woman in sudan : ‘ಮದುವೆಯಾಗುತ್ತೇನೆ, ವರನನ್ನು ಹುಡುಕಿಕೊಡಿ’ ಎಂದು ಬೀದಿ ಬೀದಿ ಅಲೆಯುತ್ತಿದ್ದಾಳೆ ಈ ಯುವತಿ!

woman in sudan : ಮನೆಯಲ್ಲಿನ ಹೆಣ್ಣು ಮಕ್ಕಳನ್ನು ಮದುವೆ ಮಾಡಿಸೋದು ಅಂದರೆ ಸುಮ್ಮನೇ ಮಾತಲ್ಲ. ವರಾನ್ವೇಷಣೆ ಮಾಡಿ ಆತನ ಕುಲ-ಗೋತ್ರಗಳನ್ನು ತಿಳಿದುಕೊಂಡು ಬಳಿಕ ಒಳ್ಳೆಯ ದಿನ ನೋಡಿ ಮದುವೆ ನೆರವೇರಿಸುವ ವೇಳೆಗೆ ಸುಸ್ತೋ ಸುಸ್ತು. ಆದರೆ ಸುಡಾನ್​ನಲ್ಲಿ ಮಾತ್ರ ಯುವತಿಯೊಬ್ಬಳು ನನಗೊಂದು ವರ ಬೇಕಾಗಿದ್ದಾನೆ ಎಂಬ ಬೋರ್ಡ್​ನ್ನು ಕುತ್ತಿಗೆಗೆ ನೇತು ಹಾಕಿಕೊಂಡು ಸುಡಾನ್​ ರಾಜಧಾನಿ ಖಾರ್ಟೂಮ್​ನಲ್ಲಿ ಬೀದಿ ಬೀದಿ ಅಲೆಯುತ್ತಿದ್ದಾಳೆ. ಯುವತಿಯು ಈ ರೀತಿ ಅಲೆಯುತ್ತಿರುವ ಫೋಟೋ ಹಾಗೂ ವಿಡಿಯೋಗಳು ಇದೀಗ ಸೋಶಿಯಲ್​ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗಿದೆ.


ನನಗೆ ವರ ಬೇಕಾಗಿದ್ದಾನೆ. ನಾನು ಮದುವೆಯಾಗಬೇಕು. ನನಗೆ ಬಹುಪತ್ನಿತ್ವವಾದರೂ ಅಡ್ಡಿಲ್ಲ. ಆದರೆ ನನಗೊಬ್ಬ ವರ ಬೇಕೆಂದು ಖಾರ್ಟೂಮ್​ನ ಟ್ರಾಫಿಕ್​ ಸಿಗ್ನಲ್​ಗಳ ಬಳಿಯಲ್ಲಿ ಈ ಯುವತಿ ಬೋರ್ಡ್​ನ್ನು ಕುತ್ತಿಗೆಗೆ ನೇತು ಹಾಕಿಕೊಂಡು ಅಲೆಯುತ್ತಿದ್ದಾಳೆ. ಕುತ್ತಿಗೆಗೆ ನೇತು ಹಾಕಿಕೊಂಡಿರುವ ಬೋರ್ಡ್​ನಲ್ಲಿ ಯುವತಿ ತನ್ನ ಮೊಬೈಲ್ ಸಂಖ್ಯೆಯನ್ನೂ ನಮೂದಿಸಿದ್ದಾಳೆ.


ಈ ವಿಡಿಯೋ ಸೋಶಿಯಲ್​ ಮೀಡಿಯಾಗಳಲ್ಲಿ ವೈರಲ್​ ಆಗಿದ್ದ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಅಂದಹಾಗೆ ಸುಡಾನ್​ನಲ್ಲಿ 2020ರ ಬಳಿಕ ಮದುವೆಯ ದರವು ಗಣನೀಯವಾಗಿ ಇಳಿಕೆ ಕಂಡಿದೆ. 2018ಕ್ಕೆ ಹೋಲಿಕೆ ಮಾಡಿದರೆ 2020ರ ವೇಳೆಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟವರ ಸಂಖ್ಯೆಯು 21 ಪ್ರತಿಶತ ಇಳಿಕೆಯಾಗಿದೆ. ಸುಡಾನ್​ನಲ್ಲಿ 2018ರಲ್ಲಿ 1,80563 ಮಂದಿ ವೈವಾಹಿಕ ಜೀವನಕ್ಕೆ ಕಾಲಿರಿಸಿದ್ದರೆ 2020ರಲ್ಲಿ ಕೇವಲ 1,42,949 ವಿವಾಹಗಳು ನೋಂದಣಿಯಾಗಿವೆ. ಕೋವಿಡ್​ ಸಾಂಕ್ರಾಮಿಕ ಹಾಗೂ ಸುಡಾನ್​ನಲ್ಲಿ ಜನರ ಆರ್ಥಿಕ ವ್ಯವಸ್ಥೆ ಹದಗೆಟ್ಟಿರುವುದೇ ಇದಕ್ಕೆ ಕಾರಣ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.


ಮದುವೆ ಸಂಖ್ಯೆ ಕಡಿಮೆಯಾಗಿದ್ದು ಒಂದೆಡೆಯಾದರೆ ಸುಡಾನ್​ನಲ್ಲಿ ವಿಚ್ಚೇದನದ ಪ್ರಮಾಣದಲ್ಲಿ ಗಣನೀಯ ಏರಿಕೆ ಕಂಡು ಬಂದಿದೆ. ಒಂದು ಅಂಕಿ ಅಂಶದ ಪ್ರಕಾರ ಸುಡಾನ್​ನಲ್ಲಿ ಪ್ರತಿ ಒಂದು ಗಂಟೆಗೆ 7 ದಂಪತಿ ತಮ್ಮ ವೈವಾಹಿಕ ಸಂಬಂಧವನ್ನು ಮುರಿದುಕೊಳ್ಳುತ್ತಿದ್ದಾರಂತೆ.

ಇದನ್ನು ಓದಿ : actor dileeps friend arrested : ಖ್ಯಾತ ನಟಿಯ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣದ ಆರೋಪಿ ದಿಲೀಪ್​ ಸ್ನೇಹಿತನ ಬಂಧನ

ಇದನ್ನೂ ಓದಿ : Womens T20 Challenge 2022 : ಮಹಿಳಾ T20 ಚಾಲೆಂಜ್ 2022 ತಂಡಗಳನ್ನು ಪ್ರಕಟಿಸಿದ BCCI

woman in sudan takes to street in search for potential husband

Comments are closed.