Auto-truck collision: ಆಟೋ ಟ್ರಕ್‌ ನಡುವೆ ಭೀಕರ ಅಪಘಾತ : ಒಂದೇ ಕುಟುಂಬದ 8ಮಂದಿ ಸಾವು

ಬಿಹಾರ: (Auto-truck collision) ಆಟೋ ರಿಕ್ಷಾ ಹಾಗೂ ಟ್ರಕ್‌ ನಡುವೆ ಮುಖಾಮುಖಿ ಢಿಕ್ಕಿಯಾಗಿ ಎರಡು ವರ್ಷದ ಮಗು ಸೇರಿದಂತೆ ಒಂದೇ ಕುಟುಂಬದ ಎಂಟು ಮಂದಿ ಸಾವನ್ನಪ್ಪಿರುವ ಘಟನೆ ಬಿಹಾರದ ಕತಿಹಾರದಲ್ಲಿ ಸೋಮವಾರ ರಾತ್ರಿ ನಡೆದಿದೆ. ಖೆರಿಯಾದ ಅರುಣ್‌ ಠಾಕೂರ್‌, ಅವರ ಪತ್ನಿ ಊರ್ಮಿಳಾ ದೇವಿ, ಸೊಸೆ ಪಲ್ಲವಿ ಕುಮಾರಿ, ಎರಡು ವರ್ಷದ ಮೊಮ್ಮಗಳು, ಸೋದರ ಮಾವ ಧನಂಜಯ್‌ ಠಾಕೂರ್‌ ಹಾಗೂ ಮುಖರ್ಜಿ ಎನ್ನುವವರು ಮೃತಪಟ್ಟವರು. ಇವರ ಜೊತೆಗೆ ಆಟೋ ಚಾಲಕ ಪಟ್ಟು ಪಾಸ್ವಾನ್‌ ಹಾಗೂ ಗೋಲು ಕುಮಾರ್‌ ಕೂಡ ಮೃತಪಟ್ಟಿದ್ದಾರೆ.

ಆಟೋದಲ್ಲಿ ಕುಟುಂಬ ಸದಸ್ಯರು ಖೇರಿಯಾದಿಂದ ಕತಿಹಾರ್‌ ರೈಲು ನಿಲ್ದಾಣಕ್ಕೆ ಪ್ರಯಾಣಿಸುತ್ತಿದ್ದರು. ಈ ವೇಳೆ ವೇಗವಾಗಿ ಬರುತ್ತಿದ್ದ ಟ್ರಕ್‌ ಒಂದು ಆಟೋಗೆ ಢಿಕ್ಕಿ (Auto-truck collision) ಹೊಡೆದಿದೆ. ಢಿಕ್ಕಿಯಾದ ಪರಿಣಾಮ ಆಟೋ ಚಾಲಕರು ಸೇರಿದಂತೆ ಎಂಟು ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಘಟನೆಯ ಶಬ್ದ ಕೇಳುತ್ತಿದ್ದಂತೆ ಸ್ಥಳೀಯರು ಹೊರಗೆ ಬಂದು ನೋಡಿದ್ದಾರೆ. ಅಷ್ಟರಲ್ಲಾಗಲೇ ಎಲ್ಲರೂ ಮೃತಪಟ್ಟಿದ್ದರು ಎನ್ನಲಾಗಿದೆ.

ಘಟನಾ ಸ್ಥಳಕ್ಕೆ ಪೊಲೀಸರು ಆಗಮಿಸಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ. ಇನ್ನೂ ಘಟನೆಗೆ ಕಾರಣವಾದ ಟ್ರಕ್‌ ಚಾಲಕನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಭೀಕರ ಅಗ್ನಿ ಅನಾಹುತ: ಪೇಂಟ್‌ ಅಂಗಡಿ ಸುಟ್ಟು ಭಸ್ಮ

ಕೊಡಗು: ಪೇಂಟ್‌ ಅಂಗಡಿಗೆ ಆಕಸ್ಮಿಕವಾಗಿ ಬೆಂಕಿ ಹೊತ್ತುಕೊಂಡಿದ್ದು, ಸಂಪೂರ್ಣವಾಗಿ ಅಂಗಡಿ ಸುಟ್ಟು ಭಸ್ಮವಾದ ಘಟನೆ ಕೊಡಗಿನ ಗೋಣಿಕೊಪ್ಪದಲ್ಲಿ ನಡೆದಿದೆ. ಸದ್ಯ ಅವಘಡದಲ್ಲಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.

ಗೋಣಿಕೊಪ್ಪದಲ್ಲಿರುವ ಪೇಂಟ್‌ ಅಂಗಡಿಗೆ ಆಕಸ್ಮಿಕವಾಗಿ ಬೆಂಕಿ ಹೊತ್ತುಕೊಂಡಿದೆ. ಕ್ಷಣದಲ್ಲೇ ಪೂರ್ತಿ ಅಂಗಡಿ ಬೆಂಕಿಗಾಹುತಿಯಾಗಿದ್ದು, ಕೂಡಲೇ ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿಗಳು ಧಾವಿಸಿದ್ದಾರೆ. ಅಕ್ಕಪಕ್ಕದ ಅಂಗಡಿಗೆ ಬೆಂಕಿ ತಗುಲದಂತೆ ಕಾರ್ಯಾಚರಣೆ ನಡೆಸಿ ಬೆಂಕಿ ನಂದಿಸುವ ಕಾರ್ಯ ನಡೆಸಿದ್ದಾರೆ.

ಇದನ್ನೂ ಓದಿ : Noida Lift collapse: ನಿರ್ಮಾಣ ಹಂತದ ಕಟ್ಟಡದಲ್ಲಿ ಲಿಫ್ಟ್‌ ಕುಸಿತ: ಇಂಜಿನಿಯರ್‌ ಸಾವು

ಇದನ್ನೂ ಓದಿ : illegal liquor Sale: ಉಡುಪಿಯಲ್ಲಿ ಅಕ್ರಮ ಮಧ್ಯ ಮಾರಾಟ: ನಾಲ್ವರು ವಶಕ್ಕೆ

ಆದರೆ ಬೆಂಕಿ ಹೊತ್ತಿಕೊಳ್ಳಲು ನಿಖರವಾದ ಕಾರಣಗಳು ತಿಳಿದುಬಂದಿಲ್ಲ. ಆದರೆ ಪೇಂಟ್‌ ಅಂಗಡಿಯಲ್ಲಿದ್ದ ಲಕ್ಷಾಂತರ ರೂಪಾಯಿಯ ವಸ್ತುಗಳು ಬೆಂಕಿಗೆ ಆಹುತಿಯಾಗಿವೆ.

Auto-truck collision: A terrible accident between an auto truck: 8 members of the same family died

Comments are closed.