Black pearl pele: ತಮ್ಮ ಜೀವನಕ್ಕೆ ಅಂತ್ಯ ಹಾಡಿದ ಫುಟ್ಬಾಲ್‌ ಜಗತ್ತಿನ “ಕಪ್ಪು ಮುತ್ತು” ಪೀಲೆ

ಬ್ರೆಜಿಲ್: (Black pearl pele) ಫುಟ್ಬಾಲ್‌ ಜಗತ್ತಿನ ಕಪ್ಪು ಮುತ್ತು ಎಂದೇ ಪ್ರಸಿದ್ದರಾದ ಪೀಲೆ ಕೊನೆಯುಸಿರೆಳದಿದ್ದಾರೆ. ಬ್ರೆಜಿಲ್‌ ತಂಡದ ಖ್ಯಾತ ಆಟಗಾರನಾದ ಪೀಲೆ ವಿಸ್ವಕಪ್‌ ಕಿರೀಟವನ್ನು ಮೂರು ಬಾರಿ ಬಬ್ರೆಜಿಲ್‌ ದೇಶದ ಮುಡಿಗೇರಸಿದ್ದಾರೆ. ಫುಟ್ಬಾಲ್‌ ಜಗತ್ತಿನ ಕಪ್ಪು ಮುತ್ತು ಕಾಲ್ಚೆಂಡಿನಾಟದ ದಂತಕತೆ ಅಂತಲೇ ಪ್ರಸಿದ್ದರಾದ ಪೀಲೆ ತಮ್ಮ ಫುಟ್ಬಾಲ್‌ ಆಟದ ಜೀವನಕ್ಕೆ ಅಂತ್ಯ ನೀಡಿ ಬಾರದ ಲೋಕಕ್ಕೆ ಪಯಣಿಸಿದ್ದಾರೆ.

ಪೀಲೆ (Black pearl pele) ಅವರು ಕೆಲ ವರ್ಷಗಳಿಂದ ಅನಾರೋಗ್ಯಕ್ಕೆ ತುತ್ತಾಗಿದ್ದು, ಕ್ಯಾನ್ಸರ್‌ ಅನ್ನೋ ಮಾರಕವಾದ ಕಾಯಿಲೆ ಅವರ ದೇಹಕ್ಕೆ ಹಾನಿಮಾಡಿತ್ತು. ಕೆಲ ದಿನಗಳ ಹಿಂದೆ ಇದರಿಂದಾಗಿ ಗಂಭೀರ ಸ್ಥಿತಿಗೆ ಪೀಲೆ ಬಂದಿದ್ದರು. ಕಳೆದ ಒಂದು ತಿಂಗಳಿಂದ ಪೌಲೋದಲ್ಲಿರುವ ಅಲ್ಬರ್ಟ್‌ ಐನ್‌ ಸ್ಟೀನ್‌ ಅಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಇಂದು ಚಿಕಿತ್ಸೆ ಫಲಕಾರಿಯಾಗದೇ ತಮ್ಮ ಜೀವನಕ್ಕೆ ಅಂತ್ಯ ಹಾಡಿದ್ದಾರೆ.

ಎರಡು ದಶಕಗಳ ಕಾಲ ಫುಟ್ಬಾಲ್‌ ಜಗತ್ತಿನಲ್ಲಿ ಮಿಂಚಿದ್ದ ಪೀಲೆ ಫುಟ್ಬಾಲ್‌ ಪ್ರಪಂಚದ ಕಪ್ಪು ಮುತ್ತು ಅಂತಲೇ ಖ್ಯಾತಿ ಹೊಂದಿದ್ದ ಇವರು, ಅಕ್ಟೋಬರ್‌ 23 1940 ರಲ್ಲಿ ಜನಿಸಿದರು. ತಮ್ಮ ಹದಿನೇಳನೇ ವಯಸ್ಸಿನಲ್ಲಿಯೇ ಫುಟ್ಬಾಲ್‌ ವಿಸ್ವಕಪ್‌ ಗೆ ಪಾದಾರ್ಪಣೆ ಮಾಡಿ 1363 ಪಂದ್ಯಗಳನ್ನು ಆಡಿದ್ದಾರೆ. ಬರೋಬ್ಬರಿ 1279 ಗೋಲ್ಗಳನ್ನು ಬಾರಿಸೋ ಮೂಲಕ ಗಿನ್ನೀಸ್‌ ದಾಖಲೆ ಬರೆದ ಪ್ರತೀತಿ ಇವರದ್ದು. 1997 ರಲ್ಲಿ ಬ್ರಿಟನ್‌ ರಾಣಿ ಎಲಿಜಬೆತ್‌ ನಿಂದ ಪ್ರತಿಷ್ಟಿತ ನೈಟ್‌ ಪದವಿಯನ್ನು ಕೂಡ ಪಡೆದುಕೊಂಡರು. ಬ್ರೆಜಿಲ್‌ ತಂಡದ ಅತ್ಯುನ್ನತ ಆಟಗಾರನಾಗಿದ್ದ ಪೀಲೆ ಮೂರು ಬಾರಿ ವಿಶ್ವಕಪ್‌ ತಂದು ಕೊಟ್ಟಿದ್ದಾರೆ. 1958, 1962 ಹಾಗೂ 1970 ರಲ್ಲಿ ಇವರು ವಿಶ್ವಕಪ್‌ ಅನ್ನು ಗೆದ್ದು ಬ್ರೆಜಿಲ್‌ ದೇಶದ ಮುಡಿಗೇರಿಸಿದ್ದಾರೆ. ಮೂರು ಬಾರಿ ವಿಶ್ವಕಪ್‌ ಗೆದ್ದ ಏಕೈಕ ಅಟಗಾರ ಎಂಬ ಖ್ಯಾತಿ ಕೂಡ ಇವರದ್ದು.

ಇದನ್ನೂ ಓದಿ : Rishabh Pant car accident: ಕಾರು ಅಪಘಾತದಲ್ಲಿ ಗಂಭೀರ ಗಾಯ; ರಿಷಭ್ ಪಂತ್ ಚೇತರಿಕೆಗೆ ಕ್ರಿಕೆಟ್ ದಿಗ್ಗಜರ ಹಾರೈಕೆ

ಇದೀಗ ಅನೇಕ ದಾಖಲೆಗಳನ್ನು ಬರೆದಿದ್ದ ಪೀಲೆ ಅವರ ನಿದನ ಫುಟ್ಬಾಲ್‌ ಜಗತ್ತಿಗೆ ತುಂಬಲಾರದ ನಷ್ಟವಾಗಿದೆ. ಅವರ ಸಾವಿಗೆ ಫುಟ್ಬಾಲ್‌ ಜಗತ್ತಿನ ದಿಗ್ಗಜರು ಹಾಗೂ ಅವರ ಅಭಿಮಾನಿಗಳು ಸಂತಾಪವನ್ನು ಸೂಚಿಸಿದ್ದಾರೆ.

Pele, who is known as the black pearl football legend of the football world, has ended his football playing life and traveled to the world.

Comments are closed.