Bus truck accident: ಬಸ್‌ಗೆ ಟ್ರಕ್ ಢಿಕ್ಕಿ: ಒಂದೇ ಕುಟುಂಬದ 4 ಮಂದಿ ಸೇರಿದಂತೆ 7 ಸಾವು

ಅಂಬಾಲಾ: (Bus truck accident) ಯಮುನಾ ನಗರ-ಪಂಚಕುಲ ಹೆದ್ದಾರಿಯಲ್ಲಿ ಬಸ್‌ಗೆ ಟ್ರೇಲರ್ ಟ್ರಕ್ ಢಿಕ್ಕಿ ಹೊಡೆದ ಪರಿಣಾಮ ಒಂದೇ ಕುಟುಂಬದ ನಾಲ್ವರು ಸೇರಿದಂತೆ ಏಳು ಮಂದಿ ಸಾವನ್ನಪ್ಪಿದ್ದು, ನಾಲ್ವರು ಗಾಯಗೊಂಡಿರುವ ಘಟನೆ ನಡೆದಿದೆ. ಉತ್ತರ ಪ್ರದೇಶದ (ಯುಪಿ) ಬರೇಲಿಯಿಂದ ಬಸ್ ಹಿಮಾಚಲ ಪ್ರದೇಶದ ಕೈಗಾರಿಕಾ ಪಟ್ಟಣವಾದ ಬಡ್ಡಿಗೆ ತೆರಳುತ್ತಿದ್ದಾಗ ಶಹಜಾದ್‌ಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ದುರ್ಘಟನೆ ಸಂಭವಿಸಿದ್ದು, ಗಾಯಾಳುಗಳನ್ನು ಸಮೀಪದ ಆಸ್ಪತ್ರೆಗೆ ರವಾನಿಸಲಾಗಿದೆ.

ಲೋಡ್ ಮಾಡಿದ ಟ್ರೈಲರ್ ಟ್ರಕ್ ಚಲಿಸುತ್ತಿದ್ದ ಬಸ್‌ಗೆ ಹಿಂದಿನಿಂದ ಢಿಕ್ಕಿ ಹೊಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಪರಿಣಾಮ ಟ್ರೇಲರ್‌ ಟ್ರಕ್ಕ್‌ ಪಲ್ಟಿಯಾಗಿದೆ. ದುರಾದೃಷ್ಟವಶಾತ್‌ ಎರಡು ವಾಹನಗಳ ಚಾಲಕರು ಅಪಾಯದಿಂದ ಪಾರಾಗಿದ್ದಾರೆ. ಘಟನೆಯಲ್ಲಿ ಒಂದೇ ಕುಟುಂಬದ ನಾಲ್ವರು ಸೇರಿದಂತೆ ಒಟ್ಟು ಏಳು ಮಂದಿ ಸಾವನ್ನಪ್ಪಿದ್ದಾರೆ. ಸಾವನ್ನಪ್ಪಿದವರಲ್ಲಿ ದಂಪತಿಗಳು – ಜ್ವಾಲಾ (34 ವರ್ಷ), ರಿಂಕಿ (32 ವರ್ಷ) ಮತ್ತು ಅವರ ಇಬ್ಬರು ಮಕ್ಕಳು ಪ್ರಿನ್ಸ್ (8ವರ್ಷ) ಮತ್ತು ಪ್ರಶಾಂತ್ (6 ವರ್ಷ) ಯುಪಿಯ ಸಂಭಾಲ್ ಜಿಲ್ಲೆಯವರು ಎಂದು ಗುರುತಿಸಲಾಗಿದೆ. ಇನ್ನಿಬ್ಬರು ಮೃತರನ್ನು ಯುಪಿಯ ಬುಡೌನ್‌ನ ರಾಹಿಶ್ ಖಾನ್ ಮತ್ತು ಬದನ್ ಸಿಂಗ್ ಎಂದು ಗುರುತಿಸಲಾಗಿದ್ದು, ಇನ್ನೋರ್ವನ ಗುರುತು ಪತ್ತೆಯಾಗಿಲ್ಲ.

ವರದಿಯ ಪ್ರಕಾರ, ಬಾಗ್ಪತ್-ನೋಂದಾಯಿತ ಸ್ಲೀಪರ್ ಬಸ್‌ನಲ್ಲಿ ಹೆಚ್ಚಿನ ಪ್ರಯಾಣಿಕರು ಮತ್ತು ವಲಸೆ ಕಾರ್ಮಿಕರು ಕೆಲಸಕ್ಕೆ ಮರಳುತ್ತಿದ್ದರು. ಈ ಸಂದರ್ಭದಲ್ಲಿ ಅಪಘಾತ ಸಂಭವಿಸಿದೆ. ಟ್ರಕ್ ಚಾಲಕ ಚಂದರ್ ಮೋಹನ್ ಮತ್ತು ಬಸ್ ಚಾಲಕ ಫುರ್ಕಾನ್ ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಹಿಂದೂಸ್ತಾನ್‌ ಟೈಮ್ಸ್‌ನಲ್ಲಿ ವರದಿಯಾಗಿದೆ. ಇದೀಗ ಟ್ರಕ್ ಮತ್ತು ಬಸ್ ಚಾಲಕರಿಬ್ಬರ ವಿರುದ್ದ ಸೆಕ್ಷನ್ 304, 279, 283,337,338 ಮತ್ತು 304-ಎ ಅಡಿಯಲ್ಲಿ ಶಹಜಾದ್‌ಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಘಟನೆಯ ಬಳಿಕ ಹೆದ್ದಾರಿಯಲ್ಲಿ ಸಂಚಾರ ದಟ್ಟಣೆಯಾಗಿದ್ದು, ಕೆಲವು ಸಮಯಗಳ ಕಾಲ ಸಂಚಾರ ಸ್ಥಗಿತಗೊಂಡಿದೆ.

ಇದನ್ನೂ ಓದಿ : ಶಾಲಾ ಶುಲ್ಕ ಪಾವತಿಸದ ಕಾರಣ ಪರೀಕ್ಷಾ ಹಾಲ್ ಪ್ರವೇಶ ನಿರಾಕರಣೆ: ಮನನೊಂದ ವಿದ್ಯಾರ್ಥಿನಿ ಆತ್ಮಹತ್ಯೆ

Bus truck accident: Truck collides with bus: 7 dead including 4 members of the same family

Comments are closed.