ಚಲಿಸುತ್ತಿರುವ ರೈಲಿನಲ್ಲಿ ಪ್ರಯಾಣಿಕರ ನಡುವೆ ಜಗಳ ; ಸಹ ಪ್ರಯಾಣಿಕರಿಗೆ ಬೆಂಕಿ ಹಚ್ಚಿ ಪರಾರಿ

ಕೋಝಿಕ್ಕೋಡ್‌ : (Arguments with passengers) ಚಲಿಸುತ್ತಿರುವ ರೈಲಿನೊಳಗೆ ಇಬ್ಬರು ಪ್ರಯಾಣಿಕರ ನಡುವೆ ಜಗಳ ನಡೆದಿದ್ದು, ವಾದ ವಿವಾದಗಳ ನಂತರ ವ್ಯಕ್ತಿಯೋರ್ವ ಸಹ ಪ್ರಯಾಣಿಕರಿಗೆ ಬೆಂಕಿ ಹಚ್ಚಿ ಅಲ್ಲಿಂದ ಪರಾರಿಯಾದ ಘಟನೆ ಕೇರಳದ ಕೋಝಿಕ್ಕೋಡ್‌ನ ಎಲತ್ತೂರ್ ಬಳಿ ನಡೆದಿದೆ. ಘಟನೆಯಲ್ಲಿ ಎಂಟು ಮಂದಿಗೆ ಸುಟ್ಟ ಗಾಯಗಳಾಗಿದ್ದು, ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಕೇರಳದ ಕೋಝಿಕ್ಕೋಡ್‌ನ ಎಲತ್ತೂರ್ ಬಳಿ ಚಲಿಸುತ್ತಿರುವ ರೈಲಿನೊಳಗೆ ಇಬ್ಬರು ಪ್ರಯಾಣಿಕರ ನಡುವೆ ಜಗಳ ನಡೆದಿದ್ದು, ನಂತರ ವ್ಯಕ್ತಿಯೊಬ್ಬ ತನ್ನ ಸಹ ಪ್ರಯಾಣಿಕರಿಗೆ ಬೆಂಕಿ ಹಚ್ಚಿದ್ದಾನೆ. ಭಾನುವಾರ ರಾತ್ರಿ 10 ಗಂಟೆ ಸುಮಾರಿಗೆ ಅಲಪ್ಪುಳ-ಕಣ್ಣೂರು ಎಕ್ಸಿಕ್ಯೂಟಿವ್ ಎಕ್ಸ್‌ಪ್ರೆಸ್ ರೈಲಿನ ಡಿ 1 ಕಂಪಾರ್ಟ್‌ಮೆಂಟ್‌ನಲ್ಲಿ ಈ ಘಟನೆ ಸಂಭವಿಸಿದೆ. ಘಟನೆಯಲ್ಲಿ ಗಾಯಗೊಂಡ ಪ್ರಯಾಣಿಕರನ್ನು ಆರ್‌ಪಿಎಫ್ ಆಸ್ಪತ್ರೆಗೆ ರವಾನಿಸಲಾಗಿದೆ.

ರೈಲ್ವೇ ಮೂಲಗಳ ಪ್ರಕಾರ, ಘಟನೆಯ ನಂತರ ಪ್ರಯಾಣಿಕರು ತುರ್ತು ಸರಪಳಿಯನ್ನು ಎಳೆದಿದ್ದು, ರೈಲು ನಿಧಾನವಾದಾಗ ಶಂಕಿತ ಆರೋಪಿ ವ್ಯಕ್ತಿ ತಪ್ಪಿಸಿಕೊಂಡಿದ್ದಾನೆ. ರೈಲ್ವೇ ರಕ್ಷಣಾ ಪಡೆಗೆ (ಆರ್‌ಪಿಎಫ್) ಮಾಹಿತಿ ನೀಡಿದ ಇತರ ಪ್ರಯಾಣಿಕರು ಕಂಪಾರ್ಟ್‌ ಮೆಂಟ್‌ ನಲ್ಲಿ ಹೊತ್ತಿಕೊಂಡ ಬೆಂಕಿಯನ್ನು ನಂದಿಸಿದ್ದಾರೆ. ಅಗತ್ಯ ತಪಾಸಣೆಯ ನಂತರ ರೈಲು ತನ್ನ ಪ್ರಯಾಣವನ್ನು ಮುಂದುವರಿಸಿದೆ.

ಇದನ್ನೂ ಓದಿ : ಕಮರಿಗೆ ಉರುಳಿದ ಬಸ್ಸು, ಹಲವರಿಗೆ ಗಾಯ

ಇದನ್ನೂ ಓದಿ : Cyber crime : 67 ಕೋಟಿ ನಾಗರೀಕರ ಗೌಪ್ಯ ಮಾಹಿತಿ ಮಾರಾಟ : ಓರ್ವ ವ್ಯಕ್ತಿ ಅರೆಸ್ಟ್

ಆರಂಭಿಕ ವರದಿಗಳ ಪ್ರಕಾರ, ಇಬ್ಬರು ಪ್ರಯಾಣಿಕರ ನಡುವೆ ವಾಗ್ವಾದದ ನಂತರ ಈ ಘಟನೆ ಸಂಭವಿಸಿದೆ. ಇನ್ನೂ ಘಟನೆ ಸಂಭವಿಸಿದ 100 ಮೀಟರ್ ದೂರದಲ್ಲಿ ರೈಲ್ವೆ ಹಳಿಯಲ್ಲಿ ಮೂರು ಮೃತದೇಹಗಳು ಪತ್ತೆಯಾಗಿವೆ. ಮೂವರೂ ಒಂದೇ ಕುಟುಂಬದವರು ಎಂದು ಗುರುತಿಸಲಾಗಿದೆ. ರೈಲಿನಲ್ಲಾದ ಘಟನೆಗೂ ಮೃತದೇಹಗಳು ಪತ್ತೆಯಾದ ಘಟನೆಗೂ ನೇರ ಸಂಬಂಧವಿದೆಯೇ ಎಂದು ಪೊಲೀಸರು ಪರಿಶೀಲಿಸುತ್ತಿದ್ದಾರೆ. ಅಪರಿಚಿತ ಆರೋಪಿಯನ್ನು ಪತ್ತೆ ಹಚ್ಚುವ ಕಾರ್ಯ ನಡೆಯುತ್ತಿದ್ದು, ತನಿಖೆಗಳು ಮುಂದುವರೆದಿದೆ.

ಇದನ್ನೂ ಓದಿ : ಸುರೇಶ್ ರೈನಾ ಸಂಬಂಧಿಕರ ಹತ್ಯೆ ಪ್ರಕರಣ : ಆರೋಪಿಯನ್ನು ಎನ್‌ಕೌಂಟರ್ ಮಾಡಿದ ಯುಪಿ ಪೊಲೀಸರು

Arguments with passengers: A fight between passengers in a moving train; Set fellow passengers on fire and escape

Comments are closed.