KL Rahul took Sai baba blessing : ಕಾಂಗರೂಬೇಟೆಗೆ ಮುನ್ನ ಸಾಯಿ ಬಾಬಾ ದರ್ಶನ ಪಡೆದ ರಾಹುಲ್, ಕನ್ನಡಿಗನಿಗೆ ಸಿಗಲಿದ್ಯಾ ಬಾಬಾ ಕೃಪೆ?

ನಾಗ್ಪುರ: ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಬಾರ್ಡರ್-ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿ (India vs Australia Border-Gavaskar Test series) ಗುರುವಾರ ಆರಂಭವಾಗಲಿದೆ. ಪ್ರಥಮ ಟೆಸ್ಟ್ ಪಂದ್ಯಕ್ಕೂ ಮುನ್ನ ಟೀಮ್ ಇಂಡಿಯಾ ಉಪನಾಯಕ ಕೆ.ಎಲ್ ರಾಹುಲ್ (vice-captain KL Rahul ) ಸಾಯಿ ಬಾಬಾ ದರ್ಶನ ಪಡೆದಿದ್ದಾರೆ.

ನಾಗ್ಪುರದ ಜಮ್ತಾದಲ್ಲಿರುವ ವಿದರ್ಭ ಕ್ರಿಕೆಟ್ ಸಂಸ್ಥೆ ಮೈದಾನದಲ್ಲಿ ಮಂಗಳವಾರ ಭಾರತ ತಂಡದ ಆಟಗಾರರು ಕಠಿಣ ಅಭ್ಯಾಸ ನಡೆಸಿದರು. ಅಭ್ಯಾಸ ನಂತರ ನಾಗ್ಪುರದಲ್ಲಿರುವ ಸಾಯಿ ಬಾಬಾ ಮಂದಿರಕ್ಕೆ ಭೇಟಿ ನೀಡಿದ ರಾಹುಲ್, ಸಾಯಿ ಬಾಬಾ ದರ್ಶನ ಪಡೆದರು. ಬಾಬಾ ಮಂದಿರಕ್ಕೆ ರಾಹುಲ್ ಭೇಟಿ ನೀಡಿದ ವೀಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

https://twitter.com/KL_Siku_Kumar/status/1622863095252267008?s=20&t=6xvnLN-BdlixYeKOmD5N_w

ನಾಗ್ಪುರದ ವಿದರ್ಭ ಕ್ರಿಕೆಟ್ ಸಂಸ್ಥೆ ಮೈದಾನದಲ್ಲಿ ಗುರುವಾರ ಆರಂಭವಾಗಲಿರುವ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯ ಪ್ರಥಮ ಟೆಸ್ಟ್ ಪಂದ್ಯದಲ್ಲಿ ಕನ್ನಡಿಗ ರಾಹುಲ್ ಟೀಮ್ ಇಂಡಿಯಾದ ಇನ್ನಿಂಗ್ಸ್ ಆರಂಭಿಸಲಿದ್ದಾರೆ. ನಾಯಕ ರೋಹಿತ್ ಶರ್ಮಾ ಮತ್ತು ಉಪನಾಯಕ ಕೆ.ಎಲ್ ರಾಹುಲ್ ಜೋಡಿ ಭಾರತ ತಂಡದ ಪರ ಓಪನರ್’ಗಳಾಗಿ ಕಣಕ್ಕಿಳಿಯಲಿದ್ದಾರೆ.ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್’ಷಿಪ್’ನಲ್ಲಿ ಫೈನಲ್ ತಲುಪಬೇಕಾದರೆ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯನ್ನು ಭಾರತ ಕನಿಷ್ಠ 2-0 ಅಂತರದಲ್ಲಿ ಗೆಲ್ಲಲೇಬೇಕಿದೆ.

ಆಸ್ಟ್ರೇಲಿಯಾ ತಂಡ 2016-17ನೇ ಸಾಲಿನಲ್ಲಿ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯನ್ನಾಡಲು ಭಾರತಕ್ಕೆ ಬಂದಿದ್ದಾಗ ಆ ಸರಣಿಯಲ್ಲಿ ಕೆ.ಎಲ್ ರಾಹುಲ್ ಅಮೋಘ ಆಟವಾಡಿದ್ದರು. ಆಡಿದ 7 ಇನ್ನಿಂಗ್ಸ್’ಗಳಿಂದ 65ರ ಸರಾಸರಿಯಲ್ಲಿ 6 ಅರ್ಧಶತಕಗಳ ನೆರವಿಂದ ಒಟ್ಟು 393 ರನ್ ಕಲೆ ಹಾಕಿದ್ದ ರಾಹುಲ್, ಭಾರತ 2-1ರ ಅಂತರದಲ್ಲಿ ಟೆಸ್ಟ್ ಸರಣಿ ಗೆಲ್ಲುವಲ್ಲಿ ನಿರ್ಣಾಯಕ ಪಾತ್ರ ವಹಿಸಿದ್ದರು.

vice-captain KL Rahul : 2016-17ನೇ ಸಾಲಿನ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯಲ್ಲಿ ರಾಹುಲ್ ಸಾಧನೆ :

ಇನ್ನಿಂಗ್ಸ್: 07
ರನ್: 393
ಸರಾಸರಿ: 65
ಅರ್ಧಶತಕ: 06

ಇದನ್ನೂ ಓದಿ : Border-Gavaskar Test series 2023 : ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯಲ್ಲಿ ಭಾರತವೇ ಕಿಂಗ್, ಹೇಗಿದೆ ಗೊತ್ತಾ ಕಾಂಗರೂ ವಿರುದ್ಧ ಟೀಮ್ ಇಂಡಿಯಾ ದಾಖಲೆ?

ಇದನ್ನೂ ಓದಿ : Ranji Semi final: ನಾಳೆಯಿಂದ ಚಿನ್ನಸ್ವಾಮಿಯಲ್ಲಿ ರಣಜಿ ಸೆಮಿಫೈನಲ್: ಸೌರಾಷ್ಟ್ರ ವಿರುದ್ಧ ಕರ್ನಾಟಕಕ್ಕೆ ಸೇಡಿನ ಸಮರ

ಇದನ್ನೂ ಓದಿ : ಅಂತರಾಷ್ಟ್ರೀಯ ಕ್ರಿಕೆಟ್ ಗೆ ನಿವೃತ್ತಿ ಘೋಷಿಸಿದ ಆರನ್ ಪಿಂಚ್

ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿ ಮದುವೆಯ ನಂತರ ರಾಹುಲ್ ಅವರಿಗೆ ಮೊದಲ ಪಂದ್ಯ. ಜನವರಿ 23ರಂದು ಮುಂಬೈ-ಪುಣೆ ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಖಂಡಾಲದಲ್ಲಿ ರಾಹುಲ್, ಹಿಂದಿ ಚಿತ್ರರಂಗದ ಹಿರಿಯ ನಟ ಸುನೀಲ್ ಶೆಟ್ಟಿಯವರ ಪುತ್ರಿ ಆತಿಯಾ ಶೆಟ್ಟಿಯವರನ್ನು ಮದುವೆಯಾಗಿದ್ದರು.

vice-captain KL Rahul : Rahul who had Sai Baba’s darshan before the kangaroo hunt, did the Kannadigas get Baba’s grace?

Comments are closed.