬಾತನೇ ಬಂಧನಕ್ಕೆ ಒಳಗಾಗಿರುವ ಆರೋಪಿಯಾಗಿದ್ದಾನೆ. ಪಕ್ಕದ ಊರಿಗೆ ತೆರಳಿದ್ದ ಮಾರುತಿ ಬೆಳಗಿನ ಜಾವ ಕಂಪೌಂಡ್‌ ಗೋಡೆಯ ಮೇಲೆ ಹತ್ತಿ ಶೌಚಾಲಯದಲ್ಲಿ ಮಹಿಳೆ ಸ್ನಾನ ಮಾಡುತ್ತಿರುವ ವೇಳೆಯಲ್ಲಿ ಇಣುಕಿ ನೋಡಿದ್ದಾನೆ. ನಂತರದಲ್ಲಿ ತನ್ನ ಕೈಯಲ್ಲಿದ್ದ ಮೊಬೈಲ್‌ನಿಂದ ಮಹಿಳೆಯ ಸ್ನಾನದ ವಿಡಿಯೋ ಸೆರೆ ಹಿಡಿದಿದ್ದಾನೆ.

ಈ ಕುರಿತು ಮಹಿಳೆ ಅಂಕೋಲ ಠಾಣೆಯ ಪೊಲೀಸರಿಗೆ ದೂರು ನೀಡಿದ್ದಾಳೆ. ದೂರಿನ ಆಧಾರದ ಮೇಲೆ ಆರೋಪಿಯನ್ನು ಪೊಲೀಸರು ಬಂಧಿಸಿ ವಿಚಾರಣೆಯನ್ನು ನಡೆಸುತ್ತಿದ್ದಾರೆ. ಮಹಿಳೆಯ ಮೇಳೆ ನಿರಂತರವಾಗಿ ದೌರ್ಜನ್ಯ ಎಸಗುತ್ತಿರುವ ಪ್ರಕರಣಗಳು ನಡೆಯುತ್ತಿರುವ ಬೆನ್ನಲ್ಲೇ ಇದೀಗ ಮತ್ತೊಂದು ಪ್ರಕರಣ ಪತ್ತೆಯಾಗಿದೆ.

ಇದನ್ನೂ ಓದಿ : Mallika Sherawat : ಮಧ್ಯರಾತ್ರಿ ಮನೆಗೆ ಕರೆಯುತ್ತಾರೆ, ಬಾಲಿವುಡ್ ಹೀರೋಸ್ ಅಸಲಿಯತ್ತು ಬಿಚ್ಚಿಟ್ಟ ಮಲ್ಲಿಕಾ ಶೇರಾವತ್

ಇದನ್ನೂ ಓದಿ : Good news for Sunny Leone : ಸನ್ನಿ ಲಿಯೋನ್ ಅಭಿಮಾನಿಗಳಿಗೆ ಸಿಹಿಸುದ್ದಿ: ದಕ್ಷಿಣ ಭಾರತದಲ್ಲೇ ಬಿಡು ಬಿಡ್ತಾರಂತೆ ನೀಲಿ ತಾರೆ

Ankola Crime Report Video shoot of a woman taking a bath Accused arrested

Comments are closed.