Sudeep Birthday: ಹೆಬ್ಬುಲಿ ಫ್ಯಾನ್ಸ್ ಗೆ ಈ ವರ್ಷವೂ ಎದುರಾಯ್ತು ನಿರಾಸೆ: ನೋ ಬರ್ತಡೇ ಸೆಲಿಬ್ರೇಶನ್ ಎಂದ ಕಿಚ್ಚ

ಕೊರೋನಾ ಸಂಕಷ್ಟ ಕೇವಲ ಸಿನಿಮಾ ರಿಲೀಸ್ ಮೇಲೆ ಮಾತ್ರವಲ್ಲ ಅಭಿಮಾನಿಗಳ ಖುಷಿಯ ಮೇಲೂ ಪ್ರಭಾವ ಬೀರಿದೆ. ವರ್ಷಪೂರ್ತಿ ಕಾದಿದ್ದು, ತಮ್ಮ ಫೆವರಿಟ್ ಹೀರೋ ಬರ್ತಡೇ ಸೆಲಿಬ್ರೇಟ್ ಮಾಡೋಕೆ ನೂರಾರು ಕಿಲೋಮೀಟರ್ ದೂರದಿಂದ ಬರೋ ಅಭಿಮಾನಕ್ಕೆ ಕೊರೋನಾ ಬ್ರೇಕ್ ಹಾಕಿದ್ದು, ಸ್ಟಾರ್ ಗಳು ಬರ್ತಡೇ ಸೆಲಿಬ್ರೇಶನ್ ನ್ನೇ ಬಿಟ್ಟು ಬಿಟ್ಟಿದ್ದಾರೆ.

ಕಳೆದ ವರ್ಷವೂ ಕೊರೋನಾ ಕಾರಣಕ್ಕೆ ಅದ್ದೂರಿ ಹುಟ್ಟುಹಬ್ಬದಿಂದ ದೂರ ಉಳಿದ ನಟ ಸುದೀಪ್ ಈ ವರ್ಷವೂ ಹುಟ್ಟುಹಬ್ಬಕ್ಕೆ ದಿನಗಣನೆ ನಡೆದಿರುವಾಗ ಅಭಿಮಾನಿಗಳಿಗೆ ನಿರಾಸೆಯ ಸುದ್ದಿ ಹೇಳಿದ್ದಾರೆ. ಈ ವರ್ಷವೂ ಸಾರ್ವಜನಿಕವಾಗಿ ಹುಟ್ಟುಹಬ್ಬ ಆಚರಿಸಿಕೊಳ್ಳುವುದಿಲ್ಲ ಎಂದಿರುವ ಸುದೀಪ್, ನೀವಿದ್ದಲ್ಲಿಂದಲೇ ಶುಭಹಾರೈಸಿ ಎಂದು ಮನವಿ ಮಾಡಿದ್ದಾರೆ.

ಕೊರೋನಾ ಎರಡನೇ ಅಲೆಯ ಪ್ರಭಾವ ತಗ್ಗಿದ್ದರೂ ತಜ್ಞರು ಮೂರನೇ ಅಲೆಯ  ಎಚ್ಚರಿಕೆ ನೀಡಿದ್ದಾರೆ. ಹೀಗಾಗಿ ಸರ್ಕಾರ ಸಾಕಷ್ಟು ಕೊರೋನಾ ನಿಯಮಗಳನ್ನು ಜಾರಿಗೆ ತಂದಿದೆ. ಈ ನಿಯಮಗಳನ್ನು ಪಾಲಿಸುವ ಉದ್ದೇಶದಿಂದ ಹಾಗೂ ಅಭಿಮಾನಿಗಳ ಹಿತದ ದೃಷ್ಟಿಯಿಂದ ಹುಟ್ಟುಹಬ್ಬ ಅದ್ದೂರಿಯಾಗಿ ಆಚರಿಸಿಕೊಳ್ಳದಿರಲು ಸುದೀಪ್ ನಿರ್ಧರಿಸಿದ್ದಾರಂತೆ.

ಸಿನಿಮಾ ವಿಚಾರಕ್ಕೆ ಬಂದ್ರೇ ಸುದೀಪ್ ಬಹುನೀರಿಕ್ಷಿತ ಕೋಟಿಗೊಬ್ಬ-3 ಸಿನಿಮಾದ ರಿಲೀಸ್ ಡೇಟ್ ಸುದೀಪ್ ಬರ್ತಡೇಯಂದು ಅನೌನ್ಸ್ ಆಗೋ ಛಾನ್ಸ್ ಇದೆ. ಇನ್ನು ವಿಕ್ರಾಂತ್ ರೋಣ ಕೂಡ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದ್ದು, ಮುಂದಿನ ಸಿನಿಮಾಕ್ಕೆ ಸುದೀಪ್ ಸಿದ್ಧತೆ ನಡೆಸಿದ್ದಾರೆ.

Comments are closed.