Kerala Police:ತ್ಯಾಜ್ಯ ಸಂಸ್ಕರಣಾ ಘಟಕದಲ್ಲಿ ತುಂಡಾಗಿ ಸಿಕ್ಕಿದ ಮೃತದೇಹ ಪ್ರಕರಣ ಭೇದಿಸಿದ ಪೊಲೀಸರು : ಗ್ಯಾಂಗ್​ವಾರ್​ನಿಂದ ನಡೆದಿತ್ತು ಕೊಲೆ

ಕೇರಳ : Kerala Police : ಆಗಸ್ಟ್​​ ತಿಂಗಳಲ್ಲಿ ತಿರುವನಂತಪುರಂ ತ್ಯಾಜ್ಯ ಸಂಸ್ಕರಣಾ ಘಟಕದಲ್ಲಿ ಪತ್ತೆಯಾದ ಎರಡು ತುಂಡಾದ ಕಾಲುಗಳಿಗೆ ಸಂಬಂಧಿಸಿದ ಪ್ರಕರಣವನ್ನು ಭೇದಿಸುವಲ್ಲಿ ಕೇರಳ ಪೊಲೀಸರು ಇಂದು ಯಶಸ್ವಿಯಾಗಿದ್ದಾರೆ. ಈ ಕೃತ್ಯದಲ್ಲಿ ಭಾಗಿಯಾದ ಇಬ್ಬರು ಶಂಕಿತರನ್ನು ಪೊಲೀಸರು ಬಂಧಿಸಿದ್ದಾರೆ.


ಕತ್ತರಿಸಿ ಎಸೆಯಲಾದ ಕೈ ಕಾಲುಗಳು ತಮಿಳುನಾಡಿನ ಕನ್ಯಾಕುಮಾರಿ ಮೂಲದ ಕನಿಷ್ಕನ್​ ಎಂಬವನದ್ದು ಎಂಬುದು ಪೊಲೀಸರಿಗೆ ತಿಳಿದು ಬಂದಿದೆ. ಎರಡು ಗ್ಯಾಂಗ್​ ನಡುವೆ ಇದ್ದ ದ್ವೇಷದಿಂದಾಗಿ ಈ ಕೊಲೆ ನಡೆದಿತ್ತು. ತ್ಯಾಜ್ಯ ಸಂಸ್ಕರಣಾ ಘಟಕದಲ್ಲಿ ಕತ್ತರಿಸಿ ಎಸೆಯಲಾಗಿದ್ದ ಎರಡು ಕಾಲುಗಳು ಹಾಗೂ ಹೊಟ್ಟೆ ಭಾಗವನ್ನು ಪತ್ತೆ ಮಾಡಲಾಗಿತ್ತು ಎಂದು ತಿರುವನಂತಪುರಂ ನಗರ ಪೊಲೀಸ್​ ಆಯುಕ್ತ ಜಿ. ಸ್ಪರ್ಜನ್​ ಕುಮಾರ್​ ಮಾಹಿತಿ ನೀಡಿದ್ದಾರೆ.


ಈ ಪ್ರಕರಣ ಸಂಬಂಧ ವಲಿಯುತ್ತೂರ ಮೂಲದ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳನ್ನು ದರೋಡೆಕೋರ ರಮೇಶ್​ ಹಾಗೂ ಮೃತದೇಹವನ್ನು ವಿಲೇವಾರಿ ಮಾಡಲು ಸಹಕರಿಸಿದ ಶೆಹನ್​ ಶಾ ಎಂದು ಗುರುತಿಸಲಾಗಿದೆ. ಡಿಎನ್​ಎ ಪರೀಕ್ಷೆಯ ಫಲಿತಾಂಶದ ಬಳಿಕ ಮೃತ ವ್ಯಕ್ತಿಯ ಗುರುತನ್ನು ಅಧಿಕೃತವಾಗಿ ಬಹಿರಂಗಪಡಿಸುತ್ತೇವೆ ಎಂದು ಪೊಲೀಸರು ತಿಳಿಸಿದ್ದಾರೆ.


