ಮೈಸೂರು : ಖಾಕಿ ಪಡೆಗೆ ತಲೆನೋವು ತರಿಸಿದ್ದ ಮೈಸೂರಿನಲ್ಲಿ ನಡೆದಿದ್ದ ಯುವತಿ ಮೇಲಿನ ಸಾಮೂಹಿಕ ಅತ್ಯಾಚಾರ ಪ್ರಕರಣ ಕೊನೆಗೂ ಬಯಲಾಗಿದೆ. ಕತ್ತಲ ರಾತ್ರಿಯಲ್ಲಿ ನಡೆದಿದ್ದ ಅತ್ಯಾಚಾರ ಪ್ರಕರಣದ ಆರೋಪಿಗಳ ಬಂಧನದ ಸ್ಟೋರಿಯೇ ನಿಜಕ್ಕೂ ರೋಚಕ. ಅದ್ರಲ್ಲೂ ಆ ಒಂದು ಬಸ್ ಟಿಕೆಟ್ ಆರೋಪಿಗಳ ಬಂಧನಕ್ಕೆ ಸಹಕಾರಿಯಾಗಿದೆ.
ಎಂಬಿಎ ವಿದ್ಯಾರ್ಥಿನಿಯ ಮೇಲೆ ಕಾಮುಕರು ಕತ್ತಲ ರಾತ್ರಿಯಲ್ಲಿ ಅತ್ಯಾಚಾರವೆಸಗಿದ್ದರು. ಸ್ನೇಹಿತನ ಜೊತೆಗೆ ವಾಕಿಂಗ್‌ಗೆ ತೆರಳಿದ್ದ ಯುವತಿ ರಸ್ತೆ ಪಕ್ಕದಲ್ಲಿ ಕುಳಿತು ಮಾತನಾಡುತ್ತಿದ್ದಳು. ಈ ವೇಳೆಯಲ್ಲಿ ಬಂದ ಐವರು ಕಾಮುಕರನ್ನು ಯುವಕನ ಮೇಲೆ ಹಲ್ಲೆಯನ್ನು ನಡೆಸಿ ಯುವತಿಯನ್ನು ಪೊದೆಯ ಬಳಿಗೆ ಕರೆದೊಯ್ದು ಅತ್ಯಾಚಾರ ವೆಗಿಸಿದ್ದಾರೆ. ನಂತರ ಯುವಕನ ಬಳಿಯಲ್ಲಿ ಮೂರು ಲಕ್ಷಕ್ಕೆ ಬೇಡಿಕೆಯಿಟ್ಟು ಸುಮಾರು ಎರಡು ಗಂಟೆಗಳ ನಂತರ ಸ್ಥಳದಿಂದ ಪರಾರಿಯಾಗಿದ್ದರು. ಯುವಕ ಯುವತಿಯನ್ನು ಆಸ್ಪತ್ರೆಗೆ ದಾಖಲಿಸುತ್ತಿದ್ದಂತೆಯೇ ಪ್ರಕರಣ ಬಯಲಿಗೆ ಬಂದಿತ್ತು.
ಸಾಮೂಹಿಕ ಅತ್ಯಾಚಾರ ಪ್ರಕರಣ ರಾಜ್ಯ ಮಾತ್ರವಲ್ಲದೇ ದೇಶದಾದ್ಯಂತ ಬಾರೀ ಸುದ್ದಿಯಾಗಿತ್ತು. ಇದೇ ಕಾರಣಕ್ಕೆ ಪೊಲೀಸರು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದರು. ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದ ತಜ್ಞರ ಹಾಗೂ ಹಿರಿಯ ಪೊಲೀಸ್ ಅಧಿಕಾರಿಗಳ ತಂಡ ಆರೋಪಿಗಳ ಸುಳಿವು ಪತ್ತೆಯ ಕಾರ್ಯವನ್ನು ಮಾಡಿದ್ದರು. ಘಟನಾ ಸ್ಥಳದಲ್ಲಿ ಸಿಕ್ಕ ಮಾಹಿತಿಯನ್ನು ಕಲೆ ಹಾಕಿದ್ದಾರೆ. ಸ್ಥಳದಲ್ಲಿ ಮದ್ಯದ ಬಾಟಲಿ, ಬಸ್ ಟಿಕೆಟ್ ಜೊತೆಗೆ ಘಟನೆ ನಡೆದ ಸಮಯದಲ್ಲಿನ ಸಮೀಪದ ಮೊಬೈಲ್ ಟವರ್ ಮೂಲಕ ಯಾವೆಲ್ಲಾ ಮೊಬೈಲ್ ಸಂಖ್ಯೆ ಕಾರ್ಯನಿರ್ವಹಿಸಿದೆ ಅನ್ನೋ ಮಾಹಿತಿಯನ್ನು ಪಡೆದುಕೊಂಡಿದ್ದಾರೆ.
