ಮಾರೋಕೆ ಹೋಗಿದ್ದು ಹಳೇ ಚಪ್ಲಿ….! ಕಳೆದುಕೊಂಡಿದ್ದು ಅಕೌಂಟ್ ನಲ್ಲಿದ್ದ 1 ಲಕ್ಷ ಹಣ…!!

ಬೆಂಗಳೂರು: ಹಳೆ ಚಪ್ಲಿಯನ್ನು ಓಎಲ್ಎಕ್ಸ್ ನಲ್ಲಿ ಮಾರಲು ಹೋದ ಯುವಕ ಗ್ರಹಚಾರ ಕೆಟ್ಟು ತನ್ನ ಖಾತೆಯಿಂದಲೇ 1 ಲಕ್ಷ ರೂಪಾಯಿ ಕಳೆದುಕೊಂಡ ಘಟನೆ ಬೆಂಗಳೂರಿನ ಬಾಗಲೂರಿನಲ್ಲಿ ನಡೆದಿದೆ.

ವಿಮಾನಯಾನ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ 27 ವರ್ಷದ ಯುವಕನೊಬ್ಬ ತನ್ನ ಹಳೆ ಚಪ್ಲಿ  ಹಾಗೂ ಶೂಗಳನ್ನು ಮಾರಾಟ ಮಾಡಲು ನಿರ್ಧರಿಸಿದ್ದ. ಅದರಂತೆ ಓಎಲ್ಎಕ್ಸ್ ನಲ್ಲಿ ಜಾಹೀರಾತು ಪೋಸ್ಟ್ ಮಾಡಿದ್ದ.

ಇದನ್ನೂ ಓದಿ : ಸಂಕಷ್ಟಗಳಿಂದ ಕಂಗೆಟ್ಟ ಚಾಲೆಂಜಿಂಗ್ ಸ್ಟಾರ್ ….! ತಿರುನಲ್ಲಾರ್ ಶನಿದೇವರ ಮೊರೆ ಹೋದ ದಚ್ಚು….!!

ಯುವಕನ ಪೋಸ್ಟ್ ನೋಡಿದ ಅಪರಿಚಿತನೊಬ್ಬ ಕಾಲ್ ಮಾಡಿದ್ದು, ತಾನು ಎಲ್ಲ ಶೂ ಹಾಗೂ ಚಪ್ಲಿಗಳನ್ನು ಖರೀದಿಸುವುದಾಗಿ ಹೇಳಿದ್ದ. ಅಲ್ಲದೇ ಗೂಗಲ್ ಪೇ ನಂಬರ್ ಸೇರಿದಂತೆ ಹಲವು ಮಾಹಿತಿ ಪಡೆದುಕೊಂಡಿದ್ದಾನೆ.

ಬಳಿಕ ಚಪ್ಲಿ ಹಾಗೂ ಶೂ ಕೊಂಡೊಯ್ಯುವ ಮುನ್ನವೇ ದುಡ್ಡು ಹಾಕುವುದಾಗಿ ಹೇಳಿ ಪರಿಶೀಲಿಸುವಂತೆ ಹೇಳಿದ್ದಾನೆ. ಈ ವೇಳೆ ಯುವಕನ ಅಕೌಂಟ್ ನಲ್ಲಿದ್ದ 1 ಲಕ್ಷ ರೂಪಾಯಿ ಡ್ರಾ ಆಗಿದ್ದು, ಹಣ ಕಳೆದುಕೊಂಡ ಯುವಕ ಕಂಗಾಲಾಗಿದ್ದಾನೆ.

ಚಪ್ಲಿ ಖರೀದಿಸುವುದಾಗಿ ಮಾಹಿತಿ ಪಡೆದಿದ್ದ ಯುವಕನ ಪೋನ್ ನಂಬರ್ ಸಹ ಸ್ವಿಚ್ ಆಫ್ ಆಗಿದ್ದು, ಹಣ ಕಳೆದುಕೊಂಡ ಯುವಕ ಪೊಲೀಸರ ಮೊರೆ ಹೋಗಿದ್ದಾನೆ.  

Comments are closed.