Assault by police – video viral:‌ ಸೈಕಲ್‌ನಿಂದ ಬಿದ್ದ ವೃದ್ದ ಶಿಕ್ಷಕ: ಅಮಾನುಷವಾಗಿ ಥಳಿಸಿದ ಲೇಡಿ ಪೊಲೀಸರು

ಬಿಹಾರ: (Assault by police – video viral) ಸ್ಕಿಡ್ ಆಗಿ ರಸ್ತೆಯಲ್ಲಿ ಬಿದ್ದಿದ್ದ ಹಿರಿಯ ಶಿಕ್ಷಕ ಸೈಕಲ್‌ ಅನ್ನು ಬೇಗ ಮೇಲಕ್ಕೆತ್ತಿಕೊಳ್ಳದ ಕಾರಣ ಲೇಡಿ ಪೊಲೀಸರು ಅಮಾನುಷವಾಗಿ ವೃದ್ದ ಶಿಕ್ಷಕನಿಗೆ ಥಳಿಸಿದ ಘಟನೆ ಬಿಹಾರದ ಕೈಮೂರ್‌ ಜಿಲ್ಲೆಯಲ್ಲಿ ನಡೆದಿದೆ. ಸದ್ಯ ಲೇಡಿ ಪೊಲೀಸರು ವೃದ್ದ ಶಿಕ್ಷಕನ ಮೇಲೆ ಹಲ್ಲೆ ಮಾಡುತ್ತಿರುವ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿದ್ದು, ಪೊಲೀಸರ ವಿರುದ್ದ ಆಕ್ರೋಶ ವ್ಯಕ್ತವಾಗುತ್ತಿದೆ.

ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆದ ಈ ವೀಡಿಯೊ(Assault by police – video viral)ದಲ್ಲಿ, ಇಬ್ಬರು ಲೇಡಿ ಪೊಲೀಸರು ಸಾರ್ವಜನಿಕ ರಸ್ತೆಯಲ್ಲಿ ಹಗಲು ಹೊತ್ತಿನಲ್ಲಿ ವೃದ್ಧ ವ್ಯಕ್ತಿಯೋರ್ವರನ್ನು ಅಮಾನುಷವಾಗಿ ಥಳಿಸುತ್ತಿರುವುದನ್ನು ಕಾಣಬಹುದು. ಮಹಿಳಾ ಪೋಲೀಸ್ ಅಧಿಕಾರಿಗಳು ನಿರಂತರವಾಗಿ ಆತನನ್ನು ನಿಷ್ಕರುಣೆಯಿಂದ ಹೊಡೆಯುತ್ತಿದ್ದು, ವ್ಯಕ್ತಿ ಹೊಡೆತದಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಿರುವುದನ್ನು ಕಾಣಬಹುದು.”

ವರದಿಯ ಪ್ರಕಾರ, ಸಂತ್ರಸ್ತ ಶಿಕ್ಷಕ ನವಲ್ ಕಿಶೋರ್ ಪಾಂಡೆ ಅವರು ಖಾಸಗಿ ಶಾಲೆಯಲ್ಲಿ ಕೆಲವು ಮಕ್ಕಳಿಗೆ ಪಾಠ ಹೇಳಿಕೋಡುತ್ತಾರೆ. ಹೀಗೆ ಪಾಠ ಮುಗಿಸಿ ಮನೆಗೆ ಹೋಗುತ್ತಿದ್ದಾಗ ಭಭುವಾದಲ್ಲಿನ ಜನನಿಬೀಡ ಪ್ರದೇಶದಲ್ಲಿ ಅವರ ಸೈಕಲ್ ಸ್ಕಿಡ್ ಆಗಿದ್ದು, ಟ್ರಾಫಿಕ್ ಜಾಮ್‌ಗೆ ಕಾರಣವಾಯಿತು. ಕೂಡಲೇ ಅಲ್ಲೇ ಇದ್ದ ಇಬ್ಬರು ಲೇಡಿ ಕಾನ್ಸ್‌ಟೇಬಲ್‌ಗಳು ಬಂದು ಸೈಕಲ್ ತೆಗೆಯುವಂತೆ ಹೇಳಿದರು. ವೃದ್ದ ಶಿಕ್ಷಕ ಸೈಕಲ್ ಎತ್ತಲು ಸಾದ್ಯವಾಗದೇ ಹರಸಾಹಸ ಪಡುತ್ತಿದ್ದು, ಈ ವೇಳೆ ಲೇಡಿ ಪೊಲೀಸರು ವ್ಯಕ್ತಿಗೆ ಸಹಾಯ ಮಾಡುವ ಬದಲಾಗಿ ಹಲ್ಲೆ ಮಾಡಿದ್ದಾರೆ.

