ಕೆಕೆಆರ್ ಪಾರ್ಟಿಯಲ್ಲಿತ್ತೂ ಡ್ರಗ್ : ಶಾಕಿಂಗ್ ಆರೋಪ ಮಾಡಿದ ಶೆಲ್ರಿನ್ ಚೋಪ್ರಾ

0

ಬಾಲಿವುಡ್ ನಲ್ಲೂ ನಶೆಯ ಗುಂಗು ಜೋರಾಗಿಯೇ ಸದ್ದು ಮಾಡುತ್ತಿದೆ . ಈಗಾಗಲೇ ಬಾಲಿವುಡ್ ನ ಹಸೀನಾಗಳು ಡ್ರಗ್ ನಶೆಯ ಖೆಡ್ಡಕ್ಕೆ ಬಿದ್ದಾಗಿದೆ. ಖ್ಯಾತ ನಟೀಮಣಿಯರಾದ ದೀಪೀಕಾ , ಸಾರಾ, ಶ್ರದ್ಧಾಗೆ ಈಗಾಗಲೇ ಎನ್ ಸಿ ಬಿ ನೋಟಿಸ್ ಕೂಡಾ ಜಾರಿ ಮಾಡಿದೆ.

ಜೊತೆಗೆ ವಿಚಾರಣೆಗೆ ಹಾಜರಾಗುವಂತೆಯೂ ಸೂಚಿಸಲಾಗಿದೆ. ಈ ಹಿನ್ನಲೆಯಲ್ಲಿ ದೀಪಿಕಾ ಕೂಡಾ ವಿಚಾರಣೆ ಗಾಗಿ ಗೋವಾದಿಂದ ಮುಂಬೈಗೆ ಆಗಮಿಸಿದ್ದಾರೆ.

ಮತ್ತೊಂದೆಡೆ ಈ ಡ್ರಗ್ ನಶೆಯ ಜಾಲದಲ್ಲಿ ಬಾಲಿವುಡ್ ನ ಖ್ಯಾತ ನಟರು ಇದ್ದಾರೆ . ಜೊತೆಗೆ ಅವರ ಪತ್ನಿಯರು ಡ್ರಗ್ ಸೇವನೆ ಮಾಡುತ್ತಾರೆ ಎಂಬ ಆರೋಪಗಳು ಕೇಳಿ ಬರುತ್ತಿದೆ. ಹೌದು ಈ ರೀತಿ ಆರೋಪ ಮಾಡುತ್ತಿರೋದು ಬಾಲಿವುಡ್ ಹಾಟ್ ನಟಿ , ಮಾಡೆಲ್ ಶೆಲ್ರಿನ್ ಚೋಪ್ರಾ.

ಬಾಲಿವುಡ್ ನಲ್ಲಿ ಕೇವಲ ಹಿರೋಯಿನ್ ಗಳು ಮಾತ್ರವಲ್ಲ, ಖ್ಯಾತ ನಟರು ಡ್ರಗ್ ಸೇವನೆಯನ್ನು ಮಾಡುತ್ತಾರೆ. ಹೀರೋಗಳು ನಡೆಸುವ ಬಾಲಿವುಡ್ ನ ಪಾರ್ಟಿಗಳಲ್ಲಿ ಡ್ರಗ್ ಬಳಕೆ ಸಾಮಾನ್ಯವಾಗಿರುತ್ತೆ ಅಂತ ಅವರು ಹೇಳಿದ್ದಾರೆ. ಇನ್ನು ಕೇವಲ ಬಾಲಿವುಡ್ ಸ್ಟಾರ್ ಗಳು ಮಾತ್ರವಲ್ಲ ಕ್ರಿಕೆಟರ್ಸ್ , ಸ್ಟಾರ್ ಹಾಗೂ ಕ್ರಿಕೆಟರ್ಸ್ ಪತ್ನಿಯರು ಡ್ರಗ್ ತೆಗೆದುಕೊಳ್ಳುತ್ತಾರೆ ಅಂತ ಆರೋಪಿಸಿದ್ದಾರೆ.

ಮತ್ತೊಂದೆಡೆ ಬಾಲಿವುಡ್ ನ ಬಾದ್ ಶಾ ಶಾರೂಕ್ ಕ್ರಿಕೆಟ್ ತಂಡದ ಮೇಲೂ ಶೆಲ್ರಿನ್ ಚೋಪ್ರಾ. ಗಂಭೀರ ಆರೋಪ ಮಾಡಿದ್ದಾರೆ. ಕೊಲ್ಕತ್ತಾ ದಲ್ಲಿ ಕೆಕೆ ಆರ್ ಪಂದ್ಯದ ಬಳಿಕ ನಡೆದ ಪಾರ್ಟಿಯಲ್ಲಿ ತಾನು ಭಾಗವಹಿಸಿದ್ದಾಗಿ ಹೇಳಿದ ಶೆಲ್ರಿನ್ ಚೋಪ್ರಾ, ರೆಸ್ಟ್ ರೂಂ ನಲ್ಲಿ ಸ್ಟಾರ್ ಪತ್ನಿಯರು ಕೊಕೇನ್ ಸೇವಿಸಿರೋದನ್ನು ತಾನು ನೋಡಿರೋದಾಗಿ ಹೇಳಿದ್ದಾರೆ.

ಇನ್ನು ಎನ್ ಸಿಬಿಯಿಂದ ಈ ಕುರಿತಂತೆ ನನಗೆ ನೋಟಿಸ್ ಬಂದರೆ ಹೆಸರನ್ನು ಬಹಿರಂಗ ಪಡಿಸೋದಾಗಿ ಹೇಳಿದ್ದಾರೆ. ಒಟ್ಟಾರೆ ನಶೆಯ ಹವಾ ಬಾಲಿವುಡ್ ನಲ್ಲಿ ಹರಡುತ್ತಿದ್ದು, ಯಾವೆಲ್ಲಾ ನಟರು ಇದರ ಉರುಳಿಗೆ ಸಿಕ್ಕಿ ಬೀಳುತ್ತಾರೋ ಗೊತ್ತಿಲ್ಲ.

Leave A Reply

Your email address will not be published.