ಸುಳಿವುಕೊಟ್ಟ ಮದ್ಯದ ಬಾಟಲಿ, ಬಸ್ ಟಿಕೆಟ್
ಆರೋಪಿಗಳು ಘಟನೆ ನಡೆದ ನಂತರದಲ್ಲಿ ಗೂಡ್ಸ್ ವಾಹನದ ಮೂಲಕ ಮೈಸೂರಿನಿಂದ ತಾಳವಾಡಿಗೆ ತೆರಳಿದ್ದರು. ಯುವಕ ಹಾಗೂ ಯುವತಿಯ ಮೊಬೈಲ್‌ಗಳನ್ನು ಕಿತ್ತುಕೊಂಡು ಕಾಮುಕರು ಪರಾರಿಯಾಗಿದ್ದರು. ಸ್ಥಳದಲ್ಲಿ ಯಾವುದೇ ಸಿಸಿ ಕ್ಯಾಮರಾ ದೃಶ್ಯಾವಳಿ ಪತ್ತೆಯಾಗಿರಲಿಲ್ಲ. ಜೊತೆಗೆ ಯಾವುದೇ ಖಚಿತ ಸುಳಿವು ಸಿಗದೇ ಇರೋದು ಪೊಲೀಸರ ತನಿಖೆಗೆ ಹಿನ್ನಡೆಯಾಗಿತ್ತು.
ಇದನ್ನೂ ಓದಿ : Mysore : ಸತ್ಯಮಂಗಲದಿಂದ ಮೈಸೂರಿಗೆ ಆರೋಪಿಗಳು : ಸಂತ್ರಸ್ತೆ ಆಸ್ಪತ್ರೆಯಿಂದ ಡಿಸ್ಚಾರ್ಜ್, ಮುಂಬೈ ತೆರಳಿದ ಯುವತಿ
ಆದರೆ ಆರೋಪಿಗಳು ದರೋಡೆ ಮಾಡುವ ಹುನ್ನಾರ ನಡೆಸಿರೋದು ಯುವಕನ ಹೇಳಿಕೆಯಿಂದ ಖಚಿತವಾಗಿತ್ತು. ಇದೊಂದು ದರೋಡೆಯ ಉದ್ದೇಶ ಅನ್ನೋದು ಪೊಲೀಸರಿಗೆ ತಿಳಿಯುತ್ತಲೇ ಎಲ್ಲಾ ಆಂಗಲ್‌ನಲ್ಲಿಯೂ ತನಿಖೆಯನ್ನು ಚುರುಕುಗೊಳಿಸಿದ್ದರು. ಸ್ಥಳದಲ್ಲಿ ಸಿಕ್ಕಿರುವ ಮದ್ಯದ ಬಾಟಲಿಯ ಬಾರ್ ಕೋಡ್ ಮೂಲಕ ಖರೀದಿ ಮಾಡಿದ ಸ್ಥಳವನ್ನು ಪತ್ತೆ ಹಚ್ಚಿದ್ದರು. ಅಲ್ಲದೇ ಬಸ್ ಟಿಕೆಟ್ ತಾಳವಾಡಿ ಸ್ಥಳದ ಮಾಹಿತಿ ನೀಡಿತ್ತು.
ಇದನ್ನೂ ಓದಿ : ಮೈಸೂರು ಗ್ಯಾಂಗ್‌ರೇಪ್ ಪ್ರಕರಣ : ಐವರು ಆರೋಪಿಗಳು ಅರೆಸ್ಟ್ ; ಕಾರ್ಯಾಚರಣೆ ಯಶಸ್ವಿ ಎಂದ ಗೃಹ ಸಚಿವರು
ಕಾಮುಕರು ತಾಳವಾಡಿಯಲ್ಲಿ ಮೊಬೈಲ್ ಸ್ವಿಚ್ ಆನ್ ಆಗುತ್ತಲೇ ಪೊಲೀಸರು ಕಾಮುಕರನ್ನು ಸೆರೆ ಹಿಡಿದಿದ್ದಾರೆ. ಕಗ್ಗಂಟಾಗಿದ್ದ ಸಾಮೂಹಿಕ ಅತ್ಯಾಚಾರ ಪ್ರಕರಣವನ್ನು ಕೇವಲ ಐದೇ ಐದೇ ದಿನಗಳಲ್ಲಿ ಪತ್ತೆ ಹಚ್ಚಿರುವ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ಇದನ್ನೂ ಓದಿ : ಮೈಸೂರು ಸಾಮೂಹಿಕ ಅತ್ಯಾಚಾರ ಪ್ರಕರಣ : ಪೊಲೀಸರ ಮುಂದೆ ಸಂತ್ರಸ್ತೆಯ ಸ್ನೇಹಿತನ ಹೇಳಿದ್ದೇನು ಗೊತ್ತಾ ?