Siddaramaiahs birthday : ವೇದಿಕೆಯೇರುವ ಮುನ್ನ ದರ್ಗಾಕ್ಕೆ ಸಿದ್ದರಾಮಯ್ಯ ವಿಸಿಟ್​ : ಸಿದ್ದು ಜನ್ಮದಿನದ ಪ್ರಯುಕ್ತ ಸಿದ್ಧಗೊಂಡಿದೆ 3ಕಿಮೀ ಉದ್ದದ ಬ್ಯಾನರ್​

ದಾವಣಗೆರೆ : Siddaramaiahs birthday : ದಾವಣಗೆರೆಯಲ್ಲಿಂದು ಸಿದ್ದರಾಮೋತ್ಸವ ಸಂಭ್ರಮ ಜೋರಾಗಿದೆ. ತಮ್ಮ ಜನ್ಮ ದಿನದ ಅಮೃತ ಮಹೋತ್ಸವದ ನೆಪದಲ್ಲಿ ಕಾಂಗ್ರೆಸ್​ ಟಗರು ತಮ್ಮ ಶಕ್ತಿ ಏನು ಎನ್ನುವುದನ್ನು ಇಡೀ ರಾಜ್ಯಕ್ಕೆ ಪ್ರದರ್ಶಿಸಲು ಸಜ್ಜಾಗಿದ್ದಾರೆ . ಬರೋಬ್ಬರಿ 50 ಎಕರೆ ಜಾಗದಲ್ಲಿ ನಡೆಯುತ್ತಿರುವ ಸಮಾರಂಭದಲ್ಲಿ ಆರು ಲಕ್ಷಕ್ಕೂ ಅಧಿಕ ಜನರು ಸೇರುವ ನಿರೀಕ್ಷೆಯಿದೆ. ಹಲವು ವಿಶೇಷತೆಗಳಿಗೆ ಇಂದಿನ ಸಿದ್ದರಾಮೋತ್ಸವ ಕಾರ್ಯಕ್ರಮ ಸಾಕ್ಷಿಯಾಗಲಿದೆ.

ದಾವಣೆಗರೆಯಲ್ಲಿ ರೆಡಿಯಾಗಿರುವ ಅದ್ದೂರಿ ವೇದಿಕೆಯನ್ನು ಏರುವ ಮುನ್ನ ಸಿದ್ದರಾಮಯ್ಯ ದಾವಣೆಗೆರೆಯ ದುರ್ಗಾಂಬಾ ದೇವಸ್ಥಾನಕ್ಕೆ ಭೇಟಿ ನೀಡಿದರು. ನಗರ ದೇವತೆಯಾದ ದುರ್ಗಾಂಬಾ ದೇವಸ್ಥಾನಕ್ಕೆ ತೆರಳಿದ ಸಿದ್ದರಾಮಯ್ಯ ದೇವಿಯ ಆಶೀರ್ವಾದ ಪಡೆದವರು. ಬಳಿಕ ನೇರವಾಗಿ ಹಜರತ್​ ಅಲಿ ದರ್ಗಾಕ್ಕೂ ಸಿದ್ದರಾಮಯ್ಯ ಭೇಟಿ ನೀಡಿದ್ದಾರೆ. ದುರ್ಗಾಂಬಾ ದೇವರ ಆಶೀರ್ವಾದ ಪಡೆದ ಬಳಿಕ ದರ್ಗಾಕ್ಕೆ ಸಿದ್ದರಾಮಯ್ಯ ಭೇಟಿ ನೀಡಿದರು. ಇದಾದ ಬಳಿಕ ನಗರದಲ್ಲಿರುವ ಮದಕರಿ ನಾಯಕನ ಪುತ್ಥಳಿಗೆ ಮಾಲಾರ್ಪಣೆ ಮಾಡಿದರು.

