ದರ್ಶನ್‌ ಅಭಿಮಾನಿಗಳಿಂದ ಕಟೌಟ್‌ ನಿರ್ಮಾಣ : ದಾಖಲೆ ಸೃಷ್ಟಿಸಿದ ಕ್ರಾಂತಿ ಸಿನಿಮಾ

ಸ್ಯಾಂಡಲ್‌ವುಡ್‌ನ ನಟ ದರ್ಶನ್‌ ಅಭಿನಯದ ಬಹುನಿರೀಕ್ಷಿತ “ಕ್ರಾಂತಿ” ಸಿನಿಮಾ ಬಿಡುಗಡೆಗೆ ಇನ್ನು ನಾಲ್ಕು ದಿನಗಳು ಮಾತ್ರ ಬಾಕಿಯಿದೆ. ಈಗಾಗಲೇ ಸಿನಿಮಾದ ಅಡ್ವಾನ್ಸ್‌ ಬುಕ್ಕಿಂಗ್‌ ಶುರುವಾಗಿದ್ದು, ಅಭಿಮಾನಿಗಳು ಟಿಕೆಟ್‌ಗಾಗಿ ಮುಗಿಬಿದ್ದಿದ್ದಾರೆ. ಮತ್ತೊಂದು ಕಡೆ “ಕ್ರಾಂತಿ” ಸಿನಿಮಾ ಕಟೌಟ್‌ಗಳ ನಿರ್ಮಾಣ ಕೆಲಸ ಭರದಿಂದ ನಡೀತಿದೆ. ಈ ಬಾರಿ “ಕ್ರಾಂತಿ” ಸಿನಿಮಾದ ದಾಖಲೆ ಸಂಖ್ಯೆಯಲ್ಲಿ ಕಟೌಟ್‌ (Kranti Movie Cutout) ನಿರ್ಮಾಣ ಆಗುತ್ತಿರುವುದು ವಿಶೇಷ ಆಗಿದೆ.

ವರ್ಷದ ಬಹುನಿರೀಕ್ಷಿತ “ಕ್ರಾಂತಿ” ಸಿನಿಮಾಕ್ಕೆ ವಿ.ಹರಿಕೃಷ್ಣ ಆಕ್ಷನ್‌ ಕಟ್‌ ಹೇಳಿದ್ದಾರೆ. ಈಗಾಗಲೇ ಸಿನಿಮಾದ ಟ್ರೈಲರ್‌ ಹಾಗೂ ಹಾಡು ರಿಲೀಸ್‌ ಆಗಿ ಹಿಟ್‌ ಆಗಿದೆ. ಗಣರಾಜ್ಯೋತ್ಸವದ (ಜನವರಿ 26)ರಂದು ಸಿನಿಮಾ ವಿಶ್ವದಾದ್ಯಂತ ತೆರೆಗಪ್ಪಳಿಸಲಿದೆ. ಡಿ ಬಾಸ್‌ ಅಭಿಮಾನಿಗಳಂತೂ ಫಸ್ಟ್‌ ಡೇ ಫಸ್ಟ್‌ ಶೋ ನೋಡೋಕೆ ಕಾತುರದಿಂದ ಕಾಯುತ್ತಿದ್ದಾರೆ. ಕಳೆದ ಹಲವು ತಿಂಗಳುಗಳಿಂದ ಅಭಿಮಾನಿಗಳು “ಕ್ರಾಂತಿ” ಪ್ರಚಾರ ಮಾಡುತ್ತಿದ್ದಾರೆ. ಸಿನಿಮಾ ಬಿಡುಗಡೆ ಡೇಟ್‌ ಹತ್ತಿರವಾದಂತೆ ಅಭಿಮಾನಿಗಳ ಸಂಭ್ರಮ ಮುಗಿಲು ಮುಟ್ಟಿದೆ. ದರ್ಶನ್‌ ಸಿನಿಮಾ ಅಂದ ಮೇಲೆ ಥಿಯೇಟರ್‌ಗಳ ಮುಂದೆ ಕಟೌಟ್‌ಗಳ ಭರಾಟೆ ಕೂಡ ಜೋರಾಗಿಯೇ ಇರುತ್ತದೆ. “ಕ್ರಾಂತಿ” ಸಿನಿಮಾಕ್ಕಾಗಿ ಅಭಿಮಾನಿಗಳು ಕೂಡ ಕಟೌಟ್‌ ಮಾಡಿಸುತ್ತಿದ್ದಾರೆ.