ಪೊಲೀಸರು ನೀಡಿರುವ ಮಾಹಿತಿಯ ಪ್ರಕಾರ, ಕೊಲೆಯಾದ ವ್ಯಕ್ತಿ ಹಾಗೂ ಆರೋಪಿ ಮನು ಗ್ಯಾಂಗ್​ನ ಭಾಗವಾಗಿದ್ದರು. ಇಬ್ಬರ ನಡುವೆ ಅನೇಕ ಕಾರಣಗಳಿಂದಾಗಿ ವೈಷಮ್ಯ ಮೂಡಿತ್ತು. ಇದನ್ನು ಬಗೆಹರಿಸಿಕೊಳ್ಳಲು ಕೊಲೆಯಾದ ವ್ಯಕ್ತಿಯನ್ನು ಮನು ನಿವಾಸಕ್ಕೆ ಕರೆಸಲಾಗಿತ್ತು. ಆದರೆ ಸಮಸ್ಯೆ ಬಗೆಹರಿಸಿಕೊಳ್ಳಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಮಾದಕ ವಸ್ತುವಿನ ಅಮಲಿನಲ್ಲಿದ್ದ ಮನು ಚಾಕುವಿನಿಂದ ಕಾನಿಷ್ಕನ್​​​ಗೆ ಇರಿದಿದ್ದಾರೆ. ಬಳಿಕ ಶೆಹನ್​ ಶಾ ಸಹಾಯದಿಂದ ಮೃತದೇಹವನ್ನು ತುಂಡು ತುಂಡು ಮಾಡಿ ತ್ಯಾಜ್ಯ ಸಂಸ್ಕರಣಾ ಘಟಕಕ್ಕೆ ಎಸೆಯಲಾಗಿತ್ತು.

ಆರಂಭದಲ್ಲಿ ಪೊಲೀಸರು ಕತ್ತರಿಸಿದ ಕಾಲುಗಳು ವೈದ್ಯಕೀಯ ತ್ಯಾಜ್ಯವಿರಬಹುದು ಎಂದು ಶಂಕಿಸಿದ್ದರು. ಆದರೆ ಹೆಚ್ಚಿನ ತನಿಖೆಯ ಸಂದರ್ಭದಲ್ಲಿ ಇದು ಕೊಲೆ ಎಂಬುದು ಪೊಲೀಸರಿಗೆ ಮನವರಿಕೆಯಾಗಿದೆ. ಉಪ ಆಯುಕ್ತ ಅಜಿತ್​ ಕುಮಾರ್​ ಮಾರ್ಗದರ್ಶನದಲ್ಲಿ ಸಹಾಯಕ ಪೊಲೀಸ್​ ಕಮಿಷನರ್​ ಡಿ.ಕೆ ಪೃಥ್ವಿರಾಜ್​ ನೇತೃತ್ವದ ವಿಶೇಷ ತಂಡವು ಪ್ರಕರಣದ ತನಿಖೆಯನ್ನು ನಡೆಸಿ ಶಂಕಿತ ಆರೋಪಿಗಳನ್ನು ಬಂಧಿಸಿದೆ.

ಇದನ್ನು ಓದಿ : 100 rs.controversy: ಸರ್ಕಾರಿ ಶಾಲೆಗಳಲ್ಲಿ ದೇಣಿಗೆ ವಸೂಲಿ; ತನ್ನ ಪಾತ್ರವಿಲ್ಲ ಎಂದ ಶಿಕ್ಷಣ ಸಚಿವ

ಇದನ್ನೂ ಓದಿ : MCA Election : ಕ್ರಿಕೆಟ್ ರಾಜಕೀಯದಲ್ಲಿ ಬಿಜೆಪಿ ನಾಯಕನ ವಿರುದ್ಧ ಸೋತ 1983ರ ವಿಶ್ವಕಪ್ ವಿಜೇತ ತಂಡದ ಸದಸ್ಯ

Body chopped into pieces, dumped: Kerala Police cracks ‘severed legs’ case, arrests 2

Comments are closed.