ಸಿದ್ದರಾಮಯ್ಯ ಜನ್ಮ ದಿನದ ಪ್ರಯುಕ್ತ ಅಭಿಮಾನಿಗಳ ಸಂಭ್ರಮ ಮುಗಿಲು ಮುಟ್ಟಿದೆ. ನೆಚ್ಚಿನ ನಾಯಕನ ಜನ್ಮದಿನವನ್ನು ಆಚರಿಸಲು ಅಭಿಮಾನಿಗಳ ದಂಡೇ ದಾವಣಗೆರೆಯತ್ತ ಮುಖ ಮಾಡಿದೆ. ಸಿದ್ದರಾಮಯ್ಯಗೆ ಹೂ ಮಳೆಯ ಸ್ವಾಗತ ಕೋರಿದ ಅಭಿಮಾನಿಗಳು ಕುಣಿದು ಕುಪ್ಪಳಿಸಿ ಘೋಷಣೆಗಳನ್ನು ಕೂಗುವ ಮುನ್ನ ತಮ್ಮ ಹರ್ಷವನ್ನು ಹೊರ ಹಾಕುತ್ತಿದ್ದಾರೆ.

ಇತ್ತ ಸವದತ್ತಿಯ ಸೌರಭ್​​ ಆನಂದ್​ ಚೋಪ್ರಾ ಎಂಬವರು ಸಿದ್ದರಾಮಯ್ಯ ಜನ್ಮ ದಿನದ ಪ್ರಯುಕ್ತ ಬರೋಬ್ಬರಿ 3 ಕಿಲೋಮೀಟರ್​ ಉದ್ದವನ್ನು ಹೊಂದಿರುವ ಸಿದ್ದರಾಮಯ್ಯ ಬ್ಯಾನರ್​ ತಯಾರಿಸಿದ್ದಾರೆ. ಈ ಬ್ಯಾನರ್​ನಲ್ಲಿ ಸಿದ್ದರಾಮಯ್ಯರ 500 ಫೋಟೋಗಳನ್ನು ಅಳವಡಿಸಲಾಗಿದೆ. ಹಾಗೂ ಅವರ ಸಂಪೂರ್ಣ ಜೀವನ ಚರಿತ್ರೆಯನ್ನೇ ಈ ಬ್ಯಾನರ್​ನಲ್ಲಿ ಬರೆಯಲಾಗಿದೆ. ಸೂರತ್​ನಿಂದ ದಾವಣೆಗೆರೆಗೆ ಈ ಬೃಹತ್​ ಬ್ಯಾನರ್​​ ಆಗಮಿಸಿದೆ. ಈ ವಿಚಾರವಾಗಿ ಮಾತನಾಡಿದ ಸೌರಭ್​ ಆನಂದ್​ ಚೋಪ್ರಾ, ನಮಗೆ ಸಿದ್ದರಾಮಯ್ಯರ ಜೀವನ ಚರಿತ್ರೆ ಆಧರಿಸಿದ ಸಿನಿಮಾವನ್ನು ನಿರ್ಮಿಸಲು ಸಾಧ್ಯವಿಲ್ಲ. ಹೀಗಾಗಿ ಅವರಿಗೆ ಈ ವಿಶೇಷ ಬ್ಯಾನರ್​ ಅರ್ಪಿಸುವ ಮೂಲಕ ನಮ್ಮ ಅಭಿಮಾನವನ್ನು ತೋರಿದ್ದೇವೆ ಎಂದು ಹೇಳಿದರು.

ಇದನ್ನು ಓದಿ : siddaramaiah birthday rally :ಬೆಣ್ಣೆ ನಗರಿಯಲ್ಲಿ ಸಿದ್ದರಾಮೋತ್ಸವಕ್ಕೆ ಕ್ಷಣಗಣನೆ : ಭಾರಿ ಸಮಾರಂಭದ ಹಿಂದೆ ನೂರೆಂಟು ರಾಜಕೀಯ ಲೆಕ್ಕಾಚಾರ

ಇದನ್ನೂ ಓದಿ : Amit Shah will arrive in Bangalore : ಅತ್ತ ಸಿದ್ದರಾಮೋತ್ಸವ.. ಇತ್ತ ಅಮಿತ್​ ಶಾ ಬೆಂಗಳೂರಿಗೆ ಆಗಮನ : ಏನಿದು ರಾಜಕೀಯ ತಂತ್ರ

Construction of 3 km long banner on the occasion of Siddaramaiahs birthday

Comments are closed.