ಸಾಮಾನ್ಯವಾಗಿ ದರ್ಶನ್‌ ನಟನೆಯ ಸಿನಿಮಾಗಳಿಗೆ 55 ರಿಂದ 60 ಕಟೌಟ್‌ಗಳು ನಿರ್ಮಾಣ ಆಗುತ್ತಿತ್ತು. ಆದರೆ “ಕ್ರಾಂತಿ” ವಿಚಾರದಲ್ಲಿ ಆ ಸಂಖ್ಯೆ ದ್ವಿಗುಣಗೊಳ್ಳುವ ಸುಳಿವು ಸಿಗುತ್ತಿದೆ. ಇನ್ನು ಕೆಜಿ ರಸ್ತೆಯ ಪ್ರಮುಖ ಸಿನಿಮಂದಿರದ ಎದುರು ದೊಡ್ಡ ಕಟೌಟ್‌ ಎದ್ದು ನಿಲ್ಲಲಿದೆ. ಮಲ್ಲೇಶ್ವರಂದ ಕಟೌಟ್‌ ಅಂಗಡಿಯಲ್ಲಿ ಸಾಮಾನ್ಯವಾಗಿ ಕನ್ನಡ ಸಿನಿಮಾಗಳಿಗೆ ಕಟೌಟ್‌ಗಳನ್ನು ನಿರ್ಮಿಸಲಾಗುತ್ತಿದೆ. ಕಟೌಟ್‌ ತಯಾರಕರಾದ ಆನಂದ್‌ ಹಾಗೂ ತಂಡದವರು ಹಗಲಿರುಳು “ಕ್ರಾಂತಿ” ಕಟೌಟ್‌ಗಳ ತಯಾರಿಯಲ್ಲಿ ತೊಡಗಿಕೊಂಡಿದ್ದಾರೆ. ದಿನದಿಂದ ದಿನಕ್ಕೆ ಕಟೌಟ್‌ ನಿರ್ಮಾಣ ದ ಆರ್ಡರ್‌ ಹೆಚ್ಚಾಗುತ್ತಲೇ ಇದೆ ಎಂದು ಆನಂದ್‌ ಮಾಹಿತಿ ನೀಡಿದ್ದಾರೆ. ಸಾಮಾನ್ಯವಾಗಿ ದರ್ಶನ್‌ ಸಿನಿಮಾಗಳಿಗೆ 55 ರಿಂದ 60 ಕಟೌಟ್‌ ನಿರ್ಮಾಣ ಆಗುತ್ತಿತ್ತು. ಆದರೆ ಈ ಸಂಖ್ಯೆ ಹೆಚ್ಚುತ್ತಲೇ ಇದೆ ಎಂದಿದ್ದಾರೆ.

ಇದನ್ನೂ ಓದಿ : ಆರ್‌ಸಿಬಿ ಟ್ವಿಟರ್‌ನ ಹ್ಯಾಕ್ ಆಗಿದ್ದರೂ ಕಪ್‌ ನಮ್ದೆ ಎಂದ ಸಿಂಪಲ್‌ ಸುನಿ

ಇದನ್ನೂ ಓದಿ : Super Singer Mangli: ಗಾಯಕಿ ಮಂಗ್ಲಿ ತೆರಳುತ್ತಿದ್ದ ಕಾರಿಗೆ ಕಲ್ಲೆಸೆತ: ಪೊಲೀಸರಿಂದ ಲಾಠಿ ಚಾರ್ಜ್‌

ಇದನ್ನೂ ಓದಿ : ನಟ ದರ್ಶನ್‌ ಜೊತೆ ಹೀರೊಯಿನ್‌ ಆಗಲು ಈ ನಟಿಗೆ ಸಾಧ್ಯವೇ ಇಲ್ಲ : ಅಷ್ಟಕ್ಕೂ ಆ ನಟಿ ಯಾರು ಗೊತ್ತಾ ?

ಸಾಮಾನ್ಯವಾಗಿ ಸಿನಿಮಾದ ನಿರ್ಮಾಪಕರು ಕಟೌಟ್‌ಗಳನ್ನು ಮಾಡಿಸುತ್ತಾರೆ. ಈ ಬಾರಿ ಅಭಿಮಾನಿಗಳು ಕೂಡ ಕೈ ಜೋಡಿಸಿದ್ದಾರೆ. ಕೆಲ ಊರುಗಳಿಗೆ ತಮ್ಮದೇ ಹಣದಿಂದ ಕಟೌಟ್‌ ಮಾಡಿಸಿಕೊಂಡು ಹೋಗಿ ಸಂಭ್ರಮಾಚರಣೆಗೆ ಮುಂದಾಗಿದ್ದಾರೆ. ಸಿನಿತಂಡ 50 ರಿಂದ 60 ಕಟೌಟ್‌ಗೆ ಆರ್ಡರ್ ಕೊಟ್ಟಿದ್ದು, ಅಭಿಮಾನಿಗಳು 30 ಕಟೌಟ್‌ ಮಾಡಿಸುವ ಅಂದಾಜು ಇದೆ. ಆನಂದ್‌ ಹೇಳುವ ಪ್ರಕಾರ, ಅಭಿಮಾನಿಗಳು ಇನ್ನು ಆರ್ಡರ್‌ ಕೊಡುತ್ತಲೇ ಇದ್ದಾರೆ, ಈ ಸಂಖ್ಯೆ ಎಲ್ಲಿಗೆ ಹೋಗಿ ನಿಲ್ಲುತ್ತದೆ ಗೊತ್ತಿಲ್ಲ ಎಂದಿದ್ದಾರೆ. ಈಗಾಗಲೇ ದೂರದ ಊರುಗಳಿಗೆ “ಕ್ರಾಂತಿ” ದರ್ಶನ್‌ ಕಟೌಟ್‌ಗಳು ರವಾನೆ ಆಗುತ್ತಿದೆ.

Kranti Movie Cutout : Cutout made by Darshan fans : Kranti movie created a record

Comments are closed.