Noida Lift collapse: ನಿರ್ಮಾಣ ಹಂತದ ಕಟ್ಟಡದಲ್ಲಿ ಲಿಫ್ಟ್‌ ಕುಸಿತ: ಇಂಜಿನಿಯರ್‌ ಸಾವು

ನೋಯ್ಡಾ: (Noida Lift collapse) ಗ್ರೇಟರ್ ನೋಯ್ಡಾದಲ್ಲಿ ನಿರ್ಮಾಣ ಹಂತದಲ್ಲಿರುವ ಕಟ್ಟಡದ ತಾತ್ಕಾಲಿಕ ಲಿಫ್ಟ್‌ ಅಪಘಾತಕ್ಕೀಡಾಗಿ ಖಾಸಗಿ ಕಂಪನಿಯೊಂದರ ಇಂಜಿನಿಯರ್‌ ಮೃತಪಟ್ಟಿರುವ ಘಟನೆ ನಡೆದಿದೆ. ಮೃತರನ್ನು ಫಿರೋಜಾಬಾದ್ ಜಿಲ್ಲೆಯ ರಿತಿಕ್ ರಾಥೋಡ್ (28 ವರ್ಷ) ಎಂದು ಗುರುತಿಸಲಾಗಿದೆ.

ವಸತಿ ಟವರ್‌ ಗಳ 25 ನೇ ಮಹಡಿಯಿಂದ ತಾತ್ಕಾಲಿಕ ಲಿಫ್ಟ್‌ (ನಿರ್ಮಾಣ ಸಾಮಾಗ್ರಿಗಳನ್ನು ಸಾಗಿಸಲು ಬಳಸಲಾಗುವುದು) ಅನ್ನು ತೆಗೆದುಹಾಕುವ ಪ್ರಕ್ರಿಯೆ ನಡೆಯುತ್ತಿರುವಾಗ ತಾತ್ಕಾಲಿಕ ಲಿಫ್ಟ್‌ ಕುಸಿದು (Noida Lift collapse) ರಿತಿಕ್‌ ರಾಥೋಡ್‌ ಸಾವನ್ನಪ್ಪಿದ್ದಾರೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಘಟನೆಯಲ್ಲಿ ರಾಥೋಡ್‌ ಅವರು ತೀವ್ರವಾಗಿ ಗಾಯಗೊಂಡಿದ್ದರು. ತೀವ್ರವಾಗಿ ಗಾಯಗೊಂಡ ಅವರನ್ನು ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗೆ ಸಾಗಿಸಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ರಾಥೋಡ್‌ ಅವರು ಸಾವನ್ನಪ್ಪಿದರು ಎಂದು ಹೆಚ್ಚುವರಿ ಉಪಪೊಲೀಸ್‌ ಆಯುಕ್ತ ದಿನೇಸ್‌ ಕುಮಾರ್‌ ಸಿಂಗ್‌ ಹೇಳಿದ್ದಾರೆ.

ಈ ಸಂಬಂಧ ಪೊಲೀಸ್‌ ಕಮಿಷನರ್‌ ಲಕ್ಷ್ಮಿ ಸಿಂಗ್‌ ಅವರು ಪ್ರಕರಣದ ಕುರಿತು ಎಫ್‌ ಐಆರ್‌ ದಾಖಲಿಸಬೇಕು. ಮತ್ತು ಇದಕ್ಕೆ ಕಾರಣರಾದವರನ್ನು ಬಂಧಿಸಬೇಕು ಎಂದು ಆದೇಶಿಸಿದರು. ಸದ್ಯ ಗ್ರೇಟರ್‌ ನೋಯ್ಡಾದ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಸುತ್ತಿದ್ದಾರೆ.

ಇದನ್ನೂ ಓದಿ : illegal liquor Sale: ಉಡುಪಿಯಲ್ಲಿ ಅಕ್ರಮ ಮಧ್ಯ ಮಾರಾಟ: ನಾಲ್ವರು ವಶಕ್ಕೆ

ಇದನ್ನೂ ಓದಿ : 2 boys dead: ಚರಂಡಿ ಗುಂಡಿಗೆ ಬಿದ್ದು ಇಬ್ಬರು ಬಾಲಕರು ಸಾವು

ಇದನ್ನೂ ಓದಿ : Delhi barbaric murder: ಪ್ರಿಯಕರನ ಜೊತೆ ಸೇರಿ ಪತಿಗೆ ಸ್ಕೆಚ್‌ ಹಾಕಿದ ಪತ್ನಿ: ಕತ್ತು ಸೀಳಿ ಬೆಂಕಿ ಹಚ್ಚಿ ಬರ್ಬರ ಕೊಲೆ

ಅಧಿಕಾರಿಯೊಬ್ಬರ ಪ್ರಕಾರ, ಸ್ಥಳದಲ್ಲಿ ಒಂದು ವರ್ಷದ ಅವಧಿಗೆ ತಾತ್ಕಾಲಿಕ ಲಿಫ್ಟ್‌ ಅನ್ನು ಅಳವಡಿಸಲಾಗಿದೆ. ಮತ್ತು ಅವಧಿ ಪೂರ್ಣಗೊಂಡ ನಂತರ ಅದನ್ನು ತೆಗೆದುಹಾಕಲಾಗುತ್ತದೆ ಎಂದಿದ್ದಾರೆ. ಇದೀಗ ಅವಧಿ ಪೂರ್ಣಗೊಂಡ ತಾತ್ಕಾಲಿಕ ಲಿಫ್ಟ್‌ ಅನ್ನು ತೆಗೆದುಹಾಕುವ ಸಂದರ್ಭದಲ್ಲಿ ಈ ಘಟನೆ ಸಂಭವಿಸಿದೆ ಎಂದಿದ್ದಾರೆ.

ಈ ಹಿಂದೆ ಮುಂಬೈ ನಲ್ಲಿ ಕೂಡ ಇದೇ ರೀತಿಯಾದ ಘಟನೆ ನಡೆದಿತ್ತು. ಲಿಫ್ಟ್‌ ಕುಸಿದು ಮೂವರು ಸ್ಥಳದಲ್ಲೇ ಸಾವನ್ನಪ್ಪಿದ್ದರು. ಈಗಲೂ ಇದೇ ರೀತಿಯ ಘಟನೆ ಮರುಕಳಿಸಿದ್ದು, ಇಂಜಿನಿಯರ್‌ ಯುವಕ ಸಾವನ್ನಪ್ಪಿದ್ದಾನೆ.

Noida Lift collapse: Lift collapse in under construction building: Engineer dies

Comments are closed.