ಸದ್ಯ ದೆಹಲಿ ಮಹಿಳಾ ಆಯೋಗದ (ಡಿಸಿಡಬ್ಲ್ಯು) ಮುಖ್ಯಸ್ಥೆ ಸ್ವಾತಿ ಮಲಿವಾಲ್ ಅವರು ಉಪ ಮುಖ್ಯಮಂತ್ರಿ ತೇಜಸ್ವಿ ಯಾದವ್ ಅವರನ್ನು ಟ್ವೀಟ್‌ನಲ್ಲಿ ಟ್ಯಾಗ್ ಮಾಡಿದ್ದು, ಇದರಲ್ಲಿ ಪೊಲೀಸರ ವಿರುದ್ಧ ಕ್ರಮಕ್ಕೆ ಅಗ್ರಹಿಸಲಾಗಿದೆ. ಇನ್ನೂ ಕೆಲವರು ಅಧಿಕಾರಿಗಳ ಮುಂದೆ ಹಿರಿಯ ಶಿಕ್ಷಕನ ಸೈಕಲ್ ಬಿದ್ದಿದ್ದು ಆತನ ತಪ್ಪು ಎಂದು ಪೋಸ್ಟ್‌ನಲ್ಲಿ ಹೇಳಲಾಗಿದೆ.

https://twitter.com/ravish_k_fan/status/1616722013443485698?ref_src=twsrc%5Etfw%7Ctwcamp%5Etweetembed%7Ctwterm%5E1616722013443485698%7Ctwgr%5Eeedecca85f7adfe6e723f0bb2ebe74ea2c004ac1%7Ctwcon%5Es1_&ref_url=https%3A%2F%2Fwww.india.com%2Fviral%2Fwatch-elderly-teacher-falls-from-cycle-lady-cops-brutally-beat-him-for-being-slow-in-bihar-5864390%2F

ಈ ಬಗ್ಗೆ ಮಹಿಳಾ ಆಯೋಗದ (ಡಿಸಿಡಬ್ಲ್ಯು) ಮುಖ್ಯಸ್ಥೆ ಸ್ವಾತಿ ಮಲಿವಾಲ್ ಅವರು ಟ್ವೀಟ್ ಮಾಡಿ, “ಈ ಪೊಲೀಸರು ಮುದುಕನನ್ನು ಹೇಗೆ ಕರುಣೆಯಿಲ್ಲದೆ ಥಳಿಸುತ್ತಿದ್ದಾರೆ, ಈ ವ್ಯಕ್ತಿಯನ್ನು ಬಾಬಾ ಶಾಲೆಯಲ್ಲಿ ಶಿಕ್ಷಕ ಎಂದು ಹೇಳಲಾಗುತ್ತದೆ. ಈ ಮೇಡಂಗಳ ಮುಂದೆ ಅವರ ಸೈಕಲ್ ಬಿದ್ದಿರುವುದು ಈ ವ್ಯಕ್ತಿಯ ತಪ್ಪೇ?.. @ಯಾದವ ತೇಜಶ್ವಿ, ಕ್ರಮ ಕೈಗೊಳ್ಳಿ” ಎಂದಿದ್ದಾರೆ.

ಇದನ್ನೂ ಓದಿ : Chikkamagaluru serial accident: ಚಿಕ್ಕಮಗಳೂರಲ್ಲಿ ಭೀಕರ ಸರಣಿ ಅಪಘಾತ : 20 ವಿದ್ಯಾರ್ಥಿಗಳಿಗೆ ಗಾಯ

ಇದನ್ನೂ ಓದಿ : Strange incident: ವಿಚಿತ್ರ ಘಟನೆ: ಸಾಕು ನಾಯಿಯನ್ನು ʻನಾಯಿʼ ಎಂದಿದ್ದಕ್ಕೆ ವೃದ್ದನ ಕೊಲೆ

Assault by police – video viral: Old teacher who fell from bicycle: Lady brutally beaten by police

Comments are closed.