Deepika Padukone: ಕಿರುತೆರೆಯಲ್ಲಿ ಸ್ಪೆಶಲ್ ಧಮಾಕಾ: ಒಂದಾಗಿ ತೆರೆ ಮೇಲೆ ಬರ್ತಿದ್ದಾರೆ ದೀಪಿಕಾ ಪಡುಕೋಣೆ-ಬಿಗ್ ಬಿ

ಹಿರಿತೆರೆಯಲ್ಲಿ ಹಲವು ಸಿನಿಮಾಗಳಲ್ಲಿ ಬಿಗ್ ಬೀ ಹಾಗೂ ದೀಪಿಕಾ ಪಡುಕೋಣೆಯನ್ನು ಒಂದಾಗಿ ನೋಡೋ ಛಾನ್ಸ್ ಪ್ರೇಕ್ಷಕರಿಗೆ ಸಿಕ್ಕಿದೆ. ಈಗ ಕಿರುತೆರೆ ಪ್ರೇಕ್ಷಕರಿಗೂ  ಈ ಅವಕಾಶ ಸಿಕ್ಕಿದ್ದು, ಅಮಿತಾಬ್ ಬಚ್ಚನ್ ಸ್ಪೆಶಲ್ ಶೋ  ಕೌನ್ ಬನೇಗಾ ಕರೋಡ್ ಪತಿಯಲ್ಲಿ ಸ್ಪೆಶಲ್ ಗೆಸ್ಟ್  ಆಗಿ ದೀಪಿಕಾ ತೆರೆಗೆ ಬರಲಿದ್ದಾರೆ.

ಬಿಗ್ ಬೀ ಅಮಿತಾಬ್ ಬಚ್ಚನ್ ನಡೆಸಿಕೊಡುವ  ಕೌನ್ ಬನೇಗಾ ಕರೋಡ್  ಪತಿ ಶೋದ 13 ನೇ ಸೀಸನ್ ಹೊಸ ರೂಪದಲ್ಲಿ ಆರಂಭವಾಗುತ್ತಿದ್ದು, ಹಲವು ಬದಲಾವಣೆಗಳೊಂದಿಗೆ ಶೋವನ್ನು ಮತ್ತೆ ತೆರೆಗೆ ತರಲಾಗುತ್ತಿದೆ. ಈ ಶೋದಲ್ಲಿ ಇನ್ಮುಂದೆ  ಸ್ಪರ್ಧಿಗಳ ಜೊತೆಗೆ ಸ್ಪೆಶಲ್ ಗೆಸ್ಟ್ ಕೂಡ ಇರಲಿದ್ದಾರೆ.

ಶಾಂದಾರ್ ಶುಕ್ರವಾರ ಹೆಸರಿನಲ್ಲಿ ಶುಕ್ರವಾರ ಸ್ಪೆಶಲ್ ಗೆಸ್ಟ್ ಕೌನ್ ಬನೇಗಾ ಕರೋಡಪತಿ ಶೋದಲ್ಲಿ ಪಾಲ್ಗೊಳ್ಳಲಿದ್ದಾರೆ. ಮುಂದಿನ ಶುಕ್ರವಾರದ ಶೋದಲ್ಲಿ ದೀಪಿಕಾ ಪಡುಕೋಣೆ ಅತಿಥಿಯಾಗಿ ಶೋದಲ್ಲಿ ಇರಲಿದ್ದಾರೆ.

ದೀಪಿಕಾ ಮತ್ತು ಬಿಗ್ ಬೀ ಅಮಿತಾಬ್ ಬಚ್ಚನ್ ನಡುವೆ ಒಳ್ಳೆಯ ಕೆಮೆಸ್ಟ್ರಿ ಇದೆ. ಇಬ್ಬರೂ ಒಂದಾಗಿ ತೆರೆ ಮೇಲೆ ಕಾಣಿಸಿಕೊಂಡಿರುವ ಪೀಕು ಸಿನಿಮಾ ಸಖತ್ ಸದ್ದು ಮಾಡಿತ್ತು. ಇದಲ್ಲದೇ ಆರಕ್ಷಣ್ ದಲ್ಲಿ ಇಬ್ಬರೂ ಜೊತೆಯಾಗಿ ಕಾಣಿಸಿಕೊಂಡಿದ್ದರು. ಓಂ ಶಾಂತಿ ಓಂ, ಹ್ಯಾಪಿ ನ್ಯೂ ಇಯರ್ ಸಿನಿಮಾದಲ್ಲಿ ಅತಿಥಿ ಪಾತ್ರದಲ್ಲಿ ನಟಿಸಿದ್ದರು.

ಸದ್ಯ 2022 ರಲ್ಲಿ ಆರಂಭವಾಗೋ ತೆಲುಗು ಸಿನಿಮಾದಲ್ಲಿ ಅಮಿತಾಬ್ ಬಚ್ಚನ್ ಹಾಗೂ ದೀಪಿಕಾ ಪಡುಕೋಣೆ  ಒಟ್ಟಿಗೆ ನಟಿಸಲಿದ್ದಾರೆ. ಶಾರೂಕ್ ಖಾನ್ ಜೊತೆ ಪಠಾಣ ಸಿನಿಮಾದಲ್ಲಿ ದೀಪಿಕಾ ನಟಿಸುತ್ತಿದ್ದು, 83 ಸಿನಿಮಾ ರಿಲೀಸ್ ಗೆ ಸಿದ್ಧವಾಗಿದೆ.  

Comments